ETV Bharat / science-and-technology

ಅಮೆರಿಕದ ಗೂಢಚಾರರ ಪತ್ತೆಗೆ ಎಐ ತಂತ್ರಜ್ಞಾನ ತಯಾರಿಸಿದ ಚೀನಾ

ಅಮೆರಿಕದ ಗುಪ್ತಚರರನ್ನು ಪತ್ತೆ ಮಾಡಲು ಚೀನಾ ಎಐ ಆಧರಿತ ತಂತ್ರಜ್ಞಾನವೊಂದನ್ನು ತಯಾರಿಸಿದೆ.

China using advanced AI system to track US spies: Report

author img

By ETV Bharat Karnataka Team

Published : Dec 28, 2023, 12:28 PM IST

ನ್ಯೂಯಾರ್ಕ್: ಅಮೆರಿಕದ ಗೂಢಚಾರರು ಮತ್ತು ಇತರ ದೇಶವಿರೋಧಿ ಕೆಲಸಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಲು ಚೀನಾದ ಉನ್ನತ ಗುಪ್ತಚರ ಸಂಸ್ಥೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವ್ಯವಸ್ಥೆಯನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಚೀನಾದ ಎಐ ವ್ಯವಸ್ಥೆಯು ನಿರ್ದಿಷ್ಟ ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವವರ ಬಗ್ಗೆ ತ್ವರಿತವಾಗಿ ವರದಿಗಳನ್ನು ತಯಾರಿಸಬಹುದು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

"ಎಐ-ರಚಿಸಿದ ವ್ಯಕ್ತಿಗಳ ಪ್ರೊಫೈಲ್​ಗಳ ಮೂಲಕ ಚೀನಾದ ಗೂಢಚಾರರು ವಿದೇಶಿ ಗೂಢಚಾರರನ್ನು ಪತ್ತೆ ಮಾಡಲು ಮತ್ತು ಅವರ ದೌರ್ಬಲ್ಯಗಳನ್ನು ಗುರುತಿಸಲು ಸಹಾಯಕವಾಗಲಿದೆ" ಎಂದು ಆಂತರಿಕ ಸಭೆಯ ಮೆಮೋಗಳನ್ನು ಉಲ್ಲೇಖಿಸಿ ವರದಿಯಲ್ಲಿ ತಿಳಿಸಲಾಗಿದೆ.

ಚೀನಾದ ಪ್ರಮುಖ ಗುಪ್ತಚರ ಸಂಸ್ಥೆಯಾದ ಸ್ಟೇಟ್ ಸೆಕ್ಯುರಿಟಿ ಸಚಿವಾಲಯ (Ministry of State Security - MSS) ಅಮೆರಿಕನ್ ನಾಗರಿಕರನ್ನು ಒಳಗೊಂಡಂತೆ ವ್ಯಾಪಕ ಜನರನ್ನು ತನಗಾಗಿ ಕೆಲಸ ಮಾಡಲು ನಿಯೋಜಿಸಿಕೊಂಡಿದೆ.

"ಉತ್ತಮ ತರಬೇತಿ, ದೊಡ್ಡ ಬಜೆಟ್ ಮತ್ತು ಸುಧಾರಿತ ತಂತ್ರಜ್ಞಾನಗಳ ಬಳಕೆಯ ಮೂಲಕ ಏಜೆನ್ಸಿಯು ತನ್ನನ್ನು ಅತ್ಯುತ್ತಮಗೊಳಿಸಿದೆ. ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಪ್ರಬಲ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಾಗಬೇಕೆಂದ ಚೀನಾದ ನಾಯಕ ಕ್ಸಿ ಜಿನ್​ಪಿಂಗ್ ಅವರ ಗುರಿಯನ್ನು ಪೂರೈಸಲು ಈ ಸಂಸ್ಥೆ ಪ್ರಯತ್ನಿಸುತ್ತಿದೆ." ಎಂದು ವರದಿ ಹೇಳಿದೆ. ಸೋವಿಯತ್ ಒಕ್ಕೂಟಕ್ಕೆ ಸಾಧ್ಯವಾಗದ್ದನ್ನು ಚೀನಾದ ಎಂಎಸ್ಎಸ್ ಅಮೆರಿಕದ ವಿರುದ್ಧ ಎಐ ಮೂಲಕ ಸಾಧಿಸಲು ಪ್ರಯತ್ನಿಸುತ್ತಿದೆ.

"ನಿರ್ದಿಷ್ಟವಾಗಿ ಅಸ್ತಿತ್ವದಲ್ಲಿರುವ ತಂತ್ರಜ್ಞಾನ ಅಥವಾ ಇತರ ದೇಶಗಳ ವ್ಯಾಪಾರ ರಹಸ್ಯಗಳನ್ನು ಬಳಸಿಕೊಳ್ಳುವುದು ಚೀನಾ ಸರ್ಕಾರದ ಉದ್ದೇಶವಾಗಿದೆ" ಎಂದು ವಾಷಿಂಗ್ಟನ್ ಮೂಲದ ಸಂಶೋಧನಾ ಸಂಸ್ಥೆಯಾದ ಸ್ಟಿಮ್ಸನ್ ಸೆಂಟರ್​ನ ಚೀನಾ ವಿಭಾಗದ ನಿರ್ದೇಶಕ ಯುನ್ ಸನ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಅಮೆರಿಕ ಕಳೆದ ಹಲವಾರು ದಶಕಗಳಿಂದ ಚೀನಾದ ಮೇಲೆ ಬೇಹುಗಾರಿಕೆ ನಡೆಸುತ್ತಿದೆ. ಆದರೆ ಅದು ಅಷ್ಟೊಂದು ಸಫಲವಾಗಿಲ್ಲ. ಒಂದು ದಶಕದ ಹಿಂದೆ, ಚೀನಾದ ಏಜೆಂಟರು ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ)ಯೊಳಗೆ ನುಸುಳಿ ಅಮೆರಿಕದ ಗೂಢಚಾರರನ್ನು ಪತ್ತೆ ಮಾಡಿ ಅವರನ್ನು ಗಲ್ಲಿಗೇರಿಸಿದ್ದರು ಅಥವಾ ಜೈಲಿಗೆ ಹಾಕಿದ್ದರು. ಚೀನಾದಲ್ಲಿ ತನ್ನ ಮಾನವ ಜಾಲವನ್ನು ಪುನರ್ನಿರ್ಮಿಸಲು ಸಿಐಎ ಇನ್ನೂ ಹೆಣಗಾಡುತ್ತಿದೆ. ಏತನ್ಮಧ್ಯೆ ತೈವಾನ್ ಸೇರಿದಂತೆ ಇತರ ಅಂತಾರಾಷ್ಟ್ರೀಯ ವಿಷಯಗಳಲ್ಲಿ ಚೀನಾ ಯಾವ ನಿರ್ಧಾರ ತಾಳಲಿದೆ ಎಂಬುದನ್ನು ಪತ್ತೆ ಮಾಡಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ : ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿ; ಐಡಿಎಫ್​ ನಾಶ ಮಾಡುತ್ತೇವೆಂದ ಸಿನ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.