ETV Bharat / opinion

ಸಾಲದ ಸುಳಿಯಲ್ಲಿ ಚೀನಾ: ಭಾರತದ ಆರ್ಥಿಕ ಪರಿಸ್ಥಿತಿ ಏನು? - ಭಾರತದ ಜಿಡಿಪಿ

ಇತ್ತೀಚಿನ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್​ ನಿರ್ಮಾಣ ಮತ್ತು ಮೂಲಸೌಕರ್ಯ ಸುಧಾರಿಸಲು ಚೀನಾವು ಒಂದು ಟ್ರಿಲಿಯನ್ ಯುವಾನ್ ಮೌಲ್ಯದ ಬಾಂಡ್‌ಗಳ ವಿತರಣೆಗೆ ಚೀನಾ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಾಲದ ಸುಳಿಯಲ್ಲಿ ಡ್ರಾಗನ್ ಸಿಲುಕಿದ್ದು ಹೇಗೆ ಹಾಗೂ ಭಾರತದ ಆರ್ಥಿಕ ಪರಿಸ್ಥಿತಿ ಕುರಿತು ಉತ್ತರಾಖಂಡದ ಹೆಚ್‌ಎನ್‌ಬಿ ಗರ್ವಾಲ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಮಹೇಂದ್ರ ಬಾಬು ಕುರುವ ಅವರ ಲೇಖನ ಇಲ್ಲಿದೆ.

The Dragon in Debt: What it Holds for India
ಸಾಲದ ಸುಳಿಯಲ್ಲಿ ಡ್ರಾಗನ್: ಭಾರತದ ಆರ್ಥಿಕ ಪರಿಸ್ಥಿತಿ ಏನು?
author img

By ETV Bharat Karnataka Team

Published : Nov 4, 2023, 9:25 PM IST

Updated : Nov 4, 2023, 9:31 PM IST

ಚೀನಾದ ಅಧಿಕಾರಿಗಳು 2023ರ ಅಕ್ಟೋಬರ್ 25ರಂದು ಅಪರೂಪದ ನೀತಿ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಇತ್ತೀಚಿನ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್​ ನಿರ್ಮಾಣವನ್ನು ಸುಲಭಗೊಳಿಸಲು ಮತ್ತು ನಗರ ಮೂಲಸೌಕರ್ಯವನ್ನು ಸುಧಾರಿಸಲು ದೇಶದ ಉನ್ನತ ಸಂಸದೀಯ ಸಂಸ್ಥೆಯು ಒಂದು ಟ್ರಿಲಿಯನ್ ಯುವಾನ್ (137 ಬಿಲಿಯನ್​ ಡಾಲರ್​) ಮೌಲ್ಯದ ಬಾಂಡ್‌ಗಳ ವಿತರಣೆಗೆ ಅನುಮೋದನೆ ನೀಡಿದೆ.

