ETV Bharat / science-and-technology

2023ರಲ್ಲಿ ಬ್ಲೂ-ಕಾಲರ್ ನೇಮಕಾತಿ ಶೇ 7.4ರಷ್ಟು ಹೆಚ್ಚಳ

author img

By ETV Bharat Karnataka Team

Published : Dec 11, 2023, 1:42 PM IST

ಭಾರತದಲ್ಲಿ ಬ್ಲೂ ಕಾಲರ್ ನೇಮಕಾತಿ 2023ರಲ್ಲಿ ಶೇ 7.4 ರಷ್ಟು ಹೆಚ್ಚಾಗಿವೆ.

Hiring for blue-collar workforce in India up 7.4% in 2023

ನವದೆಹಲಿ : ಭಾರತದಲ್ಲಿ ಬ್ಲೂ-ಕಾಲರ್ ಉದ್ಯೋಗಿಗಳ ನೇಮಕಾತಿಯಲ್ಲಿ 2023ರಲ್ಲಿ ಶೇ 7.4ರಷ್ಟು ಏರಿಕೆಯಾಗಿದೆ. ಅಲ್ಲದೆ ಲಾಜಿಸ್ಟಿಕ್ಸ್, ನಿರ್ಮಾಣ ಮತ್ತು ರಿಯಲ್ ಎಸ್ಟೇಟ್, ಪ್ರವಾಸೋದ್ಯಮ ಮತ್ತು ಹಾಸ್ಪಿಟ್ಯಾಲಿಟಿ ವಲಯಗಳು ಉದ್ಯೋಗಿಗಳ ನೇಮಕಾತಿ ಮಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿವೆ ಎಂದು ವರದಿಯೊಂದು ಸೋಮವಾರ ತಿಳಿಸಿದೆ. ಮೆಟ್ರೊ ನಗರಗಳ ಪೈಕಿ ಕೊಲ್ಕತಾದಲ್ಲಿ ಅತ್ಯಧಿಕ ನೇಮಕಾತಿಗಳು ನಡೆದಿವೆ. ಹಾಗೆಯೇ ನೇಮಕಾತಿಯಲ್ಲಿ ಪುಣೆ ಮತ್ತು ಚಂಡೀಗಢ ಅಗ್ರ ಶ್ರೇಣಿಯ 2 ನಗರಗಳಾಗಿ ಹೊರಹೊಮ್ಮಿವೆ.

ಎಸ್ಎಂಬಿಗಳ ಬೆಳವಣಿಗೆ, ನಗರೀಕರಣ, ಮೂಲಸೌಕರ್ಯ ಅಭಿವೃದ್ಧಿ, ಸೇವಾ ವಲಯದ ವಿಸ್ತರಣೆ ಮತ್ತು ವೆಚ್ಚ-ಪರಿಣಾಮಕಾರಿ ಕಾರ್ಮಿಕ ಮಾರುಕಟ್ಟೆ ಸೇರಿದಂತೆ ಹಲವಾರು ಅಂಶಗಳು ಈ ನಗರಗಳಲ್ಲಿ ಉದ್ಯೋಗ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ ಎಂದು ಜಾಗತಿಕ ನೇಮಕಾತಿ ವೇದಿಕೆ ಇಂಡೀಡ್ ತಿಳಿಸಿದೆ.

"2023 ರಲ್ಲಿ ನೇಮಕಾತಿ ವಲಯ ಗಣನೀಯ ಬೆಳವಣಿಗೆ ಸಾಧಿಸಿದೆ. ವಿಶೇಷವಾಗಿ ಶ್ರೇಣಿ -2 ನಗರಗಳಲ್ಲಿ ನೇಮಕಾತಿ ಹೆಚ್ಚಾಗಿದೆ. 2024ರ ವೇಳೆಗೆ ಸಂಸ್ಥೆಗಳು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ಉದ್ಯೋಗಾಕಾಂಕ್ಷಿಗಳು ತಮ್ಮ ಕೌಶಲ ಹೆಚ್ಚಿಸಿಕೊಳ್ಳುವುದು ಅಗತ್ಯ" ಎಂದು ಇಂಡೀಡ್ ಇಂಡಿಯಾದ ಮಾರಾಟ ವಿಭಾಗದ ಮುಖ್ಯಸ್ಥ ಶಶಿ ಕುಮಾರ್ ಹೇಳಿದ್ದಾರೆ.

