ETV Bharat / opinion

ಪಾಕಿಸ್ತಾನದ ಪ್ರಜಾಪ್ರಭುತ್ವವಾದಿ ಚಳವಳಿಯಿಂದ ಖ್ವೆಟ್ಟಾ ಪ್ರತಿಭಟನೆ: ವಿಶ್ಲೇಷಣೆ

author img

By

Published : Oct 27, 2020, 10:48 AM IST

ಸೆಪ್ಟೆಂಬರ್‌ನಲ್ಲಿ ಪಿಡಿಎಂ ಸ್ಥಾಪನೆಯೂ ಆಗಿದ್ದು, ಪಿಎಂಎಲ್‌ಎನ್‌ (ಪಾಕಿಸ್ತಾನ್ ಮುಸ್ಲಿಮ್ ಲೀಗ್ ನವಾಝ್), ಪಿಪಿಪಿ (ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ), ಜೆಯುಎಲ್‌ಎಫ್ (ಜಮಿಯಾ ಉಲೆಮಾ ಇ ಇಸ್ಲಾಮ್ ಫಜ್ಲುರ್) ಮತ್ತು ಪಾಖ್ತುಂಖ್ವಾ ಮಿಲ್ಲಿ ಅವಾಮಿ ಪಕ್ಷವು ಪ್ರಮುಖವಾಗಿ ಇದರಲ್ಲಿವೆ. ಇತರ ಪಕ್ಷಗಳೆಂದರೆ ಬಲೂಚ್‌ ನ್ಯಾಷನಲ್ ಪಾರ್ಟಿ ಮತ್ತು ಪಾಷ್ತೂನ್‌ ತಹಫುಜ್‌ ಮೂಮೆಂಟ್‌ ಎಲ್ಲವೂ ತಮ್ಮ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಪಿಡಿಎಂ ರೂಪಿಸಿವೆ.

ಖ್ವೆಟ್ಟಾ ಪ್ರತಿಭಟನೆ
ಖ್ವೆಟ್ಟಾ ಪ್ರತಿಭಟನೆ

ಪಿಡಿಎಂ (ಪಾಕಿಸ್ತಾನ್‌ ಡೆಮಾಕ್ರಟಿಕ್ ಮೂಮೆಂಟ್‌) 11 ಪಕ್ಷಗಳ ಸಂಘಟನೆಯಾಗಿದ್ದು, ಅಕ್ಟೋಬರ್ 25ರಂದು ಖ್ವೆಟ್ಟಾದಲ್ಲಿ ಮೂರನೇ ಬಾರಿಗೆ ತನ್ನ ಬೀದಿ ಬದಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಸರ್ಕಾರ ವಿರೋಧಿ ರಾಜಕೀಯ ಪಕ್ಷಗಳ ಒಕ್ಕೂಟವಾಗಿರುವ ಇದು, ದೇಶದ ಅಧಿಕಾರ ವಲಯದಲ್ಲಿ ಮಹತ್ವದ ಬದಲಾವಣೆಗೆ ಸೂಚಕವಾಗಿದೆ.

ಲಂಡನ್‌ನಿಂದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ವಿಡಿಯೋ ಲಿಂಕ್‌ ಮೂಲಕ ಮಾಡಿದ ತೀಕ್ಷ್ಣ ಭಾಷಣವು, ಪಾಕಿಸ್ತಾನದ ರಾಜಕೀಯ ಅಖಾಡಕ್ಕೆ ಅವರು ಪ್ರವೇಶಿಸುವ ಸೂಚನೆಯನ್ನು ನೀಡಿದೆ. 1999ರಲ್ಲಿ ಜನರಲ್ ಮುಷರಫ್‌ ಸೇನಾ ದಂಗೆ ನಡೆಸಿದ ನಂತರ ಬಂಧನಕ್ಕೊಳಗಾದ ಮತ್ತು ಜೈಲಿಗೆ ಹೋಗಿ ಬಂದ ಅತ್ಯಂತ ಹಿರಿಯ ಮತ್ತು ಅನುಭವಿ ರಾಜಕೀಯ ನಾಯಕ ಷರೀಫ್‌.