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾದ ಚೀನಾದ ಈ ನಿರ್ಧಾರವು ಅದರ ಬಜೆಟ್ ಕೊರತೆಯನ್ನು 2023ನೇ ಸಾಲಿಗೆ ಈಗಾಗಲೇ ನಿಗದಿಪಡಿಸಲಾದ ಜಿಡಿಪಿಯ ಶೇ.3 ರಿಂದ ಶೇ.3.8ರಷ್ಟು ಹೆಚ್ಚಿಸಲಿದೆ. ಆದಾಗ್ಯೂ, ಈಗಾಗಲೇ ಹೆಚ್ಚುತ್ತಿರುವ ಚೀನೀ ಸರ್ಕಾರದ ಸಾಲದ ಹಿನ್ನೆಲೆಯಲ್ಲಿ ಗ್ರಾಹಕರ ಖರ್ಚು ಮತ್ತು ಉಳಿತಾಯದಿಂದ ನಡೆಸಲ್ಪಡುವ ಆರ್ಥಿಕ ಬೆಳವಣಿಗೆ ಸಾಧಿಸುವ ಬದಲು ಸಾಲ - ಚಾಲಿತ ಬೆಳವಣಿಗೆಯ ಮಾದರಿಗೆ ಚೀನಾದ ಬದಲಾವಣೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ದೊಡ್ಡ ಸಾಲದ ತಳಹದಿಯ ಮೇಲೆ ನಿರ್ಮಿಸಲಾದ ಆರ್ಥಿಕ ಬೆಳವಣಿಗೆಯ ಸೌಧವು ಅಲುಗಾಡುವ ಸಾಧ್ಯತೆಯಿದೆ. ಚೀನಾದಲ್ಲಿ ಸರ್ಕಾರದ ಸಾಲದ ರಾಶಿಯು ಅದರ ಸ್ಥಿರತೆಗೆ ಬೆದರಿಕೆಯನ್ನುಂಟುಮಾಡುತ್ತದೆ. ಇದು ಜಾಗತಿಕ ಆರ್ಥಿಕತೆಗೂ ಅಪಾಯವನ್ನುಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಡ್ರಾಗನ್ ಹೇಗೆ ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಸಾಲದ ಸುಳಿಯಲ್ಲಿ ಡ್ರಾಗನ್ ಸಿಲುಕಿದ್ದು ಹೇಗೆ?: ಈ ಹಿಂದೆಯೂ ಸಹ ಚೀನಾ ಸರ್ಕಾರದ ಸಾಲ ಹೆಚ್ಚಳದ ಸುದ್ದಿಗಳು ಆಗಿದ್ದವು. ಈ ವಿಷಯವು 2023ರ ಮೇನಲ್ಲಿ ಜಗತ್ತಿನ ಗಮನ ಸೆಳೆಯಿತು. ಚೀನಾದ ಪಶ್ಚಿಮ ಪ್ರಾಂತ್ಯದ ಗುಯಿಝೌ ಸ್ಥಳೀಯ ಸರ್ಕಾರವು ತನ್ನ ಸಾಲ ಸಂಬಂಧಿತ ಅಪಾಯಗಳನ್ನು ತಗ್ಗಿಸಲು ಅಸಮರ್ಥತೆ ವ್ಯಕ್ತಪಡಿಸಿತು. ನಂತರ ಸೆಪ್ಟೆಂಬರ್‌ನಲ್ಲಿ ಮಂಗೋಲಿಯಾ, 2018ರ ಮೊದಲು ತೆಗೆದುಕೊಂಡ ಸಾಲವನ್ನು ಮರುಪಾವತಿಸಲು 9 ಶತಕೋಟಿ ಡಾಲರ್​ನಷ್ಟು ದೊಡ್ಡ ಸಾಲವನ್ನು ಪ್ರಕಟಿಸಿತು.

ಸರಳವಾಗಿ ಹೇಳುವುದಾದರೆ, ಚೀನಾದಲ್ಲಿನ ಸ್ಥಳೀಯ ಸರ್ಕಾರಗಳು ಹಿಂದಿನ ಸಾಲವನ್ನು ಮರುಪಾವತಿಸಲು ಸಾಲ ಪಡೆಯಲು ತೊಡಗಿದವು. ಸರ್ಕಾರಿ ನಿಯಂತ್ರಿತ ಕಾರ್ಪೊರೇಟ್ ಫೈಂಡ್ ರೈಸಿಂಗ್ ಪ್ಲಾಟ್‌ಫಾರ್ಮ್‌ಗಳಾದ ಎಲ್‌ಜಿಎಫ್‌ವಿ (Local Government Financing Vehicles) ಮೂಲಕ ಹೆಚ್ಚಿನ ಬಡ್ಡಿದರದಲ್ಲಿ ಬ್ಯಾಂಕ್‌ಗಳು ಮತ್ತು ಮನೆಗಳಿಗೆ ಬಾಂಡ್‌ಗಳನ್ನು ನೀಡುವ ಮೂಲಕ ಸಾಲ ಪಡೆಯಲಾಯಿತು.

ಆದಾಗ್ಯೂ, ಕೋವಿಡ್ ನಂತರದ ಅವಧಿಯಲ್ಲಿ ವಿಶೇಷವಾಗಿ 2022ರಲ್ಲಿ ಸ್ಥಳೀಯ ಸರ್ಕಾರಗಳಿಗೆ ಆದಾಯದ ಪ್ರಮುಖ ಮೂಲಗಳಾದ ತೆರಿಗೆಗಳು ಮತ್ತು ಭೂಮಿ ಮಾರಾಟಕ್ಕೆ ಹೊಡೆತ ಬಿದ್ದಿತು. ಪ್ರಮುಖ ಆದಾಯದ ಕುಸಿತ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದ ಕಳಪೆ ಬೆಳವಣಿಗೆಯೊಂದಿಗೆ, ಸ್ಥಳೀಯ ಸರ್ಕಾರಗಳು ತನ್ನ ಹಣಕಾಸು ನಿರ್ವಹಣೆಯನ್ನು ಕಷ್ಟಕರ ಎಂದು ಕಂಡುಕೊಂಡವು. ಜೊತೆಗೆ ಮತ್ತಷ್ಟು ಸಾಲಗಳನ್ನು ಆಶ್ರಯಿಸಿದವು. ಇದು ದೇಶದ ಸಾಲದ ಹೊರೆಯನ್ನು ಹೆಚ್ಚಿಸಿತು.

