ETV Bharat / science-and-technology

ನಿತ್ಯ ಬರ್ತಿವೆ ಸರಾಸರಿ 12 ಸ್ಪ್ಯಾಮ್ ಮೆಸೇಜುಗಳು; ವಂಚನೆಗೆ ಇಂಬು ನೀಡುತ್ತಿದೆ ಎಐ

ಹ್ಯಾಕರ್​ಗಳು ಇತ್ತೀಚೆಗೆ ಎಐ ತಂತ್ರಜ್ಞಾನ ಬಳಸಿ ಸ್ಪ್ಯಾಮ್ ಮೆಸೇಜುಗಳನ್ನು ಕಳುಹಿಸುತ್ತಿದ್ದಾರೆ ಎಂದ ಮಾಹಿತಿ ಬಹಿರಂಗವಾಗಿದೆ.

An average Indian gets nearly 12 fake messages daily, AI makes those real

author img

By ETV Bharat Karnataka Team

Published : Nov 8, 2023, 5:07 PM IST

ನವದೆಹಲಿ: ಪ್ರತಿದಿನ ಭಾರತೀಯನೊಬ್ಬನಿಗೆ ಇಮೇಲ್, ಟೆಕ್ಸ್ಟ್​ ಮೆಸೇಜ್ ಅಥವಾ ಇಮೇಲ್ ಮೂಲಕ ಸರಾಸರಿ 12 ನಕಲಿ ಸಂದೇಶಗಳು ಅಥವಾ ಸ್ಪ್ಯಾಮ್​ಗಳು ಬರುತ್ತವೆ ಮತ್ತು ಹೀಗೆ ಬರುವ ಸಂದೇಶಗಳು ನೈಜವೇ ಅಥವಾ ನಕಲಿಯೇ ಎಂದು ಪರಿಶೀಲಿಸಲು ಅಥವಾ ನಿರ್ಧರಿಸಲು ವಾರಕ್ಕೆ 1.8 ಗಂಟೆಗಳ ಕಾಲ ಕಳೆಯುತ್ತಾನೆ ಎಂದು ಹೊಸ ವರದಿಯೊಂದು ಬುಧವಾರ ತೋರಿಸಿದೆ.

ಈ ಕುರಿತು ನಡೆಸಲಾದ ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು 82 ಪ್ರತಿಶತದಷ್ಟು ಭಾರತೀಯರು ನಕಲಿ ಸಂದೇಶಗಳನ್ನು ಕ್ಲಿಕ್ ಮಾಡಿದ್ದಾರೆ ಅಥವಾ ಅದರಿಂದ ಮರುಳಾಗಿದ್ದಾರೆ ಮತ್ತು 49 ಪ್ರತಿಶತದಷ್ಟು ಜನರು ಸ್ಪ್ಯಾಮ್ ಮೆಸೇಜುಗಳಲ್ಲಿ ಯಾವುದೇ ತಪ್ಪುಗಳನ್ನು ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಸ್ಪ್ಯಾಮ್ ಮೆಸೇಜುಗಳು ಅಸಲಿ ಮಾಹಿತಿಯನ್ನೊಳಗೊಂಡ ಮೆಸೇಜುಗಳಂತೆಯೇ ಇರುವುದರಿಂದ ಇವು ಹೆಚ್ಚು ವಿಶ್ವಾಸಾರ್ಹವಾಗಿ ಕಾಣಿಸುತ್ತವೆ ಮತ್ತು ಇವುಗಳನ್ನು ಗುರುತಿಸುವುದು ಕಷ್ಟವಾಗಿದೆ ಎಂದು ಮೆಕಾಫಿ ಮೊದಲ ಬಾರಿಗೆ ನಡೆಸಿದ 'ಗ್ಲೋಬಲ್ ಸ್ಕ್ಯಾಮ್ ಮೆಸೇಜ್' ಅಧ್ಯಯನ ತಿಳಿಸಿದೆ.

