ETV Bharat / science-and-technology

2023ರಲ್ಲಿ ಭಾರತದಲ್ಲಿ 950 ಟೆಕ್ ಸ್ಟಾರ್ಟಪ್ ಆರಂಭ - ಜನೆರೇಟಿವ್ ಎಐ

ಭಾರತದಲ್ಲಿ 2023ರಲ್ಲಿ 950 ಟೆಕ್ ಸ್ಟಾರ್ಟಪ್​ಗಳನ್ನು ಆರಂಭಿಸಲಾಗಿದೆ.

Despite challenges, India saw birth of over 950 tech startups last year: Report

author img

By ETV Bharat Karnataka Team

Published : Jan 4, 2024, 5:57 PM IST

ನವದೆಹಲಿ: ಹಲವಾರು ಸವಾಲುಗಳ ಮಧ್ಯೆಯೂ 2023ರಲ್ಲಿ ಭಾರತದಲ್ಲಿ 950ಕ್ಕೂ ಹೆಚ್ಚು ಟೆಕ್ ಸ್ಟಾರ್ಟಪ್​ಗಳನ್ನು ಆರಂಭಿಸಲಾಗಿದೆ ಎಂದು ವರದಿಯೊಂದು ಗುರುವಾರ ತಿಳಿಸಿದೆ. ಮೌಲ್ಯಮಾಪನ ಸಮಸ್ಯೆಗಳು, ಕೆಲವೇ ಕೆಲ ಐಪಿಒಗಳು, ಕಾನೂನು ಬದಲಾವಣೆಗಳು ಮತ್ತು ಸ್ಥೂಲ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಪ್ರವೃತ್ತಿಗಳಂತಹ ಜಾಗತಿಕ ಸವಾಲುಗಳ ಮಧ್ಯೆಯೂ ಭಾರತದಲ್ಲಿ 950 ಟೆಕ್ ಸ್ಟಾರ್ಟಪ್​ ಆರಂಭವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

31,000 ಕ್ಕೂ ಹೆಚ್ಚು ಟೆಕ್ ಸ್ಟಾರ್ಟ್ಅಪ್​ಗಳಿಗೆ 70 ಬಿಲಿಯನ್ ಡಾಲರ್ (2019 ರಿಂದ 2023 ರವರೆಗೆ)ಗೂ ಹೆಚ್ಚು ಸಂಚಿತ ಧನಸಹಾಯ ಬಂದಿದೆ ಎಂದು ಜಿನ್ನೋವ್ ಸಹಯೋಗದೊಂದಿಗೆ ನಾಸ್ಕಾಮ್ ವರದಿ ತಿಳಿಸಿದೆ. 100 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಸಂಸ್ಥಾಪಕರನ್ನು ಸಂದರ್ಶಿಸಿ ನಡೆಸಿದ ಸಮೀಕ್ಷೆಯ ಪ್ರಕಾರ, 2023 ರಲ್ಲಿ ಸ್ಟಾರ್ಟ್ಅಪ್ ವಲಯದಲ್ಲಿ ಉದ್ಯೋಗ ಕಡಿತಗಳು ಹೆಚ್ಚಾಗಿವೆ ಎಂಬ ಸುದ್ದಿಯ ಹೊರತಾಗಿಯೂ, ಶೇಕಡಾ 65 ಕ್ಕೂ ಹೆಚ್ಚು ಸ್ಟಾರ್ಟಪ್​ಗಳು ಕಳೆದ ವರ್ಷ ಮಧ್ಯಮ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಂಡಿವೆ ಎಂದು ವರದಿ ತಿಳಿಸಿದೆ.