ಇದರ ಜೊತೆಗೆ 2018ರಲ್ಲಿ ಚೀನಾದ ಅಧಿಕಾರಿಗಳು ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆಯನ್ನು ಶಿಸ್ತಿಗೆ ತರಲು ತೆಗೆದುಕೊಂಡ ಹಿಂದಿನ ಕ್ರಮಗಳು ಎಲ್​ಜಿಎಫ್​ವಿಗಳಿಗೆ ಮಾರುಕಟ್ಟೆಯಲ್ಲಿ ಹಣವನ್ನು ಸಂಗ್ರಹಿಸಲು ಕಷ್ಟವಾಯಿತು. ಮೇಲಾಗಿ ಸ್ಥಳೀಯ ಸರ್ಕಾರಗಳು ಮಾಡಿದ ಹೂಡಿಕೆಯ ಮೇಲಿನ ಆದಾಯವೂ ಕುಸಿಯಲಾರಂಭಿಸಿತು. ಹೀಗೆ ಕುಸಿಯುತ್ತಿರುವ ಆದಾಯ, ಬಿಕ್ಕಟ್ಟು, ಕ್ಷೀಣಿಸುತ್ತಿರುವ ರಿಯಲ್ ಎಸ್ಟೇಟ್ ವಲಯವು ಸ್ಥಳೀಯ ಸರ್ಕಾರಗಳನ್ನು ಚೀನಾದಲ್ಲಿ ಸಾಲದ ಸುಳಿಗೆ ಸಿಲುಕಿಸಿತು. ಕೊನೆಯದಾಗಿ ಚೀನಾದ ಹಣಕಾಸಿನ ರಚನೆಯು ಅದರ ಹಣಕಾಸಿನ ವ್ಯವಹಾರಗಳ ಇಂದಿನ ಸ್ಥಿತಿಗೆ ಭಾಗಶಃ ಕಾರಣವಾಗಿದೆ.

ನಾವು ಎಲ್ಲಿ ನಿಲ್ಲುತ್ತೇವೆ?: ಹೆಚ್ಚುತ್ತಿರುವ ಚೀನಾ ಸಾಲದ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ನಡುವೆ ಸಮಾನಾಂತರಗಳನ್ನು ಎಳೆಯಲಾಗಿದೆ ಎಂಬುದು ಸ್ಪಷ್ಟವಾಗಿದೆ. ಎರಡೂ ದೇಶಗಳು ಏಷ್ಯಾದಲ್ಲಿ ಪ್ರಮುಖವಾಗಿದ್ದು, ಉಭಯ ರಾಷ್ಟ್ರಗಳ ಆರ್ಥಿಕತೆಯ ಗಾತ್ರದ ಕಾರಣದಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಪ್ರಾಮುಖ್ಯತೆ ಹೊಂದಿವೆ. 2023ರ ಅಕ್ಟೋಬರ್ 27ರಂದು ಎಸ್​ ಅಂಡ್​ ಪಿ ಗ್ಲೋಬಲ್ ರೇಟಿಂಗ್‌ಗಳು, ಭಾರತದ ಸಾರ್ವಜನಿಕ ಹಣಕಾಸು ಮುಂದಿನ ಎರಡು ಮೂರು ವರ್ಷಗಳಲ್ಲಿ ಕೋವಿಡ್ ಪೂರ್ವದ ಮಟ್ಟಕ್ಕಿಂತ ಸುಧಾರಿಸುವ ಸಾಧ್ಯತೆಯಿಲ್ಲ ಎಂದು ಸೂಚಿಸಿವೆ.

