ETV Bharat / science-and-technology

ಚಂದ್ರಯಾನ-3: ಚಂದ್ರನ ದಕ್ಷಿಣ ಧ್ರುವದತ್ತ ಪಯಣದ ಕಾಲಾನುಕ್ರಮ ಹೀಗಿದೆ..

Chandrayaan-3 timeline: ಚಂದ್ರಯಾನ-3 ಬಾಹ್ಯಾಕಾಶ ಯೋಜನೆ ಇಲ್ಲಿಯವರೆಗೆ ನಡೆದುಬಂದ ದಾರಿ ಇಲ್ಲಿದೆ.

Chandrayaan-3: Timeline of India's prestigious mission

author img

By ETV Bharat Karnataka Team

Published : Aug 23, 2023, 3:32 PM IST

Updated : Aug 23, 2023, 3:41 PM IST

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ -3 ಯೋಜನೆ ಜುಲೈ 14 ರಂದು ಉಡಾವಣೆಯಾದಾಗಿನಿಂದ ಚಂದ್ರನತ್ತ ನಿರಂತರವಾಗಿ ಪ್ರಯಾಣಿಸುತ್ತಿದೆ. ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ಚಂದ್ರಯಾನ 3 ರ ಲ್ಯಾಂಡರ್ ಆಗಸ್ಟ್ 23 ರಂದು ಸಂಜೆ 6:04 ರ ಸುಮಾರಿಗೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ನಿರೀಕ್ಷೆಯಿದೆ. ಲ್ಯಾಂಡರ್ ಒಳಗೆ ರೋವರ್ ಅನ್ನು ಇರಿಸಲಾಗಿದೆ. ಭಾರತದ ಚಂದ್ರಯಾನ-3 ಇಲ್ಲಿಯವರೆಗೆ ಕೈಗೊಂಡ ಪ್ರಯಾಣದ ಒಂದು ನೋಟ ಇಲ್ಲಿದೆ:

  • #WATCH | Karnataka | Visuals from ISRO Mission Control Centre in Bengaluru, as the expected soft landing of Chandrayaan-3 on the moon remains just a few hours away. pic.twitter.com/2sVAAfSfCs