"2023 ರಲ್ಲಿ, ಜಾಗತಿಕ ಆರ್ಥಿಕ ಮತ್ತು ನಿಯಂತ್ರಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಭಾರತೀಯ ಟೆಕ್ ಸ್ಟಾರ್ಟ್ಅಪ್​ಗಳು ತಮ್ಮ ವ್ಯವಹಾರದ ಮೂಲಭೂತ ಅಂಶಗಳನ್ನು ಹೆಚ್ಚಿಸುವ, ಲಾಭದಾಯಕತೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ಅನಿವಾರ್ಯತೆಗೆ ಆದ್ಯತೆ ನೀಡಿವೆ" ಎಂದು ನಾಸ್ಕಾಮ್ ಅಧ್ಯಕ್ಷ ದೇಬ್ಜಾನಿ ಘೋಷ್ ಹೇಳಿದರು. "ಶ್ರೇಣಿ 2 ಮತ್ತು 3 ನಗರಗಳಲ್ಲಿ ಟೆಕ್ ಸ್ಟಾರ್ಟ್ಅಪ್ಗಳ ಪ್ರಸರಣವು ವ್ಯವಸ್ಥೆಯ ದೃಢತೆಯನ್ನು ಸೂಚಿಸುತ್ತದೆ" ಎಂದು ಅವರು ಹೇಳಿದರು.

ಡೀಪ್​ಟೆಕ್​ನಲ್ಲಿ ಹೂಡಿಕೆಗಳು 2024 ರಲ್ಲಿ ಹೆಚ್ಚಾಗಲಿವೆ. ಜನೆರೇಟಿವ್ ಎಐ (ಜೆಎನ್ಎಐ) ವೇಗವರ್ಧನೆಯೊಂದಿಗೆ, ಶೇಕಡಾ 70 ರಷ್ಟು ಸ್ಟಾರ್ಟ್ ಅಪ್ ಸಂಸ್ಥಾಪಕರು ತಮ್ಮ ಕಾರ್ಯದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಎಂಬೆಡ್ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಜಿನ್ನೋವ್​ ಕಂಪನಿಯ ಸಿಇಒ ಪರಿ ನಟರಾಜನ್, ಭಾರತದ ಸ್ಟಾರ್ಟ್ಅಪ್ ಪಯಣ ಇನ್ನು ಮುಂದೆ ಕೇವಲ ಪ್ರಮಾಣ ಮತ್ತು ನಾವೀನ್ಯತೆಯ ಬಗ್ಗೆ ಮಾತ್ರವಲ್ಲದೆ ದಕ್ಷತೆ ಮತ್ತು ಹೊಂದಾಣಿಕೆಯ ಬಗ್ಗೆಯೂ ಇದೆ" ಎಂದು ಹೇಳಿದರು.

ಸ್ಟಾರ್ಟ್ಅಪ್ ಎಂಬ ಪದವು ಕಾರ್ಯಾಚರಣೆಯ ಮೊದಲ ಹಂತದಲ್ಲಿರುವ ಕಂಪನಿಯನ್ನು ಸೂಚಿಸುತ್ತದೆ. ಬೇಡಿಕೆ ಇದೆ ಎಂದು ತಾವು ನಂಬುವ ಉತ್ಪನ್ನ ಅಥವಾ ಸೇವೆಯನ್ನು ಅಭಿವೃದ್ಧಿಪಡಿಸಲು ಬಯಸುವ ಒಬ್ಬರು ಅಥವಾ ಹೆಚ್ಚು ಉದ್ಯಮಿಗಳು ಸೇರಿಕೊಂಡು ಸ್ಟಾರ್ಟ್ಅಪ್​ಗಳನ್ನು ಸ್ಥಾಪಿಸುತ್ತಾರೆ. ಈ ಕಂಪನಿಗಳು ಸಾಮಾನ್ಯವಾಗಿ ಹೆಚ್ಚಿನ ವೆಚ್ಚಗಳು ಮತ್ತು ಸೀಮಿತ ಆದಾಯದೊಂದಿಗೆ ಪ್ರಾರಂಭವಾಗುತ್ತವೆ.

ಇದನ್ನೂ ಓದಿ : ಬೂಟ್ ಲೂಪ್ ಸಮಸ್ಯೆ; iOS 17.3 beta 2 ಅಪ್ಡೇಟ್ ಹಿಂಪಡೆದ ಆಪಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.