ETV Bharat / science-and-technology

ಚಂದ್ರಯಾನ-3 ನೌಕೆಯ ಪ್ರೊಪಲ್ಷನ್ ಮಾಡ್ಯೂಲ್​​ನಿಂದ ಹೊರ ಬಂದ ಲ್ಯಾಂಡರ್​.. 23ರ ಸಾಫ್ಟ್​​ಲ್ಯಾಂಡಿಂಗ್​ ಕೌತುಕ - Chandrayaan 3

ಚಂದ್ರನ ಅಧ್ಯಯನಕ್ಕೆ ಇಸ್ರೋ ಹಾರಿಬಿಟ್ಟಿರುವ ಚಂದ್ರಯಾನ-3 ನೌಕೆಯ ಪ್ರೊಪೆಲ್ಷನ್​ ಮಾಡ್ಯೂಲ್​ನಿಂದ ಲ್ಯಾಂಡರ್​ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಇದೀಗ ಲ್ಯಾಂಡರ್​ ಏಕಾಂಗಿಯಾಗಿ ಸಂಚಾರ ಆರಂಭಿಸಿ 23 ರಂದು ಸಾಫ್ಯ್​ ಲ್ಯಾಂಡಿಂಗ್​ ಆಗಲಿದೆ.

ಚಂದ್ರಯಾನ-3
ಚಂದ್ರಯಾನ-3
author img

By

Published : Aug 17, 2023, 2:31 PM IST

ನವದೆಹಲಿ: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಇನ್ನೊಂದು ವಿಕ್ರಮ ಸಾಧಿಸಿದೆ. ಚಂದ್ರನ ಕಕ್ಷೆಯಲ್ಲಿರುವ ಉಪಗ್ರಹದ ಲ್ಯಾಂಡರ್ ಮಾಡ್ಯೂಲ್​ನಿಂದ ಪ್ರೊಪಲ್ಷನ್ ಮಾಡ್ಯೂಲ್‌ ಅನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ಇದೀಗ ಲ್ಯಾಂಡರ್​ ಸ್ವತಂತ್ರವಾಗಿ ಚಂದ್ರನ ಅಂಗಳಕ್ಕೆ ಇಳಿಯಲು ಸಿದ್ಧವಾಗಿದೆ. ಇದೇ 23 ರಂದು ದಕ್ಷಿಣ ಧ್ರುವದಲ್ಲಿ ಸಾಫ್ಟ್​ಲ್ಯಾಂಡಿಂಗ್​ ನಡೆಯಲಿದೆ.

  • Chandrayaan-3 Mission:

    ‘Thanks for the ride, mate! 👋’
    said the Lander Module (LM).

    LM is successfully separated from the Propulsion Module (PM)

    LM is set to descend to a slightly lower orbit upon a deboosting planned for tomorrow around 1600 Hrs., IST.

    Now, 🇮🇳 has3⃣ 🛰️🛰️🛰️… pic.twitter.com/rJKkPSr6Ct

    — ISRO (@isro) August 17, 2023 " class="align-text-top noRightClick twitterSection" data=" ">

ಚಂದ್ರಯಾನ-3 ನೌಕೆಯ ಲ್ಯಾಂಡರ್‌ಗೆ ಭಾರತೀಯ ಬಾಹ್ಯಾಕಾಶ ಯಾನಗಳ ಪಿತಾಮಹರಾದ ವಿಕ್ರಮ್ ಸಾರಾಭಾಯ್ ಅವರ ಹೆಸರಿಡಲಾಗಿದೆ. ಇಂದು (ಬುಧವಾರ) ರೋವರ್​ ಹೊಂದಿರುವ ಲ್ಯಾಂಡರ್​ ಅನ್ನು ನೌಕೆಯಿಂದ ಬೇರ್ಪಡಿರುವ ಸಾಹಸವನ್ನು ಇಸ್ರೋ ವಿಜ್ಞಾನಿಗಳು ನಾಜೂಕಾಗಿ ನಡೆಸಿ ಯಶಸ್ವಿಯಾಗಿದ್ದಾರೆ.

