ETV Bharat / science-and-technology

ಆ್ಯಪಲ್ ಗ್ಲಾಸ್​ 2026 ಅಥವಾ 2027ರ ವೇಳೆಗೆ ಬಿಡುಗಡೆ ಸಾಧ್ಯತೆ

ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನ ಆಧರಿತ ಆ್ಯಪಲ್​ ಗ್ಲಾಸ್​ಗಳನ್ನು 2026 ಅಥವಾ 2027ರ ವೇಳೆಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.

'Apple Glasses' expected to launch in 2026 or 2027

author img

By

Published : Apr 17, 2023, 7:32 PM IST

ಸ್ಯಾನ್ ಫ್ರಾನ್ಸಿಸ್ಕೋ : ಆ್ಯಪಲ್ ತನ್ನ ಆಗ್ಮೆಂಟೆಡ್ ರಿಯಾಲಿಟಿ (ಎಆರ್) 'ಆ್ಯಪಲ್ ಗ್ಲಾಸ್‌ಗಳನ್ನು' 2026 ಅಥವಾ 2027 ರೊಳಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಸುಧಾರಿತ ಮೆಟಾಲೆನ್ಸ್ ತಂತ್ರಜ್ಞಾನದ ಯಶಸ್ವಿ ಅಭಿವೃದ್ಧಿಯನ್ನು ಆಧರಿಸಿ ಆ್ಯಪಲ್ ಗ್ಲಾಸ್​ ಬಿಡುಗಡೆಯಾಗುಸ ಸಾಧ್ಯತೆಗಳಿವೆ. ಆಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಪ್ರಕಾರ, ಆ್ಯಪಲ್ ಕಂಪನಿಯು ಐಪ್ಯಾಡ್‌ಗಳು ಮತ್ತು ಐಫೋನ್‌ಗಳಿಂದ ಪ್ರಾರಂಭಿಸಿ ವಿವಿಧ ಸಾಧನಗಳಲ್ಲಿ ಪ್ಲಾಸ್ಟಿಕ್ ಲೆನ್ಸ್ ಕವರ್‌ಗಳನ್ನು ಬದಲಾಯಿಸಲು ಮೆಟಾಲೆನ್ಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಮೆಟಾಲೆನ್ಸ್‌ಗಳು ಫ್ಲಾಟ್ ಲೆನ್ಸ್ ತಂತ್ರಜ್ಞಾನವಾಗಿದ್ದು, ಇವು ಬೆಳಕನ್ನು ಕೇಂದ್ರೀಕರಿಸಲು ಮೆಟಾಸರ್ಫೇಸ್‌ಗಳನ್ನು ಬಳಸುತ್ತವೆ.

ಐಪ್ಯಾಡ್​ ಪ್ರೊ ನ ಫೇಸ್​ ಐಡಿ ಸಿಸ್ಟಮ್​ನಲ್ಲಿ ಬಳಸಲು ಮೆಟಾಲೆನ್ಸ್​ ಕವರ್​ಗಳನ್ನು 2024ರ ವೇಳೆಗೆ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುವುದು. ಒಂದು ವೇಳೆ ಸಂಶೋಧನೆಗಳು ಅಂದುಕೊಂಡಂತೆ ಮುಂದುವರಿದಲ್ಲಿ ಅವುಗಳನ್ನು 2026 ಅಥವಾ 2027ರ ಮೊದಲಿಗೆ ಆ್ಯಪಲ್​ ಎಆರ್​ ಗ್ಲಾಸ್​ಗಳಲ್ಲಿ ಬಳಸಬಹುದಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಮೆಟಾಲೆನ್ಸ್ ಕವರ್‌ಗಳು ಸದ್ಯದಲ್ಲಿಯೇ ಕ್ಯಾಮೆರಾಗಳಲ್ಲಿ ಬಳಸುತ್ತಿರುವ 'lowest-end' ಪ್ಲಾಸ್ಟಿಕ್ ಲೆನ್ಸ್‌ಗಳನ್ನು ಬದಲಾಯಿಸಬಹುದು. ಉತ್ಪಾದನೆ ಮತ್ತು ಸಾಫ್ಟ್‌ವೇರ್ ಅಲ್ಗಾರಿದಮ್ ಅಭಿವೃದ್ಧಿಯು ನಿರಂತರ ಬೆಳವಣಿಗೆ ಕಂಡರೆ ಇದು 2028 ರಿಂದ 2030 ರವರೆಗೆ ಸಂಭವಿಸಬಹುದು.

