ಹಾಂಗ್ ಕಾಂಗ್: ಚಾಟ್‌ಜಿಪಿಟಿ ಯಶಸ್ಸು ದಿನಂದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೃತಕ ಬುದ್ಧಿಮತ್ತೆ ಬಳಸಿಕೊಂಡು ತಯಾರಿಸಿದ ಚಾಟ್ ಜಿಪಿಟಿಗೆ ಜನರು ಮನ ಸೋತಿದ್ದರೆ, ಇದು ತಂತ್ರಜ್ಞಾನ ಪ್ರಿಯರಿಗೆ ಸವಾಲು ಒಡ್ಡಿದೆ. ಈಗಾಗಲೇ ಚಾಟ್ಜಿಪಿಟಿಯ ಯಶಸ್ಸಿನಿಂದ ಕಂಗೆಟ್ಟಿರುವ ಗೂಗಲ್ ಇದಕ್ಕೆ ಪ್ರತಿಸ್ಪರ್ಧಿಯಾಗಿ ಕೃತ್ತಕ ಬುದ್ಧಿಮತ್ತೆ ಬಳಸಿಕೊಂಡು ಚಾಟ್ಬೂಟ್ ರಚಿಸಲು ಪ್ರಯತ್ನಿಸುತ್ತಿದೆ. ಇಡೀ ಜಗತನ್ನೇ ಬೆರಗುಗೊಳಿಸಿರುವ ಚಾಟ್ಜಿಪಿಟಿಗೆ ವಿರುದ್ಧವಾಗಿ ಚೀನಿ ಕಂಪನಿ ಕೂಡ ಎಐ ತಂತ್ರಜ್ಞಾನ ಬಳಸಿ ಪ್ರತಿಸ್ಪರ್ಧೆ ಒಡ್ಡಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಆದರೆ, ಚೀನಿ ತಂತ್ರಜ್ಞಾನರ ಪ್ರಕಾರ ಇದು ಹೆಚ್ಚು ಕಷ್ಟಕರವಾಗಿರಲಿದೆ ಎಂಬ ಮಾತು ಕೇಳಿ ಬಂದಿದೆ. ಈ ಸಂಬಂಧ ಕುರಿತು ತಿಳಿಸಿರುವ ಆಲಿಬಾಬಾ ಮತ್ತು ಟೆನ್ಸೆಂಟ್ನಂತಹ ದೊಡ್ಡ ಸಂಸ್ಥೆಗಳು, ಚೀನಾದಲ್ಲಿ ಈ ರೀತಿಯ ತಂತ್ರಜ್ಞಾನ ಅಭಿವೃದ್ಧಿಗೆ ಸೆನ್ಸಾರ್‌ಶಿಪ್, ವೆಚ್ಚ ಮತ್ತು ಡೇಟಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಬೀಜಿಂಗ್‌ನ ಪುರಸಭೆಯ ತಂತ್ರಜ್ಞಾನ ಬ್ಯೂರೋ ಪ್ರಕಟಿಸಿದ ಪ್ರಕಟಣೆಯಲ್ಲಿ ಚಾಟ್‌ಜಿಪಿಟಿ ಪ್ರತಿಸ್ಪರ್ಧಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಥಳೀಯ ಕಂಪನಿಗಳಿಗೆ ಬೆಂಬಲವನ್ನು ನೀಡಿತು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಚೀನಿ ಭಾಷೆ ಸುಲಭವಲ್ಲ: ಆದರೆ, ವಾಸ್ತವ ಇಲ್ಲಿ ಬೇರೆಯದ್ದೇ ಇದೆ. ಕಾರಣ ಚೀನಾ ಮತ್ತು ಇಂಗ್ಲಿಷ್ ಭಾಷೆಗಳು ತಮ್ಮದೇ ಆದ ಲಕ್ಷಣ ಹೊಂದಿವೆ. ಜೊತೆಗೆ ಇದರ ವೆಚ್ಚ, ಲಭ್ಯತೆ, ಡೇಟಾ ಸೆಟ್ಗಳು, ವಿಶೇವಾಗಿ ಚೀನಾದ ಸೆನ್ಸಾರ್‌ಶಿಪ್ ಭಿನ್ನವಾಗಿದೆ. ಚಾಟ್ಜಿಪಿಟಿಗೆ ಪರ್ಯಾಯವಾಗಿ ಸ್ಥಳೀಯ ಚಾಟ್ ಬೂಟ್ ಅಭಿವೃದ್ಧಿ ಪಡಿಸುವ ಚೀನಾದ ಸಾಮರ್ಥ್ಯಕ್ಕೆ ಸೆನ್ಸಾರ್‌ಶಿಪ್ ಅಡ್ಡವಾಗಲಿದೆ ಎಂದು ಜಾರ್ಜ್ಟೌನ್ ಯುನಿವರ್ಸಿಟಿ ಸೆಂಟರ್ ಫಾರ್ ಸೆಕ್ಯೂರಿಟಿ ಅಂಡ್ಎಮರ್ಜಿಂಗ್ ಟೆಕ್ನಾಲಜಿ ಸಂಶೋಧನಾ ವಿಶ್ಲೇಷಣೆ ದಹ್ಲಿಯಾ ಪಿಟರ್ಸನ್ ತಿಳಿಸಿದ್ದಾರೆ.
