ನವದೆಹಲಿ: ಡಿಜಿಟಲ್ ಲೋಕದಲ್ಲಿ ಬಗ್, ದೋಷಗಳು ಸಾಮಾನ್ಯವಾಗಿ ಕಂಡುಬರುತ್ತಿರುತ್ತವೆ. ಅನೇಕ ಸಂದರ್ಭಗಳಲ್ಲಿ ಬಗ್ ಪತ್ತೆ ಹಚ್ಚುವುದು ಸುಲಭವಾಗಿರದು. ಇದೇ ಕಾರಣಕ್ಕೀಗ ಕೃತ್ತಕ ಬುದ್ದಿಮತ್ತೆಯ ಮೈಕ್ರೋಸಾಫ್ಟ್ ಒಡೆತನ OpenAI, ChatGPT ಬಳಕೆದಾರರಿಗೆ ಈ ಕುರಿತು ವರದಿ ಮಾಡುವಂತೆ ಕೋರಿದೆ.
ಚಾಟ್‌ಜಿಪಿಟಿಯಲ್ಲಿ ಭದ್ರತೆಯ ದೃಷ್ಟಿಯಿಂದ ಅದರಲ್ಲಿ ಕಂಡುಬರುವ ದೋಷ, ಬಗ್ ಮತ್ತು ಹ್ಯಾಕಿಂಗ್ ಪತ್ತೆಗೆ 20 ಸಾವಿರ ಡಾಲರ್ ನೀಡುವುದಾಗಿ ಪ್ರಕಟಿಸಿದೆ. ಜನಪ್ರಿಯ ಚಾಟ್ಜಿಪಿಪಿ ಕಳೆದ ತಿಂಗಳಷ್ಟೇ ಈ ಭದ್ರತಾ ಉಲ್ಲಂಘನೆಯನ್ನು ಅನುಭವಿಸಿತ್ತು. ಓಪನ್‌ಎಐ ಇದೀಗ ಬಗ್ ಬೌಂಟಿ ಪ್ರೋಗ್ರಾಂ ಪರಿಚಯಿಸಿದೆ. ಇದು ಉತ್ಪನ್ನಗಳನ್ನು ಬಳಸುವಾಗ ಪತ್ತೆಯಾಗುವ ದೋಷಗಳನ್ನು ಕಂಡು ಹಿಡಿಯುತ್ತದೆ. ಹೆಚ್ಚಿನ ಸಂಶೋಧನೆಗಳಿಗೆ ಆರಂಭಿಕ ಆದ್ಯತೆಯ ರೇಟಿಂಗ್ 'ಬಗ್‌ಕ್ರೌಡ್ ವಲ್ನರಬಿಲಿಟಿ ರೇಟಿಂಗ್ ಟ್ಯಾಕ್ಸಾನಮಿ' ಬಳಸುತ್ತದೆ ಎಂದು ಹೇಳಿದೆ.
ದೋಷಗಳ ಗಾತ್ರಕ್ಕನುಸಾರ ಪತ್ತೆಗೆ ನಗದು ಬಹುಮಾನ ನಿಗದಿಪಡಿಸಲಾಗಿದೆ. ಕಡಿಮೆ ಅಪಾಯದ ದೋಷ ಪತ್ತೆ ಹಚ್ಚಿದರೆ 200 ಡಾಲರ್ ಮತ್ತು ಹೆಚ್ಚಿನ ಪ್ರಮಾಣದ ದೋಷಗಳಿಗೆ 20 ಸಾವಿರ ಡಾಲರ್ ಅನ್ನು ಸಂಸ್ಥೆ ಘೋಷಿಸಿದೆ. ಈ ಕ್ರಮವು ಪಾರದರ್ಶಕತೆ ಮತ್ತು ಸಹಯೋಗದ ಪ್ರಭಾವದಿಂದ ತಮ್ಮ ದೋಷಗಳನ್ನು ಕಂಡು ಹಿಡಿಯುವಲ್ಲಿ ಸಹಾಯ ಮಾಡುತ್ತದೆ. ಡೌನ್‌ಗ್ರೇಡ್ ಮಾಡಿದ ಸಮಸ್ಯೆಗಳ ಸಂದರ್ಭಗಳಲ್ಲಿ, ಸಂಶೋಧಕರು ವಿವರವಾದ ವಿವರಣೆಯನ್ನು ಸ್ವೀಕರಿಸುತ್ತಾರೆ ಎಂದು ತಿಳಿಸಿದೆ.
