ನವದೆಹಲಿ: ತಾಂತ್ರಿಕವಾಗಿ ನಾವು ಮುಂದುವರಿದಷ್ಟೂ ಅದು ನಮಗೇ ಮಾರಕವಾಗಿ ಪರಿಣಮಿಸುತ್ತಿದೆ. ಮೊಬೈಲ್ ದತ್ತಾಂಶ (ಡೇಟಾ)ವನ್ನು ಕದಿಯುತ್ತಿರುವ ಗಂಭೀರ ಆರೋಪದ ಮೇಲೆ ಹಲವಾರು ಆ್ಯಪ್ಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದೀಗ ಮೊಬೈಲ್ ಖರೀದಿಗೂ ಮೊದಲು ಅದರಲ್ಲಿ ಸ್ಥಾಪಿಸಲಾಗಿರುವ ಆ್ಯಪ್ಗಳನ್ನು ಅಳಿಸುವುದಕ್ಕೂ ಅವಕಾಶ ನೀಡಬೇಕು ಎಂಬ ವಾದ ಮುಂದಿಟ್ಟಿದೆ.
ಇದಕ್ಕಾಗಿ ಐಟಿ ಸಚಿವಾಲಯ ಹೊಸ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಈ ಪ್ರಕಾರ ಹೊಸ ಮೊಬೈಲ್‌ನಲ್ಲಿ ಖರೀದಿಗೂ ಮೊದಲೇ ಅಳವಡಿಸಲಾಗಿರುವ ಅಪ್ಲಿಕೇಶನ್‌ಗಳನ್ನು ಗ್ರಾಹಕರಿಗೆ ಬೇಡವೆಂದಾದಲ್ಲಿ ಅವುಗಳನ್ನು ಡಿಲೀಟ್ ಮಾಡುವ ಅವಕಾಶ ನೀಡಬೇಕು ಎಂದು ಪ್ರಸ್ತಾಪವನ್ನು ಇಟ್ಟಿದೆ. ಸದ್ಯದ ಪ್ರಕಾರ ಯಾವುದೇ ಮೊಬೈಲ್ ಕಂಪನಿಗಳು ಖರೀದಿ ಪೂರ್ವ ಕೆಲ ಆ್ಯಪ್ಗಳನ್ನು ಮೊಬೈಲ್‌ನಲ್ಲಿ ಇನ್ಸ್ಟಾಲ್ ಮಾಡುತ್ತಿದ್ದು ಅವುಗಳನ್ನು ಡಿಲೀಟ್ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಿಲ್ಲ.
ಈ ಆ್ಯಪ್ಗಳಿಂದ ಗ್ರಾಹಕರ ಮಾಹಿತಿ ಸೋರಿಕೆಯಾಗುತ್ತಿರುವ ಆರೋಪ ಕೇಳಿಬರುತ್ತಿದ್ದು, ಆಯಾ ಗ್ರಾಹಕರಿಗೆ ಬೇಕಾದ ಆ್ಯಪ್ ಬಳಕೆ, ಬೇಡವಾದ ಆ್ಯಪ್ ಅಳಿಸಿ ಹಾಕಲು ಕಂಪನಿಗಳು ಅವಕಾಶ ನೀಡಬೇಕು. ಇದು ಭದ್ರತಾ ಕಾರಣಗಳಿಗಾಗಿ ಮುಖ್ಯ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಆ್ಯಪ್ ಅಳವಡಿಕೆ ಮುಕ್ತವಾಗಿರಲಿ: ಗ್ರಾಹಕರು ತಮಗೆ ಬೇಕಾದ ಆ್ಯಪ್ಗಳನ್ನು ಮೊಬೈಲ್‌ನಲ್ಲಿ ಅಳವಡಿಕೆ ಮಾಡಿಕೊಳ್ಳುವ ಅವಕಾಶವನ್ನು ಹೊಂದಿರಬೇಕು. ಯಾವುದೇ ಕಂಪನಿ ಪೂರ್ವದಲ್ಲೇ ಇನ್ಸ್ಟಾಲ್ ಮಾಡಿದ ಆ್ಯಪ್ಗಳು ಬೇಡವೆಂದಾದಲ್ಲಿ ಅವುಗಳನ್ನು ಡಿಲೀಟ್ ಮಾಡುವ ಅವಕಾಶವನ್ನೂ ಗ್ರಾಹಕ ಹೊಂದಿರಬೇಕು. ಇಲ್ಲವಾದಲ್ಲಿ ಅದು ಡೇಟಾ ಕಳವು, ಬೇಹುಗಾರಿಕೆಗೆ ದಾರಿಯಾಗುತ್ತದೆ. ಈ ಬಗ್ಗೆ ಆಯಾ ಮೊಬೈಲ್ ಕಂಪನಿಗಳ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ಕೇಂದ್ರ ತಿಳಿಸಿದೆ.
