ETV Bharat / science-and-technology

ಶತಮಾನದಂತ್ಯಕ್ಕೆ ಶೇ 80ರಷ್ಟು ಹಿಮನದಿಗಳು ಕಣ್ಮರೆ: ವಿನಾಶದ ಮುನ್ಸೂಚನೆ ನೀಡಿದ ಅಧ್ಯಯನ

author img

By

Published : Jun 21, 2023, 4:03 PM IST

ಜಾಗತಿಕ ತಾಪಮಾನದ ಮಟ್ಟವು ಹೆಚ್ಚಾಗುತ್ತ ಹೋದಲ್ಲಿ ಶತಮಾನದ ಅಂತ್ಯದ ವೇಳೆಗೆ ಶೇ 80ರಷ್ಟು ಗ್ಲೇಸಿಯರ್​ಗಳು ಕಣ್ಮರೆಯಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.

Rising temperatures to cut 80% volume of Himalayan glaciers by 2100

ಕಠ್ಮಂಡು (ನೇಪಾಳ) : ಸದ್ಯ ಜಾಗತಿಕವಾಗಿ ಅಸ್ತಿತ್ವದಲ್ಲಿರುವ ತಾಪಮಾನಗಳ ಮಟ್ಟ ಹೆಚ್ಚಾದಲ್ಲಿ ಈ ಶತಮಾನದ ಅಂತ್ಯದ ವೇಳೆಗೆ ಹಿಂದೂಕುಶ್ ಹಿಮಾಲಯ ಪ್ರದೇಶದಲ್ಲಿ ಸದ್ಯ ಇರುವ ಶೇಕಡಾ 80 ರಷ್ಟು ಹಿಮನದಿಗಳು (ಗ್ಲೇಸಿಯರ್​) ಕಣ್ಮರೆಯಾಗಬಹುದು ಎಂಬ ಆತಂಕಕಾರಿ ಸಂಗತಿಯು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ.

ಕಠ್ಮಂಡು ಮೂಲದ ಇಂಟರ್‌ನ್ಯಾಶನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ (ICIMOD) ನ ಅಧ್ಯಯನವು ಕ್ರಯೋಸ್ಪಿಯರ್, ನೀರು, ಜೀವವೈವಿಧ್ಯ ಮತ್ತು ಪ್ರದೇಶದ ಜೀವ ಸಂಕುಲದ ನಡುವಿನ ಸಂಪರ್ಕಗಳನ್ನು ತಿಳಿಯಲು ಮೊದಲ ಬಾರಿಗೆ ಇತ್ತೀಚಿನ ವೈಜ್ಞಾನಿಕ ವಿಷಯಗಳ ಬಗ್ಗೆ ಮಾಹಿತಿ ನೀಡಿದೆ. ಜನರು ಮತ್ತು ಪ್ರಕೃತಿಯ ಮೇಲೆ ಹಿಮನದಿಗಳು ಮತ್ತು ಹಿಮದ ಕಣ್ಮರೆಯಿಂದಾಗುವ ಪರಿಣಾಮಗಳನ್ನು ವರದಿ ಪಟ್ಟಿ ಮಾಡಿದೆ.

ಜಾಗತಿಕ ತಾಪಮಾನ ಏರಿಕೆಯು ಹಿಂದೂ ಕುಶ್ ಹಿಮಾಲಯ ಪ್ರದೇಶದ ಹಿಮನದಿಗಳು, ಹಿಮ ಮತ್ತು ಹಿಮ ಶಿಖರಗಳ ಮೇಲೆ ಈ ಹಿಂದೆ ಎಂದೂ ಕಾಣದಂಥ ಮತ್ತು ಮರಳಿ ಬದಲಾಯಿಸಲಾಗದಂಥ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

ಅತ್ಯಧಿಕ ಇಂಗಾಲದ ಹೊರಸೂಸುವಿಕೆಯಿಂದ ಈ ಪ್ರದೇಶದ ಹಿಮದ ಹೊದಿಕೆಯು ಶೇಕಡಾ 25 ರಷ್ಟು ವಿನಾಶವಾಗಲಿದೆ. ಇದರಿಂದ ಅಮು ದರಿಯಾದಂಥ ಪ್ರಮುಖ ನದಿಗಳಲ್ಲಿನ ಶುದ್ಧ ನೀರಿನ ಹರಿವಿನ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಲಿದೆ. ಅಮು ದರಿಯಾ ಶೇ 74 ರಷ್ಟು, ಇಂಡಸ್ ನದಿ ಶೇ 40ರಷ್ಟು ಮತ್ತು ಹೆಲ್ಮಾಂಡ್ ನದಿ ಶೇ 77ರಷ್ಟು ಶುದ್ಧ ನೀರಿನ ಹರಿವಿನ ಕೊಡುಗೆ ನೀಡುತ್ತಿವೆ.

