ETV Bharat / science-and-technology

SIM BINDING ಭದ್ರತಾ ಪೀಚರ್​​ ಬಿಡುಗಡೆ ಮಾಡಿದ SBI - ಯೋನೊ ಲೈಟ್ ಸಿಮ್ ಬೈಂಡಿಂಗ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಹಿತಾಸಕ್ತಿ ಕಾಪಾಡಲು ಯೊನೊ ಮತ್ತು ಯೊನೊ ಲೈಟ್‌ನಲ್ಲಿ ಹೊಸ ಮತ್ತು ವರ್ಧಿತ ಭದ್ರತಾ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.

ಎಸ್​ಬಿಐ
SBI
author img

By

Published : Aug 2, 2021, 8:58 PM IST

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಬ್ಯಾಂಕ್. ತನ್ನ ಗ್ರಾಹಕರ ಹಿತಾಸಕ್ತಿ ಕಾಪಾಡಲು ಯೋನೊ ಮತ್ತು ಯೊನೊ ಲೈಟ್‌ನಲ್ಲಿ ಹೊಸ ಮತ್ತು ವರ್ಧಿತ ಭದ್ರತಾ ಪೀಚರ್​ಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾಟ್‌ಫಾರ್ಮ್‌ಗಳ ಹೊಸ ಆವೃತ್ತಿಯು ಗ್ರಾಹಕರನ್ನು ವಿವಿಧ ಡಿಜಿಟಲ್ ವಂಚನೆಗಳಿಂದ ರಕ್ಷಿಸುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸಿಮ್​​​ ಬೈಂಟಿಂಗ್​ (SIM Binding) ಯೊನೊ ಮತ್ತು ಯೋನೊ ಲೈಟ್​​ ಬ್ಯಾಂಕಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗಳ ಸಿಮ್ ಹೊಂದಿರುವ ಸಾಧನಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಯೋನೊ ಮತ್ತು ಯೋನೊ ಲೈಟ್‌ನ ಹೊಸ ಆವೃತ್ತಿಯನ್ನು ಪಡೆಯಲು ಬಳಕೆದಾರರು ತಮ್ಮ ಮೊಬೈಲ್ ಅಪ್ಲಿಕೇಷನ್ ಅನ್ನು ಅಪ್ಡೇಟ್​​ ಮಾಡಬೇಕಾಗಿದೆ.

ಈ ಆ್ಯಪ್​​​ನಲ್ಲಿ ಒಂದು ಬಾರಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನೋಂದಣಿ ಪ್ರಕ್ರಿಯೆ ನೋಂದಾಯಿಸುವ ಪ್ರಕ್ರಿಯೆಯು ನೋಂದಾಯಿತ ಮೊಬೈಲ್ ಸಂಖ್ಯೆಯ (RMN) ಸಿಮ್ ಅನ್ನು ಬ್ಯಾಂಕಿನೊಂದಿಗೆ ಪರಿಶೀಲಿಸುತ್ತದೆ. ಗ್ರಾಹಕರು ನೋಂದಾಯಿತ ಸಂಪರ್ಕ ಸಂಖ್ಯೆಯ ಸಿಮ್ ಹೊಂದಿರುವ ಸಾಧನದಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.

ಓದಿ: ಐಪಿಒಗೆ Policy bazaar ನಿಂದ ಸೆಬಿಗೆ 6,017.5-ಕೋಟಿ ರೂ. ಕರಡು ದಾಖಲೆ ಸಲ್ಲಿಕೆ

ಯೊನೊ ಮತ್ತು ಯೊನೊ ಲೈಟ್ ಒಂದು ಮೊಬೈಲ್ ಸಾಧನ - ಒಂದು ಬಳಕೆದಾರ - ಒಂದು RMN ನ ಮೂಲ ನಿಯಮದೊಂದಿಗೆ ಕೆಲಸ ಮಾಡುತ್ತದೆ. ಆದಾಗ್ಯೂ ಗ್ರಾಹಕರು ಬ್ಯಾಂಕಿನೊಂದಿಗೆ RMN ನ ಸಿಮ್ ಬಳಸಿ ಒಂದೆ ಮೊಬೈಲ್ ಸಾಧನದಲ್ಲಿ ಯೊನೊ ಮತ್ತು ಯೊನೊ ಲೈಟ್ ಎರಡನ್ನೂ ಬಳಸಬಹುದು.

ಒಂದು ವೇಳೆ ಗ್ರಾಹಕರು ಬ್ಯಾಂಕಿನಲ್ಲಿ ನೋಂದಾಯಿಸದ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿದ್ದರೆ, ಅವರು ಯೊನೊ ಮತ್ತು ಯೊನೊ ಲೈಟ್​​ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಹೊಸ ಸಿಮ್ ಬೈಂಡಿಂಗ್ ವೈಶಿಷ್ಟ್ಯವು ಎರಡು ವಿಭಿನ್ನ ಬಳಕೆದಾರರಿಗೆ ಯೊನೊ ಮತ್ತು ಯೊನೊ ಲೈಟ್ ಅನ್ನು ಪ್ರತ್ಯೇಕವಾಗಿ ಡ್ಯುಯಲ್ ಸಿಮ್ ಹ್ಯಾಂಡ್‌ಸೆಟ್‌ನಲ್ಲಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಎರಡೂ ಬಳಕೆದಾರರ RMN ನ ಸಿಮ್‌ಗಳನ್ನು ಸಾಧನದಲ್ಲಿ ಸೇರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.