ETV Bharat / science-and-technology

ಸ್ಯಾಮ್​ಸಂಗ್​ ಮಡಚುವ ಫೋನ್​ಗಳಿಗೆ 1.5 ಲಕ್ಷ ಪ್ರಿ-ಆರ್ಡರ್; ಇಎಂಐ ಮೂಲಕವೂ ಲಭ್ಯ - ಸ್ಯಾಮ್​ಸಂಗ್ ಇದು ದಕ್ಷಿಣ ಕೊರಿಯಾದ ಕಂಪನಿ

ಸ್ಯಾಮ್​ಸಂಗ್​ ಮಡಚುವ ಸ್ಮಾರ್ಟ್​ಪೋನ್​​ಗಳಿಗೆ ದೇಶದಲ್ಲಿ ವ್ಯಾಪಕ ಬೇಡಿಕೆ ವ್ಯಕ್ತವಾಗುತ್ತಿದೆ.

Samsung India gets 1.5 lakh pre-orders for new foldables

author img

By ETV Bharat Karnataka Team

Published : Aug 23, 2023, 8:08 PM IST

ನವದೆಹಲಿ : ತಾನು ಹೊಸದಾಗಿ ಲಾಂಚ್ ಮಾಡಲು ಯೋಜಿಸಿರುವ ಮಡಚುವ ಸ್ಮಾರ್ಟ್​ಪೋನ್​ಗಳಿಗೆ ಮೂರು ವಾರಗಳ ಅವಧಿಯಲ್ಲಿ (ಜುಲೈ 27-ಆಗಸ್ಟ್ 17) 1.5 ಲಕ್ಷ ಪ್ರೀ-ಆರ್ಡರ್​ಗಳು ಬಂದಿವೆ ಎಂದು ಸ್ಯಾಮ್​​ಸಂಗ್​ ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆರ್ಡರ್​​ ಪ್ರಮಾಣದಲ್ಲಿ 1.5 ಪಟ್ಟು ಹೆಚ್ಚಾಗಿದೆ. ತನ್ನ ಮಡಚುವ ಮೇಕ್​ ಇನ್ ಇಂಡಿಯಾ ಫೋನ್​ಗಳಿಗೆ ದೇಶಾದ್ಯಂತ ಸಿಕ್ಕ ಅದ್ಭುತ ಪ್ರತಿಕ್ರಿಯೆಯಿಂದ ಸ್ಯಾಮ್​ಸಂಗ್​ ಉತ್ತೇಜಿತವಾಗಿದೆ.

ಶ್ರೇಣಿ 2, 3 ಮತ್ತು 4 ನಗರಗಳಲ್ಲಿ ತ್ವರಿತ ಲಭ್ಯತೆ, ವಿಶಿಷ್ಟ 24 ತಿಂಗಳ ಇಎಂಐ ಯೋಜನೆಗಳ ಮೂಲಕ ಸ್ಯಾಮ್​ಸಂಗ್​​ ದೇಶದ ಅಲ್ಟ್ರಾ-ಪ್ರೀಮಿಯಂ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಹೊಸ ಫೋಲ್ಡಬಲ್​ ಫೋನ್​ಗಳೊಂದಿಗೆ ಸ್ಯಾಮ್ಸಂಗ್ ಸೂಪರ್-ಪ್ರೀಮಿಯಂ ($ 1,000 ಮತ್ತು ಅದಕ್ಕಿಂತ ಹೆಚ್ಚಿನ) ವಿಭಾಗದಲ್ಲಿ ಭಾರತದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ತಲುಪುವ ಗುರಿಯನ್ನು ಹೊಂದಿದೆ.

ಫೋಲ್ಡಬಲ್ ಸ್ಮಾರ್ಟ್​ಫೋನ್​ಗಳನ್ನು ಮುಖ್ಯವಾಹಿನಿಗೆ ತರಲು, ಸ್ಯಾಮ್ ಸಂಗ್ ತನ್ನ ವಿತರಣಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಗ್ಯಾಲಕ್ಸಿ ಝಡ್ ಫ್ಲಿಪ್ 5 ಮತ್ತು ಗ್ಯಾಲಕ್ಸಿ ಝಡ್ ಫೋಲ್ಡ್ 5 ಭಾರತದಲ್ಲಿ 10,000 ಮಳಿಗೆಗಳಲ್ಲಿ ಲಭ್ಯವಿದೆ ಎಂದು ತಿಳಿಸಿದೆ. ಗ್ರಾಹಕರು ಗ್ಯಾಲಕ್ಸಿ ಝಡ್ ಫ್ಲಿಪ್ 5 (256 ಜಿಬಿ) ಅನ್ನು 85,999 ರೂ.ಗಳ ನಿವ್ವಳ ಪರಿಣಾಮಕಾರಿ ಬೆಲೆಗೆ ಖರೀದಿಸಬಹುದು. ಗ್ಯಾಲಕ್ಸಿ ಝಡ್ ಫೋಲ್ಡ್ 5 (256 ಜಿಬಿ) ದೇಶದಲ್ಲಿ ಸೀಮಿತ ಅವಧಿಗೆ 1,38,999 ರೂ.ಗೆ ಲಭ್ಯವಿದೆ.