-
India is emerging as a trusted player in the global value chain of electronics.
— Ministry of Electronics & IT (@GoI_MeitY) March 14, 2023 " class="align-text-top noRightClick twitterSection" data="
Security of mobile phones and applications is important.
Govt is in consultation with stakeholders to develop adequate security standards.@AshwiniVaishnaw @Rajeev_GoI @_DigitalIndia https://t.co/7EyEHSIk8o
">India is emerging as a trusted player in the global value chain of electronics.
— Ministry of Electronics & IT (@GoI_MeitY) March 14, 2023
Security of mobile phones and applications is important.
Govt is in consultation with stakeholders to develop adequate security standards.@AshwiniVaishnaw @Rajeev_GoI @_DigitalIndia https://t.co/7EyEHSIk8oIndia is emerging as a trusted player in the global value chain of electronics.
— Ministry of Electronics & IT (@GoI_MeitY) March 14, 2023
Security of mobile phones and applications is important.
Govt is in consultation with stakeholders to develop adequate security standards.@AshwiniVaishnaw @Rajeev_GoI @_DigitalIndia https://t.co/7EyEHSIk8o
ಈ ಬಗ್ಗೆ ಟ್ವೀಟ್ ಮಾಡಿರುವ ಐಟಿ ಸಚಿವಾಲಯ, "ಗ್ರಾಹಕರ ಮೊಬೈಲ್ ಫೋನ್ಗಳು ಮತ್ತು ಬಳಕೆ ಮಾಡುತ್ತಿರುವ ಆ್ಯಪ್ಗಳ ಸುರಕ್ಷತೆ ಮುಖ್ಯವಾಗಿದೆ. ಸಾಕಷ್ಟು ಭದ್ರತಾ ಮಾನದಂಡಗಳನ್ನು ಅನುಸರಿಸಲಾಗುವುದು. ಆ್ಯಪ್ಗಳ ಮೂಲಕ ದೇಶದ ಮತ್ತು ವೈಯಕ್ತಿಕವಾಗಿ ಬೇಹುಗಾರಿಕೆ ನಡೆಸುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದೆ.
ಗಡಿ ಘರ್ಷಣೆ ಹೆಚ್ಚಾದ ಬಳಿಕ ಚೀನಾ, ಭಾರತದ ಮೇಲೆ ಬೇಹುಗಾರಿಕೆ ಹೆಚ್ಚಿಸಿದೆ ಎಂಬ ವರದಿಯಿಂದಾಗಿ, ಆ ದೇಶದ ಟಿಕ್‌ಟಾಕ್ ಸೇರಿದಂತೆ 300ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಇದು ಚೀನಾ ಮೂಲದ ಆ್ಯಪ್ಗಳ ಮೇಲೆ ತೀವ್ರ ನಿಗಾ ವಹಿಸಲು ಕಾರಣವಾಗಿದೆ.
ಜಾಗತಿಕವಾಗಿಯೂ ಸಹ ಚೀನಾದ ಸಂಸ್ಥೆಗಳಾದ Huawei ಮತ್ತು Hikvision ಸಂಸ್ಥೆಗಳು ವಿವಿಧ ದೇಶಗಳ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂಬ ಆರೋಪದ ಮೇಲೆ ಅನೇಕ ರಾಷ್ಟ್ರಗಳು ಆ ಕಂಪನಿಗಳ ಮೇಳೆ ನಿರ್ಬಂಧಗಳನ್ನು ಹೇರಿವೆ. ಆದರೆ, ಈ ಆರೋಪಗಳನ್ನು ಚೀನಾ ನಿರಾಕರಿಸಿದೆ. ಚೀನಾ ಮೂಲದ ಶಿಯೋಮಿ, ಸ್ಯಾಮ್ಸಂಗ್, ಐಫೋನ್, ರಿಯಲ್ಮಿ, ರೆಡ್ ಮಿ, ಆ್ಯಪಲ್ ಮೊಬೈಲ್ ಕಂಪನಿಗಳಲ್ಲಿ ಮೊದಲೇ ಕೆಲ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿಯೇ ನೀಡಲಾಗುತ್ತದೆ. ಅವುಗಳನ್ನು ಗ್ರಾಹಕರು ಡಿಲೀಟ್ ಮಾಡುವ ಅವಕಾಶ ಇರುವುದಿಲ್ಲ.
ಇದನ್ನೂ ಓದಿ: ಕಾರಿನಲ್ಲಿ ಚಾಟ್ಜಿಪಿಟಿ ವಾಯ್ಸ್ ಅಸಿಸ್ಟಂಟ್: ಜನರಲ್ ಮೋಟರ್ಸ್ ಆವಿಷ್ಕಾರ