ETV Bharat / science-and-technology

ಭೂಮಿಗೆ ಅಪ್ಪಳಿಸಲಿದೆ ನಿಷ್ಕ್ರಿಯ ಉಪಗ್ರಹ: ನಾಸಾ ಹೇಳಿದ್ದೇನು? - ನಿಷ್ಕ್ರಿಯಗೊಂಡಿರುವ ನಾಸಾ ದ ಸ್ಯಾಟಲೈಟ್​

ಸುಮಾರು 21 ವರ್ಷಗಳ ಹಿಂದೆ ನಾಸಾ ಹಾರಿಬಿಟ್ಟ ಉಪಗ್ರಹವೊಂದು ಇದೇ ತಿಂಗಳಲ್ಲಿ ಮರಳಿ ಭೂಮಿಗೆ ಅಪ್ಪಳಿಸಲಿದೆ. ನಿಷ್ಕ್ರಿಯಗೊಂಡಿರುವ ಈ ಉಪಗ್ರಹ ಭೂಕಕ್ಷೆಗೆ ಪ್ರವೇಶಿಸುವುದರಿಂದ ಮಾನವ ಕುಲಕ್ಕೆ ಯಾವುದೇ ಹಾನಿಯಾಗದು ಎಂದು ನಾಸಾ ತಿಳಿಸಿದೆ.

Dead satellite to crash into Earth on Wednesday, no threat to humans: NASA

author img

By

Published : Apr 18, 2023, 6:12 PM IST

ವಾಷಿಂಗ್ಟನ್​: ರುವೆನ್ ರಮಾಟಿ ಹೈ ಎನರ್ಜಿ ಸೋಲಾರ್ ಸ್ಪೆಕ್ಟ್ರೋಸ್ಕೊಪಿಕ್ ಇಮೇಜರ್ (Reuven Ramaty High Energy Solar Spectroscopic Imager -RHESSI) ಹೆಸರಿನ, ಸದ್ಯ ನಿಷ್ಕ್ರಿಯಗೊಂಡಿರುವ ನಾಸಾ ದ ಸ್ಯಾಟಲೈಟ್​ ಏಪ್ರಿಲ್​ನಲ್ಲಿ ಮರಳಿ ಭೂಕಕ್ಷೆಗೆ ಪ್ರವೇಶಿಸುವ ಸಾಧ್ಯತೆಯಿದೆ. ಇದನ್ನು ಸುಮಾರು 21 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಭೂಮಿಗೆ ಅಪ್ಪಳಿಸಲಿರುವ ಈ ಉಪಗ್ರಹದಿಂದ ಮಾನವ ಸಂಕುಲಕ್ಕೆ ಯಾವುದೇ ಹಾನಿಯಾಗುವ ಸಾಧ್ಯತೆಗಳಿಲ್ಲ ಎಂದು ನಾಸಾ ಹೇಳಿದೆ.

2002 ರಲ್ಲಿ ಹಾರಿಬಿಡಲಾದ RHESSI ಉಪಗ್ರಹವು ತನ್ನ ಕಡಿಮೆ ಭೂಮಿಯ ಕಕ್ಷೆಯಿಂದ ಸೌರ ಜ್ವಾಲೆಗಳು ಮತ್ತು ಕರೋನಲ್ ದ್ರವ್ಯರಾಶಿಯ ಹೊರಸೂಸುವಿಕೆಯನ್ನು ಪರಿಶೀಲನೆ ಮಾಡಿತ್ತು. ಶಕ್ತಿಯ ಅಂಥ ಪ್ರಬಲ ಸ್ಫೋಟಗಳು ಹೇಗೆ ಸಂಭವಿಸುತ್ತವೆ ಎಂಬುದರ ಭೌತಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಈ ಮಾಹಿತಿಗಳು ಸಹಾಯ ಮಾಡಿದ್ದವು.

660 ಪೌಂಡ್ ತೂಕದ ಬಾಹ್ಯಾಕಾಶ ನೌಕೆಯು ಸರಿಸುಮಾರು ರಾತ್ರಿ 9:30 ಕ್ಕೆ ಇಡಿಟಿ ಸಮಯ (ಬೆಳಗ್ಗೆ 7 ಗಂಟೆಗೆ IST)ದಲ್ಲಿ ಮತ್ತೆ ಭೂಮಿಯ ವಾತಾವರಣ ಪ್ರವೇಶಿಸಲಿದೆ ಎಂದು ಉಪಗ್ರಹವನ್ನು ಮೇಲ್ವಿಚಾರಣೆ ಮಾಡುತ್ತಿರುವ ಯುಎಸ್ ರಕ್ಷಣಾ ಇಲಾಖೆ ಹೇಳಿದೆ. ಆದಾಗ್ಯೂ ಈ ನಿರೀಕ್ಷಿತ ಸಮಯದಲ್ಲಿ ಬದಲಾವಣೆಯಾಗಬಹುದು. ಭೂಮಿಯ ವಾತಾವರಣದ ಮೂಲಕ ಪ್ರಯಾಣಿಸುವಾಗ ಹೆಚ್ಚಿನ ಬಾಹ್ಯಾಕಾಶ ನೌಕೆಗಳು ಸುಟ್ಟುಹೋಗುತ್ತವೆ ಎಂದು ನಾಸಾ ನಿರೀಕ್ಷಿಸಿದೆ. ಆದರೂ ಹಾಗೆ ಸುಟ್ಟು ಹೋದ ಉಪಗ್ರಹದ ಕೆಲ ಭಾಗಗಳು ಭೂಮಿಗೆ ಅಪ್ಪಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಉಪಗ್ರಹವು ಭೂಕಕ್ಷೆಗೆ ಬರುವುದರಿಂದ ಭೂಮಿಯ ಮೇಲೆ ಯಾರಿಗಾದರೂ ಹಾನಿಯಾಗುವ ಅಪಾಯ ತಿರಾ ಕಡಿಮೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ.