ಪಾಕಿಸ್ತಾನದಲ್ಲಿ ಪ್ರಸ್ತುತ ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಸರ್ಕಾರವು 2018 ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಏರಿದ್ದು, ರಾವಲ್ಪಿಂಡಿಯಲ್ಲಿನ ಸೇನೆ ‘ಆಯ್ಕೆ’ ಮಾಡಿರುವಂತೆ ತೋರುತ್ತಿದೆ. ಸೇನಾ ಮುಖ್ಯಸ್ಥ ಖಮರ್‌ ಜಾವೇದ್ ಬಾಜ್ವಾ ಮಾತಿಗೆ ಪ್ರಧಾನಿ ಖಾನ್ ತಲೆಯಾಡಿಸುತ್ತಿರುವಂತೆ ತೋರುತ್ತಿದೆ. ಸೇನಾ ಮುಖ್ಯಸ್ಥರ ಅಧಿಕಾರಾವಧಿಯನ್ನು ಖಾನ್‌ ಮುಂದುವರಿಸಿರುವುದು ಕೇವಲ ಜನರ ಹುಬ್ಬೇರಿಸುವಂತೆ ಮಾಡಿದ್ದಲ್ಲ. ಇದರಿಂದಾಗಿ ಸೇನಾಮುಖ್ಯಸ್ಥರು ಮತ್ತು ಪ್ರಧಾನಿ ಅವಲಂಬನೆಯನ್ನು ಇನ್ನಷ್ಟು ಹೆಚ್ಚಳ ಮಾಡಿವೆ. ವಿಚಿತ್ರವೆಂದರೆ, 1990 ರಲ್ಲಿ ಪ್ರಧಾನಿಯಾಗಿ ಮೊದಲ ಬಾರಿಗೆ ನವಾಜ್‌ ಷರೀಫ್‌ ಅಧಿಕಾರಕ್ಕೇರಿದಾಗ, ಅವರನ್ನೂ ಸೇನೆ ಆಯ್ಕೆ ಮಾಡಿದೆ ಎಂದೇ ಆರೋಪಿಸಲಾಗಿತ್ತು.

ತನ್ನ ರಾಜಕೀಯ ವಿರೋಧಿಗಳನ್ನು ಮಣಿಸುವ ಉದ್ದೇಶವನ್ನೇ ಎರಡು ವರ್ಷಗಳ ಆಡಳಿತ ಗಮನ ಹರಿಸಿರುವುದು, ಪಾಕಿಸ್ತಾನದ ಬೀದಿ ಬೀದಿಯಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ ಮತ್ತು ಇದೇ ಕಾರಣಕ್ಕೆ ಸೆಪ್ಟೆಂಬರ್‌ನಲ್ಲಿ ಪಿಡಿಎಂ ಸ್ಥಾಪನೆಯೂ ಆಗಿದೆ. ನಾಲ್ಕು ಪ್ರಮುಖ ವಿಪಕ್ಷಗಳಾದ ಪಿಎಂಎಲ್‌ಎನ್‌ (ಪಾಕಿಸ್ತಾನ್ ಮುಸ್ಲಿಮ್ ಲೀಗ್ ನವಾಝ್), ಪಿಪಿಪಿ (ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ), ಜೆಯುಎಲ್‌ಎಫ್ (ಜಮಿಯಾ ಉಲೆಮಾ ಇ ಇಸ್ಲಾಮ್ ಫಜ್ಲುರ್) ಮತ್ತು ಪಾಖ್ತುಂಖ್ವಾ ಮಿಲ್ಲಿ ಅವಾಮಿ ಪಕ್ಷವು ಪ್ರಮುಖವಾಗಿ ಇದರಲ್ಲಿವೆ. ಇತರ ಪಕ್ಷಗಳೆಂದರೆ ಬಲೂಚ್‌ ನ್ಯಾಷನಲ್ ಪಾರ್ಟಿ ಮತ್ತು ಪಾಷ್ತೂನ್‌ ತಹಫುಜ್‌ ಮೂಮೆಂಟ್‌ ಎಲ್ಲವೂ ತಮ್ಮ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಪಿಡಿಎಂ ರೂಪಿಸಿವೆ.

ಈ ಇಮ್ರಾನ್ ಖಾನ್‌ ವಿರೋಧಿ ದಳದ ಅಧ್ಯಕ್ಷರಾಗಿ ಪಾಷ್ತುಮ್ ನಾಯಕ ಜೆಯುಎಲ್‌ಎಫ್‌ನ ಫಜ್ಲುರ್‌ ರಹಮಾನ್‌ ಇದ್ದಾರೆ ಮತ್ತು ಯುವ ನಾಯಕಿ ಹಾಗೂ ಪಿಎಂಎಲ್‌ಎನ್‌ನ ಉಪಾಧ್ಯಕ್ಷೆ ಮರ್ಯಮ್ ನವಾಝ್‌ ಇದ್ದಾರೆ. ಇವರು ನವಾಜ್‌ ಶರೀಫ್‌ ಪುತ್ರಿಯಾಗಿದ್ದಾರೆ. ಪಿಪಿಪಿ ಮುಖ್ಯಸ್ಥ ಹಾಗೂ ಜುಲ್ಫಿಕರ್ ಅಲಿ ಭುಟ್ಟೋ (ಪಾಕಿಸ್ತಾನದ ಜನರಲ್‌ ಜಿಯಾ ಉಲ್‌ ಹಖ್‌ರಿಂದ ನೇಣಿಗೇರಿಸಲ್ಪಟ್ಟ ಮಾಜಿ ಪ್ರಧಾನಿ) ಮೊಮ್ಮಗ ಮತ್ತು 2007 ಡಿಸೆಂಬರ್‌ನಲ್ಲಿ ಹತ್ಯೆಗೀಡಾದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋ ಪುತ್ರ ಬಿಲಾಲ್‌ ಭುಟ್ಟೋ ಝರ್ದಾರಿ ಇದ್ದಾರೆ.

