ವಾಷಿಂಗ್ಟನ್( ಅಮೆರಿಕ): ಬೌಲ್ಡರ್‌ನ ಕೊಲೊರಾಡೋ ವಿಶ್ವವಿದ್ಯಾಲಯದ ಇಂಜಿನಿಯರ್‌ಗಳು ಅಂಧರಿಗಾಗಿ ಕೃತಕ ಬುದ್ಧಿಮತೆ ಬಳಸಿಕೊಂಡು ವಾಕಿಂಗ್ ಸ್ಟಿಕ್ ಅಭಿವೃದ್ಧಿ ಮಾಡಿದ್ದಾರೆ. ಇದು ಸ್ಮಾರ್ಟ್ ವಾಕಿಂಗ್ ಸ್ಟಿಕ್ ಆಗಿದ್ದು, ಕಿಕ್ಕಿರಿದು ತುಂಬಿದ ಸ್ಥಳದಲ್ಲೂ ಕುಳಿತುಕೊಳ್ಳಲು ಜಾಗ ಹುಡುಕುವುದು ಮತ್ತು ಗಿರಾಣಿ ವಸ್ತುಗಳನ್ನು ಪತ್ತೆ ಮಾಡುಲು ಸಾಧ್ಯವಾಗುವಂತೆ ಇದರಲ್ಲಿ ನಾವಿಗೇಟ್ ಟಾಸ್ಕ್ ಅನ್ನು ಡಿಸೈನ್ ಮಾಡಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಅಗರ್ವಾಲ್ ಮತ್ತು ಅವರ ಸಹೋದ್ಯೋಗಿಗಳು, ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಲ್ಯಾಬ್ ಸಹಾಯದಿಂದ ಇದನ್ನು ರಚಿಸಿದ್ದಾರೆ. ಕೆಂಪು ಮತ್ತು ಬಿಳಿ ಬಣ್ಣದ ಈ ವಾಕಿಂಗ್ ಸ್ಟಿಕ್ ಅನ್ನು ವಾಲ್ಮಾರ್ಟ್ನಿಂದ ಖರೀದಿಸಬಹುದಾಗಿದೆ. ಈ ವಾಕಿಂಗ್ ಸ್ಟಿಕ್ನಲ್ಲಿ ಕ್ಯಾಮೆರಾ ಮತ್ತು ಕಂಪ್ಯೂಟರ್ ವಿಷನ್ ತಂತ್ರಜ್ಞಾನದಿಂದ ವಾಕಿಂಗ್ ಸ್ಟಿಕ್ ನಕ್ಷೆಗಳು ಮತ್ತು ಅದರ ಸುತ್ತಲಿನ ಪ್ರಪಂಚವನ್ನು ಪಟ್ಟಿ ಮಾಡುತ್ತದೆ. ಹ್ಯಾಂಡಲ್ನಲ್ಲಿ ವೈಬ್ರೆಷನ್ ಸೃಷ್ಟಿಸುವ ಮೂಲಕ, ನಿರ್ದೇಶನಗಳನ್ನು ಹೇಳುವ ಮೂಲಕ ಬಳಕೆದಾರರಿಗೆ ಇದು ಮಾರ್ಗದರ್ಶನ ನೀಡುತ್ತದೆ.
ಕಿರಾಣಿ ಅಂಗಡಿಗಳಂತಹ ಸ್ಥಳಗಳನ್ನು ಹೆಚ್ಚು ಪ್ರವೇಶಿಸಲು ವಿನ್ಯಾಸಗೊಳಿಸಲು ಸಾಧನವು ಸಹಾಯ ಮಾಡಲಿದೆ. ಇದರಲ್ಲಿನ ಕೃತಕ ಬುದ್ದಿಮತ್ತೆ ಸಹಾಯದಿಂದ ಲಕ್ಷಾಂತರ ಜನರು ಸ್ವಾತಂತ್ರ್ಯವಾಗಿಸುವತ್ತ ಇದು ಸಹಾಯ ಮಾಡಲಿದೆ. ಇದರಲ್ಲಿ ಕೃತಕ ಬುದ್ದಿಮತ್ತೆ ಮತ್ತು ಕಂಪ್ಯೂಟರ್ ದೃಷ್ಟಿಕೋನ ಅಭಿವೃದ್ಧಿಪಡಿಸಲಿದೆ. ಈ ತಂತ್ರಜ್ಞಾನಗಳು ಅನೇಕ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದಿದ್ದಾರೆ ಅಗರ್ವಾಲ್.