    — ANI (@ANI) August 23, 2023 " class="align-text-top noRightClick twitterSection" data=" ">
  • ಜುಲೈ 14: ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ LVM3 M4 ವಾಹನವು ಚಂದ್ರಯಾನ -3 ಅನ್ನು ಯಶಸ್ವಿಯಾಗಿ ಕಕ್ಷೆಗೆ ಉಡಾವಣೆ ಮಾಡಿತು. ಚಂದ್ರಯಾನ -3 ಇಲ್ಲಿಂದ ನಿಖರವಾದ ಕಕ್ಷೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು.
  • ಜುಲೈ 15: ಬೆಂಗಳೂರಿನ ಇಸ್ರೋದಿಂದ ಮೊದಲ ಕಕ್ಷೆಯನ್ನು ಹೆಚ್ಚಿಸುವ ಕಾರ್ಯಾಚರಣೆಯನ್ನು (ಭೂಮಿಯ ಮೇಲಿನ ಫೈರಿಂಗ್ -1) ಯಶಸ್ವಿಯಾಗಿ ನಡೆಸಲಾಯಿತು. ಬಾಹ್ಯಾಕಾಶ ನೌಕೆಯು 41762 ಕಿಮೀ x 173 ಕಿಮೀ ಕಕ್ಷೆಗೆ ತಲುಪಿತು.
  • ಜುಲೈ 17: ಕಕ್ಷೆಯನ್ನು ಎತ್ತರಿಸುವ ಎರಡನೇ ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಹಂತದಲ್ಲಿ ಬಾಹ್ಯಾಕಾಶ ನೌಕೆಯು 41603 ಕಿಮೀ x 226 ಕಿಮೀ ಕಕ್ಷೆಗೆ ತಲುಪಿತ್ತು.
  • ಜುಲೈ 22: ಭೂಮಿಯನ್ನು ಸುತ್ತುವರಿದ ಪೆರಿಜಿ ಫೈರಿಂಗ್ ಬಳಸಿ ಕಕ್ಷೆಯನ್ನು ಹೆಚ್ಚಿಸುವ ಮತ್ತೊಂದು ಕಾರ್ಯಾಚರಣೆ ಪೂರ್ಣಗೊಂಡಿತು.
  • ಜುಲೈ 25: ಇಸ್ರೋದಿಂದ ಕಕ್ಷೆಯನ್ನು ಎತ್ತರಿಸುವ ಮತ್ತೊಂದು ಕಾರ್ಯ. ಈ ಹಂತದಲ್ಲಿ ಬಾಹ್ಯಾಕಾಶ ನೌಕೆಯು 71351 ಕಿಮೀ x 233 ಕಿಮೀ ಕಕ್ಷೆಗೆ ತಲುಪಿತು.
  • ಆಗಸ್ಟ್ 1: ಇಸ್ರೋ ಟ್ರಾನ್ಸ್​​ ಲೂನಾರ್​ ಇಂಜೆಕ್ಷನ್ ಅನ್ನು ಯಶಸ್ವಿಯಾಗಿ ನಡೆಸಿ ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್​ ಲೂನಾರ್​ ಕಕ್ಷೆಗೆ ಸೇರಿಸಿತು. ಈ ಹಂತದಲ್ಲಿ ನೌಕೆಯು 288 ಕಿಮೀ x 369328 ಕಿ.ಮೀ. ಕಕ್ಷೆಗೆ ತಲುಪಿತು.
  • ಆಗಸ್ಟ್ 5: ಚಂದ್ರಯಾನ-3 ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆ. ಅಂದುಕೊಂಡಂತೆ 164 ಕಿಮೀ x 18074 ಕಿ.ಮೀ. ಕಕ್ಷೆಗೆ ಸೇರ್ಪಡೆ
  • ಆಗಸ್ಟ್ 6: ಈ ದಿನ ಇಸ್ರೋ ಎರಡನೇ ಲೂನಾರ್ ಬೌಂಡ್ ಫೇಸ್​ (ಎಲ್ಬಿಎನ್) ನಡೆಸಿತು. ಇದರೊಂದಿಗೆ, ಬಾಹ್ಯಾಕಾಶ ನೌಕೆಯು ಚಂದ್ರನ ಸುತ್ತ 170 ಕಿ.ಮೀ x 4313 ಕಿ.ಮೀ ಕಕ್ಷೆಗೆ ತಲುಪಿತು. ಚಂದ್ರನ ಕಕ್ಷೆಯನ್ನು ಸೇರಿಸುವ ಸಮಯದಲ್ಲಿ ಚಂದ್ರಯಾನ -3 ಸೆರೆಹಿಡಿದ ಚಂದ್ರನ ವೀಡಿಯೊವನ್ನು ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿತ್ತು.
  • ಆಗಸ್ಟ್ 9: ಚಂದ್ರಯಾನ -3 ರ ಕಕ್ಷೆಯನ್ನು 174 ಕಿ.ಮೀ x 1437 ಕಿ.ಮೀ.ಗೆ ಇಳಿಸಲಾಯಿತು.
  • ಆಗಸ್ಟ್ 14: ಮತ್ತೊಂದು ಕಾರ್ಯಾಚರಣೆಯ ನಂತರ ಮಿಷನ್ ಕಕ್ಷೆಯ ವೃತ್ತಾಕಾರ ಹಂತ ತಲುಪಿತು. ಈ ಸಮಯದಲ್ಲಿ ಬಾಹ್ಯಾಕಾಶ ನೌಕೆಯು 151 ಕಿಮೀ x 179 ಕಿ.ಮೀ ಕಕ್ಷೆಯನ್ನು ತಲುಪಿತು.