ಹಿಮ ಹೆಪ್ಪುಗಟ್ಟಿದ ನೆಲದ (ಪರ್ಮಾಫ್ರಾಸ್ಟ್) ವ್ಯಾಪ್ತಿಯು ಕಡಿಮೆಯಾಗುತ್ತಿದೆ. ಇದು ಹೆಚ್ಚಿನ ಭೂಕುಸಿತಗಳಿಗೆ ಮತ್ತು ಹೆಚ್ಚಿನ ಎತ್ತರದಲ್ಲಿ ಮೂಲಸೌಕರ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ. ಹಿಂದಿನ ದಶಕಕ್ಕೆ ಹೋಲಿಸಿದರೆ 2011-2020ರಲ್ಲಿ ಹಿಂದೂ ಕುಶ್ ಹಿಮಾಲಯದ ಹಿಮನದಿಗಳು ಶೇಕಡಾ 65 ರಷ್ಟು ವೇಗವಾಗಿ ಕಣ್ಮರೆಯಾಗಿವೆ ಎಂಬ ಆತಂಕಕಾರಿ ಮಾಹಿತಿ ಅಧ್ಯಯನದಲ್ಲಿ ತಿಳಿದು ಬಂದಿದೆ.

"ಹಿಂದೂ ಕುಶ್ ಹಿಮಾಲಯದ ಹಿಮನದಿಗಳು ಭೂಮಿಯ ರಚನೆಯ ಪ್ರಮುಖ ಘಟಕಗಳಾಗಿವೆ. ಏಷ್ಯಾದಲ್ಲಿನ ಎರಡು ಶತಕೋಟಿ ಜನ ಇಲ್ಲಿನ ಗ್ಲೇಸಿಯರ್​ಗಳು ಸಂಗ್ರಹಿಸಿಟ್ಟುಕೊಳ್ಳುವ ಹಿಮನದಿಗಳ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಈ ವ್ಯವಸ್ಥೆಯು ನಾಶವಾದಲ್ಲಿ ಉಂಟಾಗಬಹುದಾದ ಪರಿಣಾಮಗಳು ಊಹಿಸಲೂ ಅಸಾಧ್ಯ. ಅಂಥದೊಂದು ವಿನಾಶವನ್ನು ತಡೆಗಟ್ಟಲು ಮುಂದಾಗುವಂಥ ನಾಯಕ ನಮಗೆ ಬೇಕಾಗಿದ್ದಾರೆ" ಎಂದು ICIMOD ನ ಡೆಪ್ಯುಟಿ ಡೈರೆಕ್ಟರ್ ಜನರಲ್ ಇಝಬೆಲ್ಲಾ ಕೊಜಿಯೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದೂ ಕುಶ್ ಹಿಮಾಲಯದಲ್ಲಿನ ಮಂಜುಗಡ್ಡೆ ಮತ್ತು ಹಿಮವು ಏಷ್ಯಾದ 16 ದೇಶಗಳ ಮೂಲಕ ಹರಿಯುವ 12 ನದಿಗಳಿಗೆ ನೀರಿನ ಪ್ರಮುಖ ಮೂಲವಾಗಿದೆ. ಇದು ಪರ್ವತಗಳಲ್ಲಿನ 240 ಮಿಲಿಯನ್ ಜನರಿಗೆ ಮತ್ತು ಇನ್ನೂ 1.65 ಬಿಲಿಯನ್ ಜನರಿಗೆ ಸಿಹಿನೀರು ಮತ್ತು ಇತರ ಪ್ರಮುಖ ಪರಿಸರ ವ್ಯವಸ್ಥೆಯ ಅನುಕೂಲಗಳನ್ನು ಒದಗಿಸುತ್ತದೆ.

ಈ ನಿರ್ಣಾಯಕ ಪ್ರದೇಶವನ್ನು ಉಳಿಸಲು ಇನ್ನೂ ಸಮಯವಿದೆ. ಆದರೆ ಇಂಗಾಲದ ಹೊರಸೂಸುವಿಕೆಯನ್ನು ಅತ್ಯಂತ ಕ್ಷಿಪ್ರವಾಗಿ ಕಡಿಮೆ ಮಾಡಿದಲ್ಲಿ ಮಾತ್ರ ಇದು ಸಾಧ್ಯ. ಪ್ರತಿಯೊಂದು ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯು ಇಲ್ಲಿನ ಹಿಮನದಿಗಳಿಗೆ ಮತ್ತು ಅವುಗಳ ಮೇಲೆ ಅವಲಂಬಿತವಾಗಿರುವ ನೂರಾರು ಮಿಲಿಯನ್ ಜನರ ಮೇಲೆ ಅಗಾಧ ದುಷ್ಪರಿಣಾಮ ಬೀರಲಿದೆ ಎನ್ನುತ್ತಾರೆ ಕೊಜಿಯೆಲ್.

ಇದನ್ನೂ ಓದಿ : AI ಮಾಡೆಲ್​​ಗಳಿಗೂ ಬರಲಿದೆ ಆ್ಯಪ್ ಸ್ಟೋರ್​: ಇದು OpenAI ಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.