ಚಂದ್ರನ ಸನಿಹದಲ್ಲಿ ಲ್ಯಾಂಡರ್​: ಈವರೆಗೂ ಚಂದ್ರನ ಕಕ್ಷೆ ಇಳಿಸುವ ಐದು ಪ್ರಕ್ರಿಯೆಗಳಲ್ಲಿ ಅತಿ ಸೂಕ್ಷ್ಮವಾದ ಪ್ರಕ್ರಿಯೆ ಇದಾಗಿತ್ತು. ಚಂದ್ರಯಾನ-3 ಉಪಗ್ರಹ ಆಗಸ್ಟ್ 5 ರಂದು ಚಂದ್ರನ ಕಕ್ಷೆ ಸೇರುವ ಮುನ್ನ ಬಾಹುಬಲಿ ಎಂದೇ ಖ್ಯಾತಿಯಾಗಿರುವ ಜಿಎಸ್​ಎಲ್​ವಿ ಮಾರ್ಕ್ 3 ವಾಹಕದಲ್ಲಿ ಉಡಾವಣೆ ಮಾಡಲಾಗಿತ್ತು. ಅಂದಿನಿಂದ ಭೂಕಕ್ಷೆ ದಾಟಿ ಚಂದ್ರನ ಕಕ್ಷೆ ಸೇರಿ ಇದೀಗ ಚಂದಮಾಮನ ತೀರಾ ಸನಿಹಕ್ಕೆ ಸಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇ ಸ್ರೋ) ಜುಲೈ 14 ರಂದು ಚಂದ್ರಯಾನ-3 ಮಿಷನ್ ಅನ್ನು ಪ್ರಾರಂಭಿಸಿ ಇಂದಿಗೆ 33 ದಿನಗಳಾಗಿವೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಚಂದ್ರನ ಮೇಲೆ ಉಪಗ್ರಹವನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಲಿದೆ.

250 ಕೋಟಿ ರೂ. ವೆಚ್ಚದ ಯೋಜನೆ: ಚಂದ್ರಯಾನ-3 ನೌಕೆಯು ನ್ಯಾವಿಗೇಷನ್ ಸೆನ್ಸಾರ್‌ಗಳು, ಪ್ರೊಪಲ್ಷನ್ ಸಿಸ್ಟಮ್‌ಗಳು, ಮಾರ್ಗದರ್ಶನ, ನಿಯಂತ್ರಣದಂತಹ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್​ಗೆ ಬೇಕಾದ ಎಲೆಕ್ಟ್ರಾನಿಕ್ ಮತ್ತು ಯಾಂತ್ರಿಕ ವ್ಯವಸ್ಥೆಗಳನ್ನು ಒಳಗೊಂಡಿವೆ. ಲ್ಯಾಂಡರ್​ ಚಂದ್ರನ ಮೇಲೆ ಇಳಿದ ಬಳಿಕ ಅದರಲ್ಲಿರುವ ರೋವರ್​ ಹೊರಬಂದು ಚಂದ್ರನ ಮೇಲ್ಮೈ ಅಧ್ಯಯನ ಆರಂಭಿಸಲಿದೆ.

ಚಂದ್ರಯಾನ-2 ಯೋಜನೆಯ ಮುಂದುವರಿದ ಭಾಗವಾದ ಚಂದ್ರಯಾನ-3 ಯೋಜನೆಯನ್ನು 250 ಕೋಟಿ ರೂಪಾಯಿಯಲ್ಲಿ(ಉಡಾವಣಾ ವಾಹನ ವೆಚ್ಚವನ್ನು ಹೊರತುಪಡಿಸಿ) ರೂಪಿಸಲಾಗಿದೆ. I ಯೋಜನೆಯ ಅಭಿವೃದ್ಧಿಯ ಹಂತವು 2020 ರ ಜನವರಿಯಲ್ಲಿ ಶುರು ಮಾಡಲಾಯಿತು. 2021 ರಲ್ಲಿ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಮಿಷನ್‌ ಉಡ್ಡಯನ ವಿಳಂಬವಾಗಿತ್ತು.

2019 ರಲ್ಲಿ ಹಾರಿಬಿಡಲಾದ ಚಂದ್ರಯಾನ-2 ಮಿಷನ್ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ವೇಳೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಬಿದ್ದು ನಾಶವಾಗಿತ್ತು. ಹೀಗಾಗಿ ಚಂದ್ರಯಾನ-3 ಯೋಜನೆಯನ್ನು ವೈಫಲ್ಯಗಳ ಆಧಾರದ ಮೇಲೆ ರೂಪಿಸಿದ್ದು, ಇಸ್ರೋ ಈ ಬಾರಿ ಯಶಸ್ವಿ ಲ್ಯಾಂಡಿಂಗ್​ಗೆ ಸಜ್ಜಾಗಿದೆ.

ಇದನ್ನೂ ಓದಿ: Chandrayaan-3: ಚಂದ್ರಯಾನ-3 ನೌಕೆಯ ಐದನೇ ಕಕ್ಷಾವರೋಹಣ ಯಶಸ್ವಿ.. ನಾಳೆ ಮಾಡ್ಯೂಲ್​ ಬೇರ್ಪಡಿಸುವ ಸಾಹಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.