ಮಾಹಿತಿ ಹಂಚಿಕೊಳ್ಳುವ ಮುಕ್ತ ವಾತಾವರಣ ಇಲ್ಲ: ಚೀನಾದ ಎಐ ಕಂಪನಿಗಳು, ತಮ್ಮ ಎಐ ಮಾಡೆಲ್ಗೆ ತರಬೇತಿ ನೀಡುವ ಜಾಗತಿಕ ದತ್ತಾಂಶ ಮತ್ತು ಸಂಶೋಧನಾ ಸಂಪನ್ಮೂಲಗಳ ಲಭ್ಯತೆ ಪಡೆಯಬಹುದಾಗಿದೆ. ಚೀನಾ ಅಧಿಕಾರಿಗಳು ರಾಜಕೀಯ ಸೂಕ್ಷ್ಮತೆ ಸೇರಿದಂತೆ ಅನೇಕ ಸೂಕ್ಷ್ಮ ವಿಷಯಗಳನ್ನು ಉತ್ತರವಾಗಿ ನೀಡಲು ಅನುಮತಿ ನೀಡಬೇಕು. ಚೀನಾದಲ್ಲಿ ಕಮ್ಯೂನಿಸ್ಟ್ ಪಕ್ಷ ಆಡಳಿತ ನಡೆಸುತ್ತಿದ್ದು, ದೇಶದಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ಚರ್ಚೆ ನಡೆಸಲು ಕೆಲವು ನಿರ್ಬಂಧಗಳಿವೆ. ಈ ಹಿನ್ನೆಲೆ ಈ ರೀತಿ ಮಾಹಿತಿ ಪಡೆಯುವುದು ಕಷ್ಟವಾಗಲಿದೆ.
ಎಐ ಚಾಟ್ ಮಾಡೆಲ್ಗೆ ತರಬೇತಿ ನೀಡುವ ದತ್ತಾಂಶಗಳನ್ನು ಸೆಟ್ ಮಾಡಲು ನಿಯಂತ್ರಣದ ಮಿತಿ ಇರಲಿದೆ. ಇಲ್ಲಿ ಹೆಚ್ಚಿನ ನಿಯಂತ್ರಣ, ವಿಷಯಗಳ ನಿಯಮಾವಳಿ, ಸೆನ್ಸಾರ್‌ಶಿಪ್ ಅದರ ವಾಣೀಜ್ಯೀಕರಣವನ್ನು ಹತ್ತಿಕ್ಕಬಹುದು. ಅಲಿಬಾಬಾ ಕಂಪನಿಯ ಸಂಶೋಧನಾ ಸಂಸ್ಥೆ ಡಾಮೊ ಅಕಾಡೆಮಿ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ನ ಆಂತರಿಕ ಪರೀಕ್ಷೆಯನ್ನು ನಡೆಸುತ್ತಿದೆ ಎಂದು ಈ ತಿಂಗಳ ಆರಂಭದಲ್ಲಿ ಎಂದು ದೃಢಪಡಿಸಿತ್ತು.
ಈ ಡೆಮೊನಲ್ಲಿ 2021ರಲ್ಲಿ 27 ಬಿಲಿಯನ್ ಪ್ಯಾರಾಮೀಟರ್ ಜೊತೆ ನೈಸರ್ಗಿಕ ಭಾಷಾ ಪ್ರಕ್ರಿಯೆ ಮಾದರಿಯನ್ನು ತೋರಿಸಲಾಗಿತ್ತು. ಇದಾದ ಬಳಿಕ 2020ರಲ್ಲಿ ಓಪನ್ ಎಐ 175 ಬಿಲಿಯನ್ ಪ್ಯಾರಾಮೀಟರ್ನ ಜಿಪಿಟಿ 3ನ್ನು ಬಿಡುಗಡೆ ಮಾಡಿತು. ಚೀನಾ ಭಾಷೆಯ ವಿಶೇಷ ಕ್ಯಾರಕ್ಟರ್ಗಳು ಚಾಟ್‌ಜಿಪಿಟಿ ಪ್ರತಿ ಸ್ಪರ್ಧಿ ನಿರ್ಮಾಣಕ್ಕೆ ದೊಡ್ಡ ಸವಾಲ್ ಆಗಲಿದೆ. ಪಾಶ್ಚಿಮಾತ್ಯ ದೇಶಗಳಲ್ಲಿರುವಂತೆ ಚೀನಾದಲ್ಲಿನ ಮುಕ್ತ ಸಂಪನ್ಮೂಲವನ್ನು ಹಂಚಿಕೊಳ್ಳುವ ಪರಿಸ್ಥಿತಿಯಿಲ್ಲ. ಜೊತೆಗೆ ಚೀನಿ ಭಾಷೆಯ ಎಐ ಚಾಟ್ಬೂಟ್ ನಿರ್ಮಾಣ ಕೂಡ ಕಷ್ಟಕರವಾಗಿರಲಿದೆ ಎಂದು ಯುನೊಯು ಇಂಟಲಿಜೆಂಟ್ ಸಂಸ್ಥಾಪಕ ಕ್ಸು ಲೈಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗೂ ಹಣ ಪಾವತಿಸಿ ಬ್ಲೂಟಿಕ್ ಪಡೆಯಬಹುದು