ಭಾರತದಲ್ಲಿ ಆ್ಯಪಲ್ ಆದಾಯ ಹೆಚ್ಚಳ: ಇತ್ತೀಚಿನ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಆ್ಯಪಲ್‌ನ ಆದಾಯವು ಸುಮಾರು ಶೇ 50 ರಷ್ಟು ಏರಿಕೆಯಾಗಿದ್ದು, 6 ಶತಕೋಟಿ ಡಾಲರ್​ಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ. ಇದು ಹಿಂದಿನ ವರ್ಷ 4.1 ಶತಕೋಟಿ ಡಾಲರ್ ಆಗಿತ್ತು. ಈ ಬೆಳವಣಿಗೆಯು ಭಾರತೀಯ ಮಾರುಕಟ್ಟೆಯಲ್ಲಿ ಆ್ಯಪಲ್‌ನ ಪ್ರಭಾವ ಹೆಚ್ಚುತ್ತಿರುವುದನ್ನು ತೋರಿಸಿದೆ. ಕಂಪನಿಯು ತನ್ನ ಉತ್ಪನ್ನಗಳ ಹೆಚ್ಚಿನ ಬೆಲೆಯ ಕಾರಣದಿಂದ ದೇಶದಲ್ಲಿ ಅತ್ಯಧಿಕ ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳಲು ಹೆಣಗಾಡುತ್ತಿದೆ. ಆ್ಯಪಲ್ ತನ್ನ ತ್ರೈಮಾಸಿಕ ಆದಾಯವನ್ನು ಮೇ 4 ರಂದು ಪ್ರಕಟಿಸಲು ನಿರ್ಧರಿಸಿದೆ. ಕಂಪನಿಯ ಜಾಗತಿಕ ಆದಾಯದಲ್ಲಿ ಕುಸಿತವಾಗುವ ಸಾಧ್ಯತೆಯಿದೆ.

ಮೊದಲ ಆ್ಯಪಲ್ ರಿಟೇಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ : ಆ್ಯಪಲ್ ಸೋಮವಾರ ಭಾರತದಲ್ಲಿ ತನ್ನ ಮೊದಲ ರಿಟೇಲ್ ಸ್ಟೋರ್​ ಅನ್ನು ಅನಾವರಣಗೊಳಿಸಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಈ ರಿಟೇಲ್ ಸ್ಟೋರ್ ಏಪ್ರಿಲ್ 18 ರಂದು ಸಾರ್ವಜನಿಕರಿಗೆ ಮುಕ್ತವಾಗಲಿದೆ. ಅದೇ ರೀತಿ, ಆ್ಯಪಲ್ ತನ್ನ ಎರಡನೇ ರಿಟೇಲ್ ಸ್ಟೋರ್ ಅನ್ನು ನವದೆಹಲಿಯ ಸಾಕೇತ್ ಮಾಲ್‌ನಲ್ಲಿ ಏಪ್ರಿಲ್ 20 ರಂದು ಆರಂಭಿಸಲಿದೆ. ಈ ಸ್ಟೋರ್​ ಸರ್ವಿಸ್ ಸೆಂಟರ್ ಆಗಿಯೂ ಕೆಲಸ ಮಾಡಲಿದೆ. ಆದರೆ ಅದಕ್ಕಾಗಿ ಸಂದರ್ಶಕರು ಮುಂಚಿತವಾಗಿ ಅಪಾಯಿಂಟ್‌ಮೆಂಟ್ ಹೊಂದಿರಬೇಕು. ಆ್ಯಪಲ್ ಬಿಕೆಸಿ ಕೇಂದ್ರವು 100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡಿದೆ. ಇವರು ಒಟ್ಟಾಗಿ 20 ಭಾಷೆಗಳನ್ನು ಮಾತನಾಡುತ್ತಾರೆ. ಗ್ರಾಹಕರು ಸಾಧನಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು ಮತ್ತು ಅದನ್ನು Apple BKC ಸ್ಟೋರ್‌ನಿಂದ ಪಡೆದುಕೊಳ್ಳಬಹುದು. ಟ್ರೇಡ್-ಇನ್ ಸೌಲಭ್ಯವೂ ದೊರೆಯಲಿದೆ.

ಇದನ್ನೂ ಓದಿ : ಭಾರತದೊಂದಿಗೆ 25 ವರ್ಷಗಳ ಇತಿಹಾಸ ಮುಂದುವರಿಸಲು ಆ್ಯಪಲ್ ಉತ್ಸುಕ: ಟಿಮ್ ಕುಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.