ನವದೆಹಲಿ : ಈದ್ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಸೇವೈ ಅಥವಾ ಸೇವಿಯನ್ ಅನ್ನು ತಯಾರಿಸಲಾಗುತ್ತದೆ. ಇದು ಸಾಂಪ್ರದಾಯಿಕ ಹಬ್ಬದ ಪಾಕ ವಿಧಾನ ಕೂಡ ಹೌದು. ಅಕ್ಕಿ, ಗೋಧಿ, ರಾಗಿ ಮತ್ತು ಜೋಳ ಮುಂತಾದ ಇತರೆ ಅಂಟು ಮುಕ್ತ ಧಾನ್ಯಗಳಂತಹ ವಿವಿಧ ಹಿಟ್ಟಿನಿಂದ ಮಾಡಲ್ಪಟ್ಟ ತೆಳುವಾದ ನೂಡಲ್ಸ್.
ಕೆಲವರು ಮೂಂಗ್ ಬೀನ್ಸ್, ಸಿಹಿ ಆಲೂಗಡ್ಡೆ ಇತ್ಯಾದಿಗಳನ್ನು ಬಳಸಿ ವರ್ಮಿಸೆಲ್ಲಿಯನ್ನು ತಯಾರಿಸುತ್ತಾರೆ. ಸೇವಿಯನ್ ಖೀರ್ ಅನ್ನು ವರ್ಮಿಸೆಲ್ಲಿ ಖೀರ್, ಸೇವಾ ಖೀರ್, ಸೇಮಿಯಾ ಖೀರ್ ಎಂಬ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಭಾರತದ ದಕ್ಷಿಣ ಭಾಗದಲ್ಲಿ ಸೇಮಿಯಾ ಪಾಯಸಂ ಎಂದು ಕರೆಯುತ್ತಾರೆ. ಹಾಗಾದ್ರೆ, ಸೇವಿಯನ್ ಖೀರ್ ಅನ್ನು ಸುಲಭವಾಗಿ ಹೇಗೆ ಮಾಡಬಹುದೆಂದು ನೋಡೋಣ ಬನ್ನಿ.
ಇದನ್ನೂ ಓದಿ : ಆಹಾರವನ್ನು ಕೆಡದಂತೆ ಇಟ್ಟುಕೊಳ್ಳುವುದು ಹೇಗೆ? ಇಲ್ಲಿವೆ ಕೆಲ ಟಿಪ್ಸ್ಗಳು!
ಮೀತಿ ಸೇವಿಯನ್ : ಮೀತಿ ಸೇವಿಯನ್ ಹೇಗೆ ಮಾಡುವುದು ತಿಳಿದುಕೊಳ್ಳೋಣ. ಪ್ರಥಮವಾಗಿ ಸೇವಿಯನ್‌ಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಸೇವಿಯನ್ ಪ್ಯಾಕೇಟ್ ಒಡೆದು ಪಕ್ಕಕ್ಕೆ ಇರಿಸಿಕೊಳ್ಳಿ. ನಂತರ ಡ್ರೈ ಫ್ರೂಟ್ಸ್ ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ. ನಿಮ್ಮ ಆಯ್ಕೆಯ ಡ್ರೈ ಫ್ರೂಟ್ಸ್ ಗಳನ್ನು ಸೇರಿಸಬಹುದು. ಬಳಿಕ, ಒಂದು ಪ್ಯಾನ್ ತೆಗೆದುಕೊಂಡು ಅದನ್ನು ಬಿಸಿ ಮಾಡಿ, ನಂತರ 1 ಚಮಚ ತುಪ್ಪ ಸೇರಿಸಿ. ತುಪ್ಪ ಕರಗಿದ ನಂತರ 1 ಕಪ್ ಒಡೆದ ಸೇವಿಯನ್ ಸೇರಿಸಿ. ಕಡಿಮೆ ಮತ್ತು ಮಧ್ಯಮ ಶಾಖದಲ್ಲಿ ಪ್ರೈ ಮಾಡಿ, ಸೇವಿಯನ್ ಗೋಲ್ಡನ್ ಕಲರ್ ಬರುವ ವರೆಗೂ ಹುರಿಯಿರಿ. ನಂತರ ಎಲ್ಲಾ ಕತ್ತರಿಸಿದ ಡ್ರೈ ಫ್ರೂಟ್ಸ್ಗಳಾದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನೂ ಓದಿ : ಏಕಕಾಲಕ್ಕೆ 2 ಸಾವಿರ ಕೆಜಿ ಚಿವಡಾ ತಯಾರಿಕೆಗೆ ಸಿದ್ಧತೆ: ವಿಶ್ವ ಆಹಾರ ದಿನದಂದು ವಿಶ್ವದಾಖಲೆ
ಶಾಖವನ್ನು ಕಡಿಮೆ ಮಾಡಿ ಬಳಿಕ 2 ಕಪ್ ಹಾಲು ಸುರಿಯಿರಿ. ಹಾಲಿನ ಬದಲಿಗೆ ನೀವು ನೀರನ್ನು ಕೂಡ ಸೇರಿಸಬಹುದು. ಈ ವೇಳೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ 2 ರಿಂದ 3 ನಿಮಿಷಗಳ ಕಾಲ ಬೆರೆಸಿ. ಬಳಿಕ 1/4 ಕಪ್ ಸಕ್ಕರೆ ಸೇರಿಸಿ. ಹಾಗೆಯೇ 1/4 ಕಪ್ ಹಾಲಿನ ಪುಡಿ ಸೇರಿಸಿ. ನೀವು ಹಾಲಿನ ಪುಡಿಯನ್ನು ಬೇಕಾದರೆ ಮಾತ್ರ ಸೇರಿಸಿಕೊಳ್ಳಬಹುದು. ನಂತರ 1/2 ಟೀ ಸ್ಪೂನ್ ಏಲಕ್ಕಿ ಪುಡಿಯನ್ನು ಸಿಂಪಡಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣವು ದಪ್ಪವಾಗಲು ಪ್ರಾರಂಭವಾಗುತ್ತದೆ ಮತ್ತು ಸೇವಿಯನ್ ಹಾಲನ್ನು ಹೀರಿಕೊಳ್ಳಲು ಪ್ರಾರಂಭಿಸುತ್ತದೆ. ಎಲ್ಲಾ ಹಾಲು ಹೀರಿಕೊಂಡ ನಂತರ ಗ್ಯಾಸ್ ಆಫ್ ಮಾಡಿ. ಬಳಿಕ ಒಂದು ಸರ್ವಿಂಗ್ ಬೌಲ್ಗೆ ಸೇವಿಯನ್ ಅನ್ನು ಹಾಕಿ ಸವಿಯಿರಿ.
ಇದನ್ನೂ ಓದಿ : 'ಮಲೈ ರೋಟಿ': ಇದು ಜೋಧ್‌ಪುರದ ಅಪರೂಪದ ಸಿಹಿ ಖಾದ್ಯ!