ಈ ವರದಿಯ ಪ್ರಕಾರ, ಭಾರತದ ಸಾಮಾನ್ಯ ಸರ್ಕಾರದ ಕೊರತೆಯು (ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಯೋಜಿತ ಕೊರತೆ) ಸಾಲದ ವಿಷಯದಲ್ಲಿ ದುರ್ಬಲವಾಗಿದೆ. ಪ್ರಸ್ತುತ ಭಾರತದ ವಿತ್ತೀಯ ಕೊರತೆಯು ಜಿಡಿಪಿಯ ಶೇ.5.9ರಷ್ಟಿದೆ. 2025-26ರ ವೇಳೆಗೆ ಅದನ್ನು ಶೇ.4.5ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಮುಂಬರುವ ಸಾರ್ವತ್ರಿಕ ಚುನಾವಣೆ ಮತ್ತು ಹಲವಾರು ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ವಿತ್ತೀಯ ಕೊರತೆಗಳು ಶೀಘ್ರದಲ್ಲೇ ಕಡಿಮೆಯಾಗುತ್ತವೆ ಎಂದು ನಿರೀಕ್ಷಿಸುವುದು ಕಷ್ಟ.

ಕಡಿಮೆ ವಿತ್ತೀಯ ಕೊರತೆಯು ವೆಚ್ಚವನ್ನು ಬಿಗಿಗೊಳಿಸುವುದು ತುಂಬಾ ಅವಶ್ಯಕವಾಗಿದೆ. ಸಾಮಾನ್ಯವಾಗಿ ಸರ್ಕಾರಗಳು ಚುನಾವಣಾ ವರ್ಷದಲ್ಲಿ ಜನಪ್ರಿಯವಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ದೂರವಿರುತ್ತವೆ. ಇದು ವಿತ್ತೀಯ ಕೊರತೆಯ ಮೇಲೆ ಮತ್ತಷ್ಟು ಒತ್ತಡ ಉಂಟುಮಾಡುತ್ತದೆ. ಇತ್ತೀಚಿನ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಅಂದಾಜುಗಳ ಪ್ರಕಾರ, ಸರ್ಕಾರದ ಸಾಲವು 2022ರಲ್ಲಿದ್ದ ಜಿಡಿಪಿಯ ಶೇ.81.0ರಿಂದ 2023ರಲ್ಲಿ ಶೇ.81.9ಕ್ಕೆ ಹಾಗೂ 2024ರಲ್ಲಿ ಶೇ.82.3ಕ್ಕೆ ಏರುವ ಸಾಧ್ಯತೆ ಇದೆ. ಆದಾಗ್ಯೂ, ಇದು 2028ರಲ್ಲಿ ಶೇ.80.5ಕ್ಕೆ ಕ್ರಮೇಣ ಕುಸಿಯುವ ನಿರೀಕ್ಷೆಯಿದೆ.

ಎಫ್​ಆರ್​ಬಿಎಂ ಪರಿಶೀಲನಾ ಸಮಿತಿಯ ಶಿಫಾರಸುಗಳ ಪ್ರಕಾರ, ಸಂಯೋಜಿತ ಸರ್ಕಾರದ ಸಾಲವನ್ನು ಜಿಡಿಪಿಯ ಶೇ.60ಕ್ಕೆ (ಕೇಂದ್ರಕ್ಕೆ ಶೇ.40ರಷ್ಟು, ರಾಜ್ಯಗಳಿಗೆ ಶೇ.20ರಷ್ಟು) ಇಳಿಸಬೇಕು. ಆದಾಗ್ಯೂ, 2022-23ರಲ್ಲಿ ರಾಜ್ಯಗಳ ಸಾಲವು ಅವರ ಬಜೆಟ್ ಅಂದಾಜಿನ ಪ್ರಕಾರ, ಡಿಜಿಪಿಯ ಶೇ.29.5ರಷ್ಟಿದೆ. ಇಂತಹ ಸಂದರ್ಭದಲ್ಲಿ ಕೆಲವು ರಾಜ್ಯಗಳಿಂದ ಅತಿಯಾದ ಸಾಲಗಳು ಆತಂಕಕಾರಿ ಪ್ರವೃತ್ತಿಯಾಗಿದೆ. ಹೀಗಾಗಿ, ಸ್ಥಳೀಯ ಸರ್ಕಾರದ ಸಾಲದ ಹೊರೆ ನಿಯಂತ್ರಣದಿಂದ ಹೊರಗುಳಿದ ಮತ್ತು ದೇಶದ ಆರ್ಥಿಕ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದ ಚೀನಾದ ಅನುಭವವನ್ನು ನೆನಪಿಟ್ಟುಕೊಳ್ಳುವುದು ಸೂಕ್ತವಾಗಿದೆ.