ಸೌರ ಜ್ವಾಲೆಗಳಲ್ಲಿ ಬಿಡುಗಡೆಯಾದ ಶಕ್ತಿಯ ಹೆಚ್ಚಿನ ಭಾಗವನ್ನು ಸಾಗಿಸುವ ಎಲೆಕ್ಟ್ರಾನ್‌ಗಳ ಚಿತ್ರಗಳನ್ನು ಸೆರೆಹಿಡಿಯುವ ಉದ್ದೇಶದಿಂದ ಈ ಬಾಹ್ಯಾಕಾಶ ನೌಕೆಯನ್ನು ಆರ್ಬಿಟಲ್ ಸೈನ್ಸಸ್ ಕಾರ್ಪೊರೇಶನ್ ಪೆಗಾಸಸ್ XL ರಾಕೆಟ್‌ನಿಂದ ಉಡಾವಣೆ ಮಾಡಲಾಗಿತ್ತು. ಇದು ತಾನು ಹೊಂದಿದ್ದ ಏಕೈಕ ಸಾಧನವಾದ ಇಮೇಜಿಂಗ್ ಸ್ಪೆಕ್ಟ್ರೋಮೀಟರ್‌ನಿಂದ ಆ ಕೆಲಸ ಮಾಡಿತ್ತು. ಇದು ಸೂರ್ಯನಿಂದ ಎಕ್ಸ್ ರೇಗಳು ಮತ್ತು ಗಾಮಾ ರೇ ಗಳನ್ನು ದಾಖಲಿಸುತ್ತದೆ. RHESSI ಗಿಂತ ಮೊದಲು ಸೌರ ಜ್ವಾಲೆಗಳಿಂದ ಯಾವುದೇ ಗಾಮಾ ರೇ ಚಿತ್ರಗಳು ಅಥವಾ ಹೆಚ್ಚಿನ ಶಕ್ತಿಯ ಎಕ್ಸ್-ರೇ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ.

RHESSI ಯ ದತ್ತಾಂಶವು ಸೌರ ಜ್ವಾಲೆಗಳು ಮತ್ತು ಅವುಗಳ ಸಂಬಂಧಿತ ಕರೋನಲ್ ಮಾಸ್ ಇಜೆಕ್ಷನ್‌ಗಳ ಬಗ್ಗೆ ಪ್ರಮುಖ ಸುಳಿವುಗಳನ್ನು ಒದಗಿಸಿದೆ. ಈ ಘಟನೆಗಳು ಶತಕೋಟಿ ಮೆಗಾಟನ್ ಟಿಎನ್‌ಟಿಗೆ ಸಮಾನವಾದ ಶಕ್ತಿಯನ್ನು ನಿಮಿಷಗಳಲ್ಲಿ ಸೌರ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ ಮತ್ತು ವಿದ್ಯುತ್ ವ್ಯವಸ್ಥೆಗಳ ಅಡ್ಡಿ ಸೇರಿದಂತೆ ಭೂಮಿಯ ಮೇಲೆ ಪರಿಣಾಮ ಬೀರಬಹುದು. ಅವುಗಳನ್ನು ಅರ್ಥಮಾಡಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ.

ತನ್ನ ಕಾರ್ಯಾಚರಣೆಯ ಅವಧಿಯಲ್ಲಿ, RHESSI 100,000 ಕ್ಕೂ ಹೆಚ್ಚು ಎಕ್ಸ್-ರೇ ಘಟನೆಗಳನ್ನು ದಾಖಲಿಸಿದೆ. ಸೌರ ಜ್ವಾಲೆಗಳಲ್ಲಿನ ಶಕ್ತಿಯುತ ಕಣಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಅವಕಾಶ ಮಾಡಿಕೊಟ್ಟಿತು. ಇಮೇಜರ್ ಕಣಗಳ ಆವರ್ತನ, ಸ್ಥಳ ಮತ್ತು ಚಲನೆಯನ್ನು ನಿರ್ಧರಿಸಲು ಸಂಶೋಧಕರಿಗೆ ಇದು ಸಹಾಯ ಮಾಡಿತು. ಇದರಿಂದ ಕಣಗಳು ಎಲ್ಲಿ ವೇಗಗೊಳ್ಳುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಯಿತು.

ಇದನ್ನೂ ಓದಿ : ನಿರೀಕ್ಷೆ ಮೀರಿ ಬೆಳೆದ ಚೀನಾ ಆರ್ಥಿಕತೆ: ಕೊರೊನಾ ಬಿಕ್ಕಟ್ಟಿನಿಂದ ಹೊರಬಂದ ಡ್ರ್ಯಾಗನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.