ಕುಳಿತುಕೊಳ್ಳಲು ಸಹಾಯ: ಸಾಮಾನ್ಯವಾಗಿ ನಾವು ಕೆಫೆಗಳಿಗೆ ತೆರಳಿದಾಗ ಯಾರ ಎದುರು ಬದರು ಆಗದಂತೆ, ನಮ್ಮ ಖಾಸಗಿತನ ಕಾಯ್ದುಕೊಳ್ಳುವಂತಹ ಸ್ಥಳದಲ್ಲಿ ಕೂರುತ್ತೇವೆ. ಇದೇ ರೀತಿ ಅಂದರಿಗೂ ಕುಳಿತುಕೊಳ್ಳುವ ಸ್ಥಳದ ಬಗ್ಗೆ ಈ ಸ್ಮಾರ್ಟ್ ಸ್ಟಿಕ್ ಸಹಾಯ ಮಾಡಲಿದೆ. ಇದಕ್ಕಾಗಿ ತಮ್ಮ ಲ್ಯಾಬ್ನಲ್ಲೆ ಒಂದು ಕೆಫೆಯನ್ನು ಮಾಡಿ, ಅವರಿಗೆ ಸಹಾಯವಾಗುವಂತೆ ಅಧ್ಯಯನ ನಡೆಸಲಾಯಿತು.
ಲ್ಯಾಪ್‌ಟಾಪ್‌ನೊಂದಿಗೆ ಬ್ಯಾಕ್ಪ್ಯಾಕ್ ಹೊಂದಿರುವ ಸ್ಮಾರ್ಟ್ ವಾಕಿಂಗ್ ಸ್ಟಿಕ್ ಅನ್ನು ಅಭಿವೃದ್ದಿ ಪಡಿಸಲು ಮುಂದಾಗಲಾಯಿತು. ವಾಕಿಂಗ್ ಸ್ಟಿಕ್ಗೆ ಕ್ಯಾಮೆರಾವನ್ನು ಜೋಡಿಸಿ ಕೊಠಡಿಯನ್ನು ಸಮೀಕ್ಷೆ ಮಾಡಲಾಯಿತು. ಸ್ವಯಂ - ಚಾಲನಾ ಕಾರಿನಂತೆ, ಲ್ಯಾಪ್‌ಟಾಪ್‌ನೊಳಗೆ ಚಾಲನೆಯಲ್ಲಿರುವ ಅಲ್ಗಾರಿದಮ್‌ಗಳನ್ನು ಜೋಡಿಸಲಾಯಿತು. ಇದು ಕೋಣೆಯಲ್ಲಿನ ವಿವಿಧ ವೈಶಿಷ್ಟ್ಯಗಳನ್ನು ಗುರುತಿಸಿ ನಂತರ ಕುಳಿತುಕೊಳ್ಳುವ ಸೀಟುಗಳ ಆಯ್ಕೆಯನ್ನು ಲೆಕ್ಕಾಚಾರ ಮಾಡುತ್ತವೆ.
ಜಪಾನ್‌ನ ಕ್ಯೋಟೋದಲ್ಲಿ ನಡೆದ ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ಇಂಟೆಲಿಜೆಂಟ್ ರೋಬೋಟ್‌ಗಳು ಮತ್ತು ಸಿಸ್ಟಮ್ಸ್‌ನಲ್ಲಿ ಈ ಕುರಿತು ತನ್ನ ಸಂಶೋಧನೆಗಳನ್ನು ವರದಿ ಮಾಡಿದೆ. ಅಧ್ಯಯನದ ಸಂಶೋಧಕರಲ್ಲಿ ಕಂಪ್ಯೂಟರ್ ಸೈನ್ಸ್‌ನ ಸಹಾಯಕ ಪ್ರಾಧ್ಯಾಪಕ ಬ್ರಾಡ್ಲಿ ಹೇಯ್ಸ್ ಮತ್ತು ಡಾಕ್ಟರೇಟ್ ವಿದ್ಯಾರ್ಥಿನಿ ಮೇರಿ ಎಟ್ಟಾ ವೆಸ್ಟ್ ಭಾಗಿಯಾಗಿದ್ದರು.
