ETV Bharat / opinion

ಉಚಿತ ಕೊಡುಗೆಗಳ ರಾಜಕೀಯ: ತಮಿಳುನಾಡನ್ನು ಎತ್ತ ಕರೆದೊಯ್ಯಲಿದೆ? - ತಮಿಳುನಾಡು ಚುನಾವಣೆ

ಎರಡು ದ್ರಾವಿಡ ಪಕ್ಷಗಳ ಸರ್ವೋಚ್ಚ ನಾಯಕರಾಗಿದ್ದ ಜಯಲಲಿತಾ ಮತ್ತು ಕರುಣಾನಿಧಿ ನಿಧನರಾದ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯು ಭರವಸೆಗಳ ಮಹಾ ಪ್ರವಾಹಕ್ಕೆ ಮತ್ತೊಮ್ಮೆ ಸಾಕ್ಷಿಯಾಗುತ್ತಿದ್ದು, 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆ ಮುಂದಿನ ತಿಂಗಳು 6ರಂದು ಮತದಾನ ಎದುರಿಸಲಿದೆ.

where-will-the-freebie-politics-take-tamilnadu

author img

By

Published : Mar 18, 2021, 9:32 PM IST

‘ಡಿಎಂಕೆ ಪಕ್ಷದ ಚುನಾವಣಾ ಪ್ರಣಾಳಿಕೆಗೆ ಸವಾಲು ಒಡ್ಡುವ ರೀತಿ ತೋರುತ್ತಿರುವ ಮತ್ತೊಂದು ಪ್ರಣಾಳಿಕೆ ಈಗ ಹೊರಗೆ ಬಂದಿದೆ. ಹರಾಜಿನಲ್ಲಿ ಸ್ಪರ್ಧಾತ್ಮಕವಾಗಿರುವ ಹರಾಜು ಕೂಗಿನಂತೆ ಭಾಸವಾಗುವ ಈ ಪ್ರಣಾಳಿಕೆಯು ನಾವು ನೀಡಿದ್ದ ಭರವಸೆಯ ಸುಧಾರಿತ ಆವೃತ್ತಿಯಂತೆ ಕಾಣುತ್ತಿದ್ದು, ಎಲ್ಲವನ್ನೂ ತಂದುಕೊಡುವ ಭರವಸೆ ನೀಡುತ್ತಿವೆ’ ಎಂದು ಹತ್ತು ವರ್ಷಗಳ ಹಿಂದೆ ಡಿಎಂಕೆ ನಾಯಕ ಮತ್ತು ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ದಿ. ಕರುಣಾನಿಧಿ ಹೇಳಿದ್ದರು.

ಎರಡು ದ್ರಾವಿಡ ಪಕ್ಷಗಳ ಸರ್ವೋಚ್ಚ ನಾಯಕರಾಗಿದ್ದ ಜಯಲಲಿತಾ ಮತ್ತು ಕರುಣಾನಿಧಿ ನಿಧನರಾದ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯು ಭರವಸೆಗಳ ಮಹಾ ಪ್ರವಾಹಕ್ಕೆ ಮತ್ತೊಮ್ಮೆ ಸಾಕ್ಷಿಯಾಗುತ್ತಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆ ಮುಂದಿನ ತಿಂಗಳು 6ರಂದು ಮತದಾನ ಎದುರಿಸಲಿದೆ. ಅಂದಾಜು 6.1 ಕೋಟಿ ಮತದಾರರನ್ನು ಆಕರ್ಷಿಸಲು ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಭರ್ಜರಿ 500 ಭರವಸೆಗಳನ್ನು ನೀಡಿದೆ. ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಡೇಟಾ ಟ್ಯಾಬ್‌ಗಳನ್ನು ಒದಗಿಸುವುದು; ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ಬೆಲೆಯಲ್ಲಿ ಕಡಿತ; ಪಡಿತರ ಚೀಟಿ ಹೊಂದಿರುವ ಪ್ರತಿ ಮಹಿಳೆಗೆ ರೂ. 1000, ಹಿಂದು ದೇವಾಲಯಗಳಿಗೆ ತೀರ್ಥಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ರೂ. 25,000ದಿಂದ ರೂ. 1 ಲಕ್ಷ ಸಹಾಯಧನದಂತಹ ಭರವಸೆಗಳು ಈ ಪ್ರಣಾಳಿಕೆಯಲ್ಲಿವೆ.

ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧಿಸುವ ಉದ್ದೇಶದಿಂದ ಎಐಎಡಿಎಂಕೆ ಪಕ್ಷವು ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತನ್ನ ಆವೃತ್ತಿಯಲ್ಲಿ ಮತ್ತಷ್ಟು ಸುಧಾರಿಸಿದೆ. ವಾಷಿಂಗ್ ಮಷೀನ್‌ಗಳು ಮತ್ತು ಸೌರ ಒಲೆಗಳ ಉಚಿತ ಸರಬರಾಜು, ಪಡಿತರ ಚೀಟಿ ಹೊಂದಿರುವ ಪ್ರತಿ ಮಹಿಳೆಗೆ ರೂ. 1500 ನೆರವು ನೀಡುವಂತಹ ಭರವಸೆಗಳನ್ನು ನೀಡಿದೆ. ಪ್ರಣಾಳಿಕೆಯಲ್ಲಿ ಘೋಷಿಸುವ ಇಂತಹ ಉಚಿತ ಕೊಡುಗೆಗಳು ಮತದಾರರ ಮನಸ್ಸಿನ ಮೇಲೆ ಅನಗತ್ಯವಾಗಿ ಪ್ರಭಾವ ಬೀರುತ್ತವೆ ಎಂದು 2013ರಲ್ಲಿ ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗೆ ಅಡ್ಡಿ ಉಂಟು ಮಾಡುವ ಇಂತಹ ಪ್ರವೃತ್ತಿಯನ್ನು ನಿರುತ್ಸಾಹಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ರಾಜಕೀಯ ಪಕ್ಷಗಳೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿದ ನಂತರ ಚುನಾವಣಾ ಆಯೋಗವು ರೂಪಿಸಿದ್ದ ಮಾರ್ಗಸೂಚಿಗಳು ಚುನಾವಣಾ ಭರವಸೆಗಳ ಪ್ರವಾಹವನ್ನು ತಡೆಯುವಲ್ಲಿ ಸಫಲವಾಗಿಲ್ಲ. ಪ್ರತಿ ಚುನಾವಣೆಯಲ್ಲಿಯೂ ಇದು ಮತ್ತೆ ಮತ್ತೆ ಸಾಬೀತಾಗಿದೆ.

ಮತದಾರರಿಗೆ ಅಧಿಕಾರದ ಫಲವನ್ನು ಆಸ್ವಾದಿಸಲು ಯತ್ನಿಸುವ ರಾಜಕೀಯ ಪಕ್ಷಗಳ ಇಂತಹ ಚುನಾವಣಾ ಪ್ರಣಾಳಿಕೆಗಳು ರಾಜ್ಯಗಳನ್ನು ಸಾಲದ ಬಲೆಗೆ ಎಳೆಯುತ್ತವೆ ಎಂಬುದು ದುರದೃಷ್ಟಕರ ಸಂಗತಿ.

ಭಾರತದಲ್ಲಿ ವಯಸ್ಕ ಮತದಾನ ಪದ್ಧತಿ ಇರುವುದರಿಂದ, ಚುನಾಯಿತ ಪ್ರತಿನಿಧಿಗಳು ಹಾಗೂ ಮತದಾರರು ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸುಮಾರು ಏಳು ದಶಕಗಳ ಹಿಂದೆಯೇ ನ್ಯಾಯಮೂರ್ತಿ ಚಾಗ್ಲಾ ಹೇಳಿದ್ದಾರೆ. ಆದರೆ, ರಾಜಕೀಯ ಪಕ್ಷಗಳು ಹಣ ವರ್ಗಾವಣೆಯಂತಹ ಆಮಿಷಗಳ ಮೂಲಕ ಮತದಾರರನ್ನು ಪ್ರಚೋದಿಸುವ ಕಲೆಯನ್ನು ಕರಗತ ಮಾಡಿಕೊಂಡಿವೆ. ಸರ್ಕಾರಿ ಖಜಾನೆಯಲ್ಲಿರುವ ಹಣ ಜನರಿಗೆ ಸೇರಿದ್ದು. ಆ ರೀತಿ ನೋಡುವುದಾದರೆ, ಸಾರ್ವಜನಿಕರಿಗೆ ಸೇರಿದ ಹಣದಿಂದಲೇ ಸಾರ್ವಜನಿಕರ ಮತಗಳನ್ನು ಖರೀದಿಸುವ ಕೆಟ್ಟ ಮಾರ್ಗವನ್ನು ಅವು ಅವಲಂಬಿಸಿವೆ.

ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳ ಮೂಲಕ ನೀಡುವ ಪ್ರಚೋದನೆಗಳನ್ನು ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ ೧೨೩ರ ಅಡಿಯಲ್ಲಿ ಭ್ರಷ್ಟಾಚಾರವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗದ ಪ್ರಕಾರ, ಜನರಿಗೆ ವಿವಿಧ ರೀತಿಯ ಅನುಕೂಲಗಳನ್ನು ಒದಗಿಸುವುದು ಸಂವಿಧಾನದ ನಿರ್ದೇಶನ ತತ್ವಗಳಲ್ಲಿ ಇರುವುದರಿಂದ, ಪ್ರಣಾಳಿಕೆಗಳಲ್ಲಿ ಭರವಸೆ ನೀಡಿದ ಕಲ್ಯಾಣ ಯೋಜನೆಗಳನ್ನು ಆಕ್ಷೇಪಿಸಲು ಆಗದು. ಹಾಗಿದ್ದಾಗ್ಯೂ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯಕ್ಕೆ ಧಕ್ಕೆ ತರುವ ಭರವಸೆಗಳನ್ನು ನೀಡುವುದರಿಂದ ರಾಜಕೀಯ ಪಕ್ಷಗಳು ದೂರವಿರಬೇಕು ಎಂಬ ವ್ಯರ್ಥ ಸಲಹೆಯನ್ನು ಅದು ನೀಡಿದೆ.

ಇತರ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಚುನಾವಣೆ ಹೇಗೆ ನಡೆಯುತ್ತವೆ ಎಂಬುದರ ಕುರಿತು ಚುನಾವಣಾ ಆಯೋಗವು ಪರಿಶೀಲನೆಯನ್ನು ಕೂಡಾ ನಡೆಸಿದೆ. ಚುನಾವಣಾ ಪ್ರಣಾಳಿಕೆಗಳಿಂದ ಆಕ್ಷೇಪಾರ್ಹ ಅಂಶಗಳನ್ನು ತೆಗೆದುಹಾಕಬಹುದು ಎಂಬುದನ್ನು ಭೂತಾನ್ ಮತ್ತು ಮೆಕ್ಸಿಕೊದಲ್ಲಿ ಅದು ಕಂಡುಕೊಂಡಿದೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳನ್ನು ಸಿದ್ಧಪಡಿಸುವಲ್ಲಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಬ್ರಿಟನ್ ಹೊಂದಿದೆ. ಆದರೆ, ಭಾರತದಲ್ಲಿ ಮಾತ್ರ ರಾಜಕೀಯ ಪಕ್ಷಗಳು ಎಲ್ಲಾ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಲ್ಲಂಘಿಸಿದಾಗ ಕೂಡಾ ಚುನಾವಣಾ ಆಯೋಗವು ಮೂಕಪ್ರೇಕ್ಷಕನ ಪಾತ್ರಕ್ಕೆ ಸೀಮಿತವಾಗಿದೆ. ಇದಕ್ಕಿಂತ ದೊಡ್ಡ ದುರಂತ ಇದೆಯೆ?

ಇನ್ನು ತಮಿಳುನಾಡಿನ ವಿಷಯಕ್ಕೆ ಬರುವುದಾದರೆ, ಅಲ್ಲಿ ನೀಡಿರುವ ಮತದಾನದ ಭರವಸೆಗಳ ಪೈಕಿ ಪ್ರತಿ ಪಡಿತರ ಚೀಟಿ ಹೊಂದಿರುವ ಮಹಿಳೆಯರಿಗೆ ಮಾಸಿಕ ರೂ. ೧೦೦೦ ಪಾವತಿಸುವ ಒಂದೇ ಭರವಸೆ ಈಡೇರಿಸಬೇಕೆಂದರೆ ಪ್ರತಿ ವರ್ಷ ರೂ. 21,000 ಕೋಟಿ ಬೇಕಾಗುತ್ತದೆ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತಮಿಳುನಾಡಿನ ತಲಾವಾರು ಸಾಲ ಪ್ರಮಾಣ ರೂ. 15,000ದಿಂದ ರೂ. 57,000ಕ್ಕೆ ಏರಿದೆ. ತಾನು ತೆಗೆದುಕೊಂಡ ಸಾಲ ತೀರಿಸಲು ಆ ರಾಜ್ಯ ಪ್ರತಿ ವರ್ಷ ರೂ. 51,000 ಕೋಟಿ ಪಾವತಿಸಬೇಕಿದೆ. ಇಂತಹ ಸನ್ನಿವೇಶದಲ್ಲಿ, ಉಚಿತ ಕೊಡುಗೆಗಳ ರಾಜಕೀಯವು ತಮಿಳುನಾಡನ್ನು ಎಲ್ಲಿಗೆ ಕರೆದೊಯ್ಯುತ್ತದೆಯೇ ಎಂದು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.