ನವದೆಹಲಿ: ಏರ್‌ಟೆಲ್ ಗುರುವಾರ ಎಂಟು ನಗರಗಳಲ್ಲಿ 5G ಪ್ಲಸ್ ಸೇವೆಯನ್ನು ಪ್ರಾರಂಭಿಸಿದೆ. ಬಳಕೆದಾರರು ಈಗಾಗಲೇ ಇರುವ ಏರ್‌ಟೆಲ್ 4G ಸಿಮ್ ಮೂಲಕವೇ 5G ಸೇವೆಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಬೇರೆ ಸಿಮ್ ಕಾರ್ಡ್ನನ್ನು ಬದಲಾಯಿಸುವ ಅಗತ್ಯವಿಲ್ಲ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿ ಜನತೆ ಹಂತ ಹಂತವಾಗಿ ಏರ್‌ಟೆಲ್ 5G ಪ್ಲಸ್ ಸೇವೆಯನ್ನು ಪಡೆಯುತ್ತಾರೆ ಎಂದು ಕಂಪನಿ ಹೇಳಿದೆ.
ಏಕೆಂದರೆ ಕಂಪನಿ ತನ್ನ ನೆಟ್‌ವರ್ಕ್ ಅನ್ನು ನಿರ್ಮಿಸಲು ಮತ್ತು ರೋಲ್ ಔಟ್ ಪೂರ್ಣಗೊಳಿಸುವುದನ್ನು ಮುಂದುವರೆಸಿದೆ. ಈ ಸೇವೆಯಲ್ಲಿ ಕಂಪನಿ ಪ್ರಸ್ತುತ ವೇಗಕ್ಕಿಂತ 20 ರಿಂದ 30 ಪಟ್ಟು ಹೆಚ್ಚಿನ ವೇಗವನ್ನು ನೀಡುತ್ತದೆ. ಜೊತೆಗೆ ಅದ್ಭುತ ಧ್ವನಿ ಅನುಭವ ಮತ್ತು ಸೂಪರ್-ಫಾಸ್ಟ್ ಕರೆ ಸಂಪರ್ಕವನ್ನು ನೀಡುತ್ತದೆ. 5G ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಗ್ರಾಹಕರು ತಮ್ಮ ಬಳಿ ಇರುವ ಡೇಟಾ ಯೋಜನೆಗಳಲ್ಲಿ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್ ಸೇವೆಯನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ... ಇನ್ಮುಂದೆ ಆನಂದಿಸಿ ವೇಗದ ಇಂಟರ್ನೆಟ್
5G ಹ್ಯಾಂಡ್‌ಸೆಟ್ ಮತ್ತು ಗ್ರಾಹಕರು ಈಗಾಗಲೇ ಹೊಂದಿರುವ ಸಿಮ್‌ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮತ್ತು ಪರಿಸರಕ್ಕೆ ಹಿತಕರವಾಗುವ ರೀತಿಯಲ್ಲಿ 5G ತರಲಾಗಿದೆ ಎಂದು ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೋಪಾಲ್ ವಿಟ್ಟಲ್ ಹೇಳಿದ್ದಾರೆ.
ಇದು ಭಾರತದಲ್ಲಿನ ಎಲ್ಲಾ 5G ಸ್ಮಾರ್ಟ್‌ಫೋನ್‌ಗಳು, ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಏರ್‌ಟೆಲ್ 5G ಪ್ಲಸ್ ಹೈ-ಡೆಫಿನಿಷನ್ ವೀಡಿಯೋ ಸ್ಟ್ರೀಮಿಂಗ್, ಗೇಮಿಂಗ್, ಮಲ್ಟಿಪಲ್ ಚಾಟಿಂಗ್, ಫೋಟೋಗಳ ತ್ವರಿತ ಅಪ್‌ಲೋಡ್ ಮತ್ತು ಹೆಚ್ಚಿನವುಗಳಿಗೆ ಸೂಪರ್‌ಫಾಸ್ಟ್ ಪ್ರವೇಶವನ್ನು ಅನುಮತಿಸುತ್ತದೆ. ಭಾರ್ತಿ ಏರ್‌ಟೆಲ್ ಕಳೆದ ವಾರ 5G-ಸಂಪರ್ಕಿತ ಆ್ಯಂಬುಲೆನ್ಸ್ನನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ಜಾರಿಗೆ ತಂದಿದೆ.