ಹಲವು ದಶಕಗಳಿಂದಲೂ ಪಾಕಿಸ್ತಾನದಲ್ಲಿ ಅಧಿಕಾರವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಮತದಾರರ ಆಯ್ಕೆಯನ್ನು ಕಡೆಗಣಿಸಿದ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ ಷರೀಫ್‌ “ಈ ಉತ್ಸಾಹವನ್ನು ನೋಡಿದರೆ, ಯಾರೂ ಇನ್ನು ಮತದಾರರ ಗೌರವವನ್ನು ಉಲ್ಲಂಘಿಸುವ ಪ್ರಯತ್ನ ಮಾಡುವುದಿಲ್ಲ. ಈ ಉತ್ಸಾಹವನ್ನು ನಾನು ಗುಜ್ರನ್‌ವಾಲಾ ಮತ್ತು ಕರಾಚಿಯಲ್ಲಿ ಗಮನಿಸಿದ್ದೇನೆ. ಈಗ ಇದು ಖ್ವೆಟ್ಟಾದಲ್ಲಿ ಕಾಣಿಸುತ್ತಿದೆ” ಎಂದಿದ್ದಾರೆ.

ಪಿಡಿಎಂ ಕಳೆದ ಕೆಲವು ತಿಂಗಳುಗಳಲ್ಲಿ ಒಂದಾದ ಮೇಲೆ ಒಂದರಂತೆ ಗುಜ್ರನ್‌ವಾಲಾ, ಪಂಜಾಬ್‌ ಮತ್ತು ಕರಾಚಿ ಹಾಗೂ ಸಿಂದ್‌ನಲ್ಲಿ ನಡೆಸಿದ ಪ್ರತಿಭಟನೆಗಳನ್ನು ಗಮನದಲ್ಲಿಟ್ಟುಕೊಂಡು ಷರೀಫ್‌ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಅತ್ಯಂತ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಇರುವ ಪಂಜಾಬ್‌, ಸಿಂದ್‌ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ವ್ಯಾಪಿಸುವ ಉದ್ದೇಶದಿಂದ ಖ್ವೆಟ್ಟಾ, ಬಲೂಚಿಸ್ತಾನ ಪ್ರತಿಭಟನೆಗಳು ನಡೆದಿವೆ. ಇಮ್ರಾನ್ ಖಾನ್‌ ಸರ್ಕಾರಕ್ಕೆ ಈ ಪ್ರತಿಭಟನೆಗಳು ನೀಡಿದ ಸಂಕೇತವೂ ಸ್ಪಷ್ಟವಾಗಿವೆ.

ಪಿಡಿಎಂ ನಿಲುವಿನಲ್ಲಿ ಅತ್ಯಂತ ವಿಶಿಷ್ಟವಾದ ಸಂಗತಿಯೆಂದರೆ, ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಸೇನೆಯನ್ನು ತೆಗಳಿದ್ದಾರೆ ಮತ್ತು ತಾನು ಅಧಿಕಾರದಿಂದ ಕೆಳಗಿಳಿಯಲು ಜನರಲ್‌ ಬಾಜ್ವಾ ನೇರ ಕಾರಣ ಎಂದು ಆರೋಪಿಸಿದ್ದಾರೆ.

ಗುಜರನ್‌ವಾಲಾದಲ್ಲಿ (ಅಕ್ಟೋಬರ್ 16) ಪಿಡಿಎಂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನವಾಜ್‌ ಷರಿಫ್‌, ಸೇನೆಯು ಎಲ್ಲಕ್ಕಿಂತ ಮೇಲಿನ ಸ್ತರದಲ್ಲಿದೆ ಎಂದು ಆರೋಪಿಸಿದ್ದಾರೆ ಮತ್ತು ನ್ಯಾಯಾಂಗದ ಜೊತೆಗೆ ಬಾಜ್ವಾ ಸೇರಿಕೊಂಡಿರುವುದಾಗಿಯೂ ಹೇಳಿದ್ದಾರೆ. ಅಷ್ಟೇ ಅಲ್ಲ, ತನ್ನನ್ನು ತೆಗೆದುಹಾಕಿ ಇಮ್ರಾನ್ ಖಾನ್‌ರನ್ನು ನಕಲಿ ಚುನಾವಣೆಯ ಮೂಲಕ ಅಧಿಕಾರಕ್ಕೆ ಏರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ರಿಮೋಟ್ ಕಂಟ್ರೋಲ್‌ ಸಹಿತ ಸೇನಾ ದಂಗೆ ಎಂದು ಕರೆಯಬಹುದು ಎಂದೂ ಅವರು ಹೇಳಿದ್ದಾರೆ.