ಸಂಶೋಧನಾ ಸಂಶೋಧಕರು ಪ್ರಮಾಣೀಕೃತರಲ್ಲದೇ ಹೋದಲ್ಲಿ ಪ್ಲಗಿನ್‌ಗಳಲ್ಲಿ ಭದ್ರತಾ ಪರೀಕ್ಷೆಯನ್ನು ನಡೆಸಲು ಅರ್ಹತೆ ಹೊಂದಿರುವುದಿಲ್ಲ. ಓಪನ್‌ಎಐ ನೈತಿಕ ಹ್ಯಾಕರ್ಗಳನ್ನು ಅದರ ಭದ್ರತಾ ಗೌಪ್ಯತೆ ಮಾಹಿತಿ ರಕ್ಷಿಸಲು ಮೂರನೇ ವ್ಯಕ್ತಿಗಳನ್ನು ಮೊರೆ ಹೋಗಿದೆ. ಅದರಲ್ಲಿ ಗೂಗಲ್ ವರ್ಕ್ಸ್ಪೆಸ್, ಅಸನ, ಟ್ರೆಲ್ಲೊ, ಜಿರಾ, ಮಂಡೆ.ಕಾಂ, ಜೆನ್ಡೆಸ್ಕ್, ಸೇಲ್ಸ್ಫೋರ್ಸ್ ಮತ್ತು ಸ್ಟ್ರಿರ್ಗಳಾಗಿವೆ. ಈ ಕಂಪನಿಗಳ ವಿರುದ್ಧ ಹೆಚ್ಚುವರಿ ಭದ್ರತಾ ಪರೀಕ್ಷೆಯನ್ನು ಮಾಡಲು ಅಧಿಕಾರವಿಲ್ಲ. ಪರೀಕ್ಷೆಯು ಎಲ್ಲಾ ಕಾನೂನುಗಳು ಮತ್ತು ಅನ್ವಯವಾಗುವ ಸೇವಾ ನಿಯಮಗಳನ್ನು ಅನುಸರಿಸುವಾಗ ಗೌಪ್ಯ ಓಪನ್ ಎಐ ಮಾಹಿತಿಯನ್ನು ಹುಡುಕುವುದಕ್ಕೆ ಸೀಮಿತ. ಇಂತಹವರೊಂದಿಗೆ ಸಂಸ್ಥೆ ವ್ಯವಹಾರ ಮಾಡುವುದಿಲ್ಲ ಎಂದು ತಿಳಿಸಿದೆ. ಕಳೆದ ತಿಂಗಳು, ಓಪನ್ಎಐನಲ್ಲಿ ಬಗ್ಗಳ ಕುರಿತ ಪಾವತಿ ಮಾಹಿತಿಯನ್ನು ತಿಳಿಸಿತು.
ಚಾಟ್‌ಜಿಪಿಟಿ ಎಂದರೇನು?: ಚಾಟ್‌ಜಿಪಿಟಿ ಎಂಬುದು ಓಪನ್‌ಎಐ ಅಭಿವೃದ್ಧಿಪಡಿಸಿದ ಪ್ರಬಲ ಕೃತಕ ಬುದ್ಧಿಮತ್ತೆ ಬಾಟ್. ಇದರ ತಯಾರಕ ಆಲ್ಟ್‌ಮ್ಯಾನ್, ಮಸ್ಕ್ ಮತ್ತು ಇತರ ಸಿಲಿಕಾನ್ ವ್ಯಾಲಿ ಹೂಡಿಕೆದಾರರು 2015 ರಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನಾ ಲಾಭರಹಿತ ಸಂಸ್ಥೆ ರಚಿಸಿದರು ಮತ್ತು ಅದನ್ನು 30 ನೇ ನವೆಂಬರ್ 2022 ರಂದು ಜಗತ್ತಿಗೆ ಅನಾವರಣಗೊಳಿಸಿದ್ದರು. ChatGPT ಚಾಟ್ ಜನರೇಟಿವ್ ಪ್ರಿ-ಟ್ರೇನ್ಡ್ ಟ್ರಾನ್ಸ್‌ಫಾರ್ಮರ್ ಆಗಿದೆ. ಇದು ಶಕ್ತಿಯುತವಾದ AI ಬಾಟ್ ಆಗಿದ್ದು ಮಾನವನ ಮಾತನ್ನು ಅರ್ಥಮಾಡಿಕೊಳ್ಳಲು ಮತ್ತು ಮನುಷ್ಯರಿಗೆ ಸುಲಭವಾಗಿ ಅರ್ಥವಾಗುವ ಆಳವಾದ ಬರವಣಿಗೆಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಪ್ರಾಧ್ಯಾಪಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿದ ChatGPT!