ಜನರನ್ನು ವಂಚಿಸಲು ಬಹುತೇಕ ಸಮಯದಲ್ಲಿ ಉದ್ಯೋಗವಕಾಶವಿದೆ ಎಂಬ ಸುಳ್ಳು ಸಂದೇಶ (ಶೇ 64) ಅಥವಾ ಯಾವುದೋ ಆಫರ್ ಅಥವಾ ಬ್ಯಾಂಕ್ ಆಫರ್ ಇದೆ (ಶೇ 52) ಎಂಬ ರೀತಿಯ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಸ್ಪ್ಯಾಮ್ ಮೆಸೇಜ್​ಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂದ ಹೆಚ್ಚಿನ ಸ್ಪ್ಯಾಮ್ ವಿಶ್ವಾದ್ಯಂತ ಗ್ರಾಹಕರ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಅಧ್ಯಯನವು ಭಾರತ ಸೇರಿದಂತೆ ಏಳು ದೇಶಗಳಲ್ಲಿ 7,000 ಕ್ಕೂ ಹೆಚ್ಚು ವಯಸ್ಕರನ್ನು ಸಮೀಕ್ಷೆ ಮಾಡಿದೆ.

ಸ್ಪ್ಯಾಮ್ ಮೆಸೇಜುಗಳನ್ನು ಗುರುತಿಸುವುದು ಇತ್ತೀಚೆಗೆ ಕಷ್ಟಕರವಾಗುತ್ತಿದೆ ಎಂಬುದು ಶೇ 60ರಷ್ಟು ಭಾರತೀಯರ ಅಭಿಪ್ರಾಯವಾಗಿದೆ. ಹ್ಯಾಕರ್​ಗಳು ಎಐ ಬಳಸಿ ಸ್ಪ್ಯಾಮ್ ಮೆಸೇಜುಗಳನ್ನು ತಯಾರಿಸುತ್ತಿರುವುದರಿಂದ ಅವನ್ನು ಕಂಡು ಹಿಡಿಯುವುದು ಕಷ್ಟವಾಗುತ್ತಿದೆ ಎನ್ನಲಾಗಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು 90 ಪ್ರತಿಶತದಷ್ಟು ಭಾರತೀಯರು ಪ್ರತಿದಿನ ಇಮೇಲ್ ಮತ್ತು ಟೆಕ್ಸ್ಟ್​ ಮೂಲಕ ನಕಲಿ ಮೆಸೇಜುಗಳು ಅಥವಾ ಸ್ಪ್ಯಾಮ್​ಗಳು ತಮಗೆ ಬರುತ್ತವೆ ಎಂದು ಹೇಳಿದ್ದಾರೆ. ಎಐ ಚಾಲಿತ ಹಗರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 37 ಪ್ರತಿಶತದಷ್ಟು ಜನರು ಡಿಜಿಟಲ್ ಸಂವಹನದಲ್ಲಿ ತಮ್ಮ ನಂಬಿಕೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಸ್ಪ್ಯಾಮ್ ಸಂದೇಶವು ನಿರ್ದಿಷ್ಟ ಉತ್ಪನ್ನ ಅಥವಾ ಸೇವೆಯನ್ನು ಮಾರ್ಕೆಟಿಂಗ್ ಮಾಡುವ ಮೊಬೈಲ್ ಫೋನ್ ಗೆ ಕಳುಹಿಸಲಾದ ಪಠ್ಯ ಸಂದೇಶವಾಗಿದೆ. ಈ ಸಂದೆಶಗಳು ಅನೇಕ ಉದ್ದೇಶಗಳನ್ನು ಹೊಂದಿರಬಹುದು.

ಇದನ್ನೂ ಓದಿ : ಭಾರತದಲ್ಲಿ 25 ಕೋಟಿ ದಾಟಿದ ಶಾರ್ಟ್​ ವೀಡಿಯೊ ವೀಕ್ಷಕರ ಸಂಖ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.