  • ಆಗಸ್ಟ್ 16: ಫೈರಿಂಗ್ ಪೂರ್ಣಗೊಂಡ ನಂತರ ಬಾಹ್ಯಾಕಾಶ ನೌಕೆಯನ್ನು 153 ಕಿ.ಮೀ x 163 ಕಿ.ಮೀ ಕಕ್ಷೆಗೆ ಇಳಿಸಲಾಯಿತು.
  • ಆಗಸ್ಟ್ 17: ಪ್ರೊಪಲ್ಷನ್ ಮಾಡ್ಯೂಲ್​ನಿಂದ ಲ್ಯಾಂಡರ್ ಮಾಡ್ಯೂಲ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಲಾಯಿತು.
  • ಆಗಸ್ಟ್ 19: ಕಕ್ಷೆಯನ್ನು ಕಡಿಮೆ ಮಾಡಲು ಲ್ಯಾಂಡರ್ ಮಾಡ್ಯೂಲ್​ನ ಡಿ-ಬೂಸ್ಟಿಂಗ್ ಕಾರ್ಯಾಚರಣೆ ನಡೆಸಲಾಯಿತು0 12.ಕಾರ್ಯವನ್ನು ಇಸ್ರೋ ನಡೆಸಿತು. ಲ್ಯಾಂಡರ್ ಮಾಡ್ಯೂಲ್ ಚಂದ್ರನ ಸುತ್ತ 113 ಕಿ.ಮೀ x 157 ಕಿ.ಮೀ ಕಕ್ಷೆಗೆ ತಲುಪಿತು.
  • ಆಗಸ್ಟ್ 20: ಲ್ಯಾಂಡರ್ ಮಾಡ್ಯೂಲ್​ನಲ್ಲಿ ಮತ್ತೊಂದು ಡಿ-ಬೂಸ್ಟಿಂಗ್ ಅಥವಾ ಕಕ್ಷೆಯನ್ನು ಕಡಿಮೆ ಮಾಡುವ ಕಾರ್ಯಾಚರಣೆ ನಡೆಸಲಾಯಿತು. ಲ್ಯಾಂಡರ್ ಮಾಡ್ಯೂಲ್ 25 ಕಿಮೀ x 134 ಕಿ.ಮೀ ಕಕ್ಷೆಗೆ ತಲುಪಿತು.
  • ಆಗಸ್ಟ್ 21: ಚಂದ್ರಯಾನ -2 ಆರ್ಬಿಟರ್ ಚಂದ್ರಯಾನ -3 ಲ್ಯಾಂಡರ್ ಮಾಡ್ಯೂಲ್ ಅನ್ನು ಔಪಚಾರಿಕವಾಗಿ ಸ್ವಾಗತಿಸಿತು. ಎರಡರ ನಡುವೆ ದ್ವಿಮುಖ ಸಂಪರ್ಕ ಸಾಧಿಸಲಾಯಿತು. ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ (ಎಂಒಎಕ್ಸ್) ಈಗ ಲ್ಯಾಂಡರ್ ಮಾಡ್ಯೂಲ್​ನೊಂದಿಗೆ ಸಂವಹನ ನಡೆಸಲು ಹೆಚ್ಚಿನ ಮಾರ್ಗಗಳನ್ನು ಹೊಂದಿದೆ.
  • ಆಗಸ್ಟ್ 22: ಚಂದ್ರಯಾನ -3 ಮಿಷನ್​ನ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (ಎಲ್ಪಿಡಿಸಿ) ಸುಮಾರು 70 ಕಿ.ಮೀ ಎತ್ತರದಿಂದ ಸೆರೆಹಿಡಿದ ಚಂದ್ರನ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿತು.
  • ಆಗಸ್ಟ್ 23: ಸಂಜೆ 6.04 ಕ್ಕೆ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಚಂದ್ರಯಾನ -3 ರ ಲ್ಯಾಂಡರ್ ಮಾಡ್ಯೂಲ್ ಸುರಕ್ಷಿತ ಮತ್ತು ಮೃದುವಾಗಿ ಇಳಿಯುವ ನಿರೀಕ್ಷೆಯಿದೆ.
    • Chandrayaan-3 Mission:
      All set to initiate the Automatic Landing Sequence (ALS).
      Awaiting the arrival of Lander Module (LM) at the designated point, around 17:44 Hrs. IST.

      Upon receiving the ALS command, the LM activates the throttleable engines for powered descent.
      The… pic.twitter.com/x59DskcKUV

      — ISRO (@isro) August 23, 2023 " class="align-text-top noRightClick twitterSection" data=" ">

Last Updated : Aug 23, 2023, 3:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.