ನವದೆಹಲಿ: ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ 1976 ರಲ್ಲಿ ಬರೆದಿದ್ದ 4 ಡಾಲರ್ ಮೊತ್ತದ ಚೆಕ್ ಹರಾಜಿನಲ್ಲಿ 36,850 ಡಾಲರ್ ಗೆ ಮಾರಾಟವಾಗಿದೆ. ಎಲೆಕ್ಟ್ರಾನಿಕ್ಸ್ ರಿಟೇಲ್ ಅಂಗಡಿ 'ರೇಡಿಯೋ ಶಾಕ್' ಜಾಬ್ಸ್ 4 ಡಾಲರ್ ಮೊತ್ತದ ಚೆಕ್ ನೀಡಿದ್ದರು. ಅಮೆರಿಕ ಮೂಲದ ಆರ್ ಆರ್ ಆ್ಯಕ್ಷನ್ ಕಂಪನಿ ಇದನ್ನು ಹರಾಜಿಗಿಟ್ಟಿತ್ತು.
ಕ್ಯಾಲಿಫೋರ್ನಿಯಾದ ಲಾಸ್ ಆಲ್ಟೋಸ್ನಲ್ಲಿರುವ ವೆಲ್ಸ್ ಫಾರ್ಗೋ ಬ್ಯಾಂಕ್ ಶಾಖೆಯ "ಆಪಲ್ ಕಂಪ್ಯೂಟರ್ ಕಂಪನಿ" ಖಾತೆಯ ಪರವಾಗಿ ಈ ಚೆಕ್ ಮೇಲೆ ಜಾಬ್ಸ್ ಸಹಿ ಮಾಡಿದ್ದಾರೆ. ಸದ್ಯ ಸ್ಟೀವ್ ಜಾಬ್ಸ್ ಅವರ ಸಹಿ ಮತ್ತು ಸ್ಮರಣಿಕೆಗಳಿಗೆ ಭಾರಿ ಬೇಡಿಕೆ ಉಂಟಾಗಿದ್ದು, ಈ ಚೆಕ್ ಕೂಡ ಸದ್ಯ ಈ ಸ್ಮರಣಿಕೆಗಳ ಪಟ್ಟಿಗೆ ಸೇರಿದೆ.
ಕಳೆದ ವರ್ಷ 1976 ರಲ್ಲಿ ಜಾಬ್ಸ್ ಸಹಿ ಮಾಡಿದ 9.18 ಡಾಲರ್ ಆಪಲ್ ಕಂಪ್ಯೂಟರ್ ಚೆಕ್ 55,000 ಡಾಲರ್ ಗೆ ಮಾರಾಟವಾಗಿತ್ತು. ಅದೇ ವರ್ಷದ ಎಲ್ಮರ್ ಎಲೆಕ್ಟ್ರಾನಿಕ್ಸ್ಗೆ ನೀಡಿದ್ದ 13.86 ಡಾಲರ್ ಮೊತ್ತದ ಮತ್ತೊಂದು ಚೆಕ್ ಮಾರ್ಚ್ನಲ್ಲಿ 37,564 ಡಾಲರ್ಗೆ ಮಾರಾಟವಾಗಿತ್ತು.
"ಎಲೆಕ್ಟ್ರಾನಿಕ್ಸ್ ಟೆಕ್ ಅಥವಾ ಡಿಸೈನ್ ಎಂಜಿನಿಯರ್" ಹುದ್ದೆಗಾಗಿ ಉದ್ಯೋಗ ಅರ್ಜಿಯ 1973 ರಲ್ಲಿ ಮಾಡಿದ್ದ ಸಹಿ ಜಾಬ್ಸ್ ಅವರ ಅತ್ಯಂತ ಹಳೆಯ ಸಹಿ ಎಂದು ಹರಾಜುದಾರರು ಗೊತ್ತುಪಡಿಸಿದ್ದರು. ಇದು 2018 ರಲ್ಲಿ 1,74,757 ಡಾಲರ್ಗೆ ಮಾರಾಟವಾಯಿತು.
ಇದಲ್ಲದೇ ಆಪಲ್ ಕಂಪನಿಯನ್ನು ಸ್ಥಾಪಿಸುವಾಗ ಅದರ ಮೂಲ ಒಪ್ಪಂದದ ಮೇಲೆ ಜಾಬ್ಸ್, ಸ್ಟೀವ್ ವೋಜ್ನಿಯಾಕ್ ಮತ್ತು ರೊನಾಲ್ಡ್ ವೇಯ್ನ್ ಸಹಿ ಮಾಡಿದ ದಾಖಲೆಯನ್ನು ಡಿಸೆಂಬರ್ 2011 ರಲ್ಲಿ 15,94,500 ಡಾಲರ್ಗೆ ಮಾರಾಟ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ. ಈ ವರ್ಷದ ಆರಂಭದಲ್ಲಿ, ಮೊದಲ ತಲೆಮಾರಿನ ಸೀಲ್-ಪ್ಯಾಕ್ಡ್ ಐಫೋನ್ ಅನ್ನು ಹರಾಜಿನಲ್ಲಿ 54,904 ಡಾಲರ್ (ಸುಮಾರು 45 ಲಕ್ಷ ರೂ.) ಗೆ ಮಾರಾಟ ಮಾಡಲಾಯಿತು.
ಆಪಲ್ ಕಂಪ್ಯೂಟರ್ ಇಂಕ್ ಹೆಸರಿನ ಕಂಪನಿಯನ್ನು ಏಪ್ರಿಲ್ 1, 1976 ರಂದು ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೋಜ್ನಿಯಾಕ್ ಸ್ಥಾಪಿಸಿದ್ದರು. ಜಾಬ್ಸ್ ಮತ್ತು ವೋಜ್ನಿಯಾಕ್ ಕಂಪ್ಯೂಟರ್ ಗಳನ್ನು ಜನ ತಮ್ಮ ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ಇಟ್ಟುಕೊಳ್ಳುವಷ್ಟು ಚಿಕ್ಕದಾಗಿ ಮಾಡಲು ಬಯಸಿದ್ದರು. ಜಾಬ್ಸ್ ಮತ್ತು ವೋಜ್ನಿಯಾಕ್ ಆರಂಭದಲ್ಲಿ ಆಪಲ್ ಐ ಕಂಪ್ಯೂಟರ್ ನಿರ್ಮಿಸಿ ಅವುಗಳನ್ನು ಮಾನಿಟರ್, ಕೀಬೋರ್ಡ್ ಅಥವಾ ಕೇಸಿಂಗ್ ಇಲ್ಲದೇ ಮಾರಾಟ ಮಾಡಿದರು. ಆಪಲ್ II ಹೆಸರಿನ ಮೊದಲ ವರ್ಣಮಯ ಗ್ರಾಫಿಕ್ಸ್ ಅನ್ನು ಪರಿಚಯಿಸುವ ಮೂಲಕ ಕಂಪ್ಯೂಟರ್ ಉದ್ಯಮದಲ್ಲಿ ಅವರು ಕ್ರಾಂತಿಯನ್ನುಂಟು ಮಾಡಿದರು.(IANS)
ಇದನ್ನೂ ಓದಿ: Redmi 13C ಬಜೆಟ್ ಸ್ಮಾರ್ಟ್ಫೋನ್ ಬಿಡುಗಡೆ; ಬೆಲೆ ರೂ. 7,999 ರಿಂದ ಆರಂಭ