ಅಧ್ಯಯನದಲ್ಲಿ ಉತ್ತಮ ಫಲಿತಾಂಶ: 10 ಮತ್ತು 12 ವಿವಿಧ ಕಷ್ಟದ ಟ್ರಯಲ್ ಆದ ಬಳಿಕ ಚೇರ್ ಅನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಲಾಯಿತು. ತಂತ್ರಜ್ಞಾನವು ಹೆಚ್ಚು ಅವಲಂಬನೆಯಿಂದ ಅಂಧರು ಈ ಸಾಧನವನ್ನು ಹೆಚ್ಚು ಸುಧಾರಿಸಲು ಸಂಶೋಧಕರು ಯೋಜಿಸಿದ್ದಾರೆ.
ದಿನಸಿ ಪತ್ತೆ: ಮುಂದಿನ ಹಂತದಲ್ಲಿ ಸಂಶೋಧನೆಯು ಜನರಿಂದ ತುಂಬಿರುವ ಶಾಪ್ಗಳಲ್ಲಿ ದಿನಸಿ ಉತ್ಪನ್ನಗಳನ್ನು ಪತ್ತೆ ಮಾಡುವುದನ್ನು ಹೊಂದಿತು. ಇದಕ್ಕಾಗಿ ತಾತ್ಕಾಲಿಕವಾದ ಪೂರಕ ವಾತಾವರಣವನ್ನು ಕಲ್ಪಿಸಲಾಯಿತು. ವಾಕಿಂಗ್ ಸ್ಟಿಕ್ ಸಾಫ್ಟ್‌ವೇರ್ ಸಹಾಯದಿಂದ ಉತ್ಪನ್ನಗಳ ಫೋಟೋಗಳ ಡೇಟಾಬೇಸ್ ಅನ್ನು ರಚಿಸಿದರು. ಈ ವಾಕಿಂಗ್ ಸ್ಟಿಕ್ಗಳು ಉತ್ತನ್ನ ಪತ್ತೆಗೆ ಶೆಲ್ಫ್ ಅನ್ನು ಸ್ಯ್ಕಾನ್ ಮಾಡಿತು. ಈ ವೇಳೆ ಈ ವಾಕಿಂಗ್ ಸೆಟ್ಗಳು ಉತ್ಪನ್ನಗಳಿಗೆ ಹತ್ತಿರದ ವಸ್ತುಗಳನ್ನು ಆಯ್ಕೆ ಮಾಡುತ್ತದೆ. ಜೊತೆಗೆ ಸ್ಪಿಕಿಂಗ್ ನಿರ್ದೇಶನವನ್ನು ಮಾಡುವ ಮೂಲಕ ಅಂದರಿಗೆ ಸಹಾಯ ಮಾಡುತ್ತದೆ.
ಇಂತಹ ಅಧ್ಯಯನಗಳು ಇಂಜಿನಿಯರ್‌ಗಳಿಗೆ ರೊಬೊಟಿಕ್ಸ್ ಮತ್ತು ಕೃತಕ ಬುದ್ದಿಮತ್ತೆ ಸಾಮರ್ಥ್ಯವನ್ನು ಮರುಚಿಂತನೆ ಮಾಡಲು ಪ್ರೇರೇಪಿಸುತ್ತದೆ ರೊಬೊಟಿಕ್ಸ್ ಜಗತ್ತನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾವು ಭಾವಿಸುತ್ತೇವೆ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ನೈಸರ್ಗಿಕ ಇಂಧನ ವಿಮಾನ ತಯಾರಿಕೆ: ಬೋಯಿಂಗ್ ಜೊತೆ ನಾಸಾ ಒಪ್ಪಂದ