ಸಾಲ ನಿಭಾಯಿಸುವುದು..: ದೇಶದ ಸಾಲವನ್ನು ನಿರ್ವಹಿಸುವ ಯಾವುದೇ ನೀತಿಯು ಸಾಲದ ಎರಡು ಅಂಶಗಳನ್ನು ಕೇಂದ್ರೀಕರಿಸುವ ಅಗತ್ಯವಿದೆ. ಮೊದಲನೆಯದು ಖಾಸಗಿ ಸಾಲ ಮತ್ತು ಇನ್ನೊಂದು ಸಾರ್ವಜನಿಕ ಸಾಲ. ಖಾಸಗಿ ಋಣಭಾರವನ್ನು ನಿರ್ವಹಿಸಲು, ದೇಶದಲ್ಲಿ ನಿರಂತರ ಆಧಾರದ ಮೇಲೆ ಮನೆ ಹಿಡುವಳಿ ಮತ್ತು ಹಣಕಾಸೇತರ ಕಾರ್ಪೊರೇಟ್ ಸಾಲದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಗುರಿಯನ್ನು ಹೊಂದಿರುವ ನೀತಿಗಳ ಅವಶ್ಯಕತೆಯಿದೆ.

ಮತ್ತೊಂದೆಡೆ, ಪರಿಣಾಮಕಾರಿ ಸಾರ್ವಜನಿಕ ಸಾಲ ನಿರ್ವಹಣೆಯು ಹಣಕಾಸಿನ ಚೌಕಟ್ಟು ಹೊಂದುವುದು. ಇದು ಖರ್ಚು ಮತ್ತು ಸಾಲದ ಸಮರ್ಥನೀಯತೆಯ ಸಮತೋಲನಕ್ಕೆ ಮತ್ತಷ್ಟು ಮಾರ್ಗದರ್ಶನ ನೀಡುತ್ತದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಏಕಕಾಲದಲ್ಲಿ ಅನುತ್ಪಾದಕ ವೆಚ್ಚದ ಮೇಲೆ ಮಿತಿಯನ್ನು ಇಟ್ಟುಕೊಂಡು ಹೆಚ್ಚುವರಿ ತೆರಿಗೆ ಆದಾಯ ತರುವ ಸಾಮರ್ಥ್ಯವನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ.

ರಾಜ್ಯಗಳು ತಮ್ಮ ಸಾಲಗಳ ಬಗ್ಗೆ ಸಾಕಷ್ಟು ಜಾಗರೂಕರಾಗಿರಬೇಕು. ಚುನಾವಣಾ ಲಾಭಕ್ಕಾಗಿ ಭಾರಿ ಅನುತ್ಪಾದಕ ವೆಚ್ಚದಿಂದ ದೂರವಿರಬೇಕು. ಬದಲಿಗೆ ವೆಚ್ಚದ ಗುಣಮಟ್ಟವನ್ನು ಸುಧಾರಿಸಲು ಮತ್ತು ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಗಮನಹರಿಸುವುದರಿಂದ ಉತ್ತಮ ಹಣಕಾಸಿನ ಸ್ಥಿತಿಯಲ್ಲಿ ಇರಿಸಬಹುದು. ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತಕ್ಕೆ ತನ್ನ ಬೆಳವಣಿಗೆಯ ಕಥೆಗೆ ಸಾಕಷ್ಟು ಬಂಡವಾಳದ ಅಗತ್ಯವಿದೆ. ಇದಕ್ಕೆ ಪ್ರತಿಯಾಗಿ ಕಡಿಮೆ ಸಾಲದ ಹೊರೆ ಇರುವುದನ್ನು ಖಚಿತಪಡಿಸುವ ಹಣಕಾಸಿನ ನೀತಿಯ ಅಗತ್ಯ ಇದೆ. ಇದು ದೇಶಕ್ಕೆ ಸಾಕಷ್ಟು ಹಣಕಾಸಿನ ಅವಕಾಶವನ್ನು ಸೃಷ್ಟಿಸುತ್ತದೆ ಮತ್ತು ತಾಜಾ ಹೂಡಿಕೆಗಳು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: ಭಾರತದ ವೈಜ್ಞಾನಿಕ ಸಂಶೋಧನಾ ಕ್ಷೇತ್ರಕ್ಕೆ ಬೇಕಿದೆ ಕಾಯಕಲ್ಪ.. ಏಕೆ ಗೊತ್ತಾ?

Last Updated : Nov 4, 2023, 9:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.