2023 ರಲ್ಲಿ ಬ್ಲೂ ಕಾಲರ್ ಉದ್ಯೋಗ ನೀಡುವ ಕಂಪನಿಗಳು ಜೆನ್ ಜೆಡ್ ಪ್ರತಿಭೆಗಳನ್ನು ಹುಡುಕಿದರೆ, ವೈಟ್-ಕಾಲರ್ ವಲಯ ಮಿಲೆನಿಯಲ್ ಅಭ್ಯರ್ಥಿಗಳಿಗೆ ಪ್ರಾಮುಖ್ಯತೆ ನೀಡಿದೆ. ಸುಮಾರು 49 ಪ್ರತಿಶತದಷ್ಟು ಬ್ಲೂ-ಕಾಲರ್ ಉದ್ಯೋಗದಾತರು ಜೆನ್ ಜೆಡ್ ಅಭ್ಯರ್ಥಿಗಳನ್ನು (26 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ನೇಮಿಸಿಕೊಳ್ಳಲು ಒಲವು ತೋರಿದರೆ, 41 ಪ್ರತಿಶತದಷ್ಟು ವೈಟ್-ಕಾಲರ್ ಉದ್ಯೋಗದಾತರು ಮಿಲೆನಿಯಲ್ ಅಭ್ಯರ್ಥಿಗಳನ್ನು (27-41 ವರ್ಷ ವಯಸ್ಸಿನವರು) ನೇಮಿಸಿಕೊಳ್ಳಲು ಬಯಸಿದ್ದಾರೆ.

ಡಿಜಿಟಲ್ ಸಾಕ್ಷರತೆ (27 ಪ್ರತಿಶತ) ಮತ್ತು ದೈಹಿಕ ಸಾಮರ್ಥ್ಯ (83 ಪ್ರತಿಶತ) ಎರಡೂ ಉದ್ಯೋಗದಾತರು ನೇಮಕಾತಿ ಮಾಡುವಾಗ ಬಯಸುವ ಪ್ರಾಥಮಿಕ ಕಠಿಣ ಮತ್ತು ಮೃದು ಕೌಶಲ್ಯಗಳಲ್ಲಿ (hard and soft skills) ಸೇರಿವೆ.

ಉದ್ಯೋಗದಾತರು ಮುಂದಿನ ಪೀಳಿಗೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಸಂಶೋಧನೆಗಳು ತೋರಿಸಿವೆ. ಶೇಕಡಾ 42 ರಷ್ಟು ಉದ್ಯೋಗದಾತರು 2024 ರಲ್ಲಿ ಸಣ್ಣ ಪ್ರಮಾಣದಲ್ಲಿ ಎಐ ಅಳವಡಿಸಿಕೊಳ್ಳಲು ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದಾರೆ ಹಾಗೂ 19 ಪ್ರತಿಶತದಷ್ಟು ಉದ್ಯೋಗದಾತರು ಈಗಾಗಲೇ ಅವುಗಳನ್ನು ಜಾರಿಗೆ ತಂದಿದ್ದಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ : 'ತೀರಾ ಗೊಂದಲದಲ್ಲಿದ್ದೆ, ಪೋನ್ ಕೂಡ ಸ್ಥಗಿತವಾಗಿತ್ತು' ವಜಾಗೊಂಡ ಕ್ಷಣದ ತುಮುಲ ಬಿಚ್ಚಿಟ್ಟ ಆಲ್ಟ್​ಮ್ಯಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.