ಸ್ಯಾಮ್​ಸಂಗ್ ಇದು ದಕ್ಷಿಣ ಕೊರಿಯಾದ ಕಂಪನಿಯಾಗಿದ್ದು ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದಕರಲ್ಲಿ ಒಂದಾಗಿದೆ. ಸ್ಯಾಮ್​ಸಂಗ್​ ಉಪಕರಣಗಳು, ಡಿಜಿಟಲ್ ಮಾಧ್ಯಮ ಸಾಧನಗಳು, ಅರೆವಾಹಕಗಳು, ಮೆಮೊರಿ ಚಿಪ್​ಗಳು ಮತ್ತು ಸಂಯೋಜಿತ ವ್ಯವಸ್ಥೆಗಳು ಸೇರಿದಂತೆ ವಿವಿಧ ರೀತಿಯ ಗ್ರಾಹಕ ಮತ್ತು ಉದ್ಯಮ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಪರಿಣತಿ ಹೊಂದಿದೆ. ಇದು ತಂತ್ರಜ್ಞಾನದಲ್ಲಿ ಹೆಚ್ಚು ಗುರುತಿಸಬಹುದಾದ ಹೆಸರುಗಳಲ್ಲಿ ಒಂದಾಗಿದೆ ಮತ್ತು ದಕ್ಷಿಣ ಕೊರಿಯಾದ ಒಟ್ಟು ರಫ್ತುಗಳಲ್ಲಿ ಐದನೇ ಒಂದು ಭಾಗವನ್ನು ಉತ್ಪಾದಿಸುತ್ತದೆ.

ಸ್ಯಾಮ್​​ಸಂಗ್​ ಅನ್ನು ಮಾರ್ಚ್ 1, 1938 ರಂದು ಲೀ ಬ್ಯುಂಗ್-ಚುಲ್ ಎಂಬುವರು ಆರಂಭದಲ್ಲಿ ಕಿರಾಣಿ ವ್ಯಾಪಾರದ ಅಂಗಡಿಯಾಗಿ ಸ್ಥಾಪಿಸಿದ್ದರು. ಕೊರಿಯಾದ ಟೇಗುದಲ್ಲಿ ಅವರು ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ನಗರದ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಯಾರಾಗುವ ನೂಡಲ್ಸ್ ಮತ್ತು ಇತರ ಸರಕುಗಳನ್ನು ಅವರು ವ್ಯಾಪಾರ ಮಾಡುತ್ತಿದ್ದರು ಮತ್ತು ಅವುಗಳನ್ನು ಚೀನಾ ಮತ್ತು ಅದರ ಪ್ರಾಂತ್ಯಗಳಿಗೆ ರಫ್ತು ಮಾಡುತ್ತಿದ್ದರು.

ಸ್ಯಾಮ್​ಸಂಗ್​ ಮೊದಲ ಬಾರಿಗೆ 1969 ರಲ್ಲಿ ಹಲವಾರು ಎಲೆಕ್ಟ್ರಾನಿಕ್ಸ್-ಕೇಂದ್ರಿತ ವಿಭಾಗಗಳೊಂದಿಗೆ ಎಲೆಕ್ಟ್ರಾನಿಕ್ಸ್ ಉದ್ಯಮವನ್ನು ಪ್ರವೇಶಿಸಿತು. ಅದರ ಮೊದಲ ಉತ್ಪನ್ನ ಕಪ್ಪು-ಬಿಳುಪು ದೂರದರ್ಶನಗಳಾಗಿದ್ದವು. 1970 ರ ದಶಕದಲ್ಲಿ ಕಂಪನಿಯು ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಪ್ರಾರಂಭಿಸಿತು.

ಇದನ್ನೂ ಓದಿ : ಹಾಡು ಗುನುಗುನಿಸಿ, ನಿಮಗಾಗಿ ಆ ಹಾಡು ಪ್ಲೇ ಮಾಡುತ್ತೆ ಯೂಟ್ಯೂಬ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.