ಪಾಕಿಸ್ತಾನದ ಸನ್ನಿವೇಶದಲ್ಲೂ ಅತ್ಯಂತ ವಿಚಿತ್ರ ಬೆಳವಣಿಗೆಯೊಂದರಲ್ಲಿ, ಕರಾಚಿ ಪಿಡಿಎಂ ಪ್ರತಿಭಟನೆಯ ನಂತರ (ಅಕ್ಟೋಬರ್ 18) ಪಾಕಿಸ್ತಾನದ ಸೇನೆಯ ನಿಯಂತ್ರಣದಲ್ಲಿರುವ ಪಾಕಿಸ್ತಾನಿ ರೇಂಜರ್‌ಗಳು ಕರಾಚಿಯ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ನವಾಜ್‌ ಷರೀಫ್‌ರ ಅಳಿಯನನ್ನು ದುರುದ್ದೇಶದಿಂದ ಬಂಧಿಸಿದ್ದಾರೆ. ಇದರಿಂದಾಗಿ ಸಿಂಧ್‌ ಇನ್‌ಸ್ಪೆಕ್ಟರ್ ಜನರಲ್‌ ಮುಷ್ತಾಖ್ ಮಹ್ರನ್‌ ಪ್ರತಿಭಟನಾಪೂರ್ವಕವಾಗಿ ರಜೆ ಹಾಕಿದ್ದು, ಇದರಿಂದ ಪ್ರೇರಿತರಾಗಿ ಅವರ ಅಧೀನ ಅಧಿಕಾರಿಗಳೂ ರಜೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಈ ಸನ್ನಿವೇಶವು ಪಾಕ್‌ ಸೇನೆ ಮತ್ತು ಸಿಂಧ್‌ ಪೊಲೀಸರ ಮಧ್ಯೆ ವಿಚಿತ್ರ ಸನ್ನಿವೇಶವನ್ನು ಸೃಷ್ಟಿಸಿದೆ ಮತ್ತು ಸೇನೆ ಮುಖ್ಯಸ್ಥ ಜನರಲ್‌ ಬಾಜ್ವಾ ಮಧ್ಯಪ್ರವೇಶ ಮಾಡುವಂತೆ ಪಿಪಿಪಿ ಮುಖ್ಯಸ್ಥ ಬಿಲಾವಲ್‌ ಭುಟ್ಟೋ ಝರ್ದಾರಿ ಆಗ್ರಹಿಸಿದ್ದಾರೆ.

ಪೊಲೀಸರ ಸಂವೇದನೆಗಳನ್ನು ಆಲಿಸುವುದಕ್ಕಾಗಿ ವಿಚಾರಣೆಯನ್ನು ನಡೆಸಲು ನಿರ್ಧರಿಸಲಾಗಿದ್ದು, 10 ದಿನಗಳಲ್ಲಿ (ಅಕ್ಟೋಬರ್ 30) ವರದಿಯನ್ನು ಈ ತನಿಖೆ ಸಲ್ಲಿಸಲಿದೆ. ಈ ಮಧ್ಯೆ, ಪ್ರತಿಭಟನೆಯನ್ನು ಪೊಲೀಸ್ ಐಜಿ ಮುಂದೂಡಿದ್ದಾರೆ. ಆದರೂ, ಪರಿಸ್ಥಿತಿ ಉದ್ವಿಗ್ನವಾಗಿಯೇ ಮುಂದುವರಿದಿದೆ. ಈ ಕರಾಚಿ ಘಟನೆಯ ಬಗ್ಗೆ ಖ್ವೆಟ್ಟಾದಲ್ಲಿ ಮಾತನಾಡಿದ ಮರ್ಯಮ್‌ ನವಾಝ್‌, ಸೇನೆಯು ಎಲ್ಲಕ್ಕಿಂತ ಉನ್ನತ ಸ್ಥಾನದಲ್ಲಿದೆ ಎಂಬ ಹೇಳಿಕೆಗೆ ಈ ಘಟನೆ ಪುಷ್ಠೀಕರಿಸಿದೆ ಎಂದಿದ್ದಾರೆ. ಐಜಿ ಅನ್ನು ಅಪಹರಿಸಿರುವುದು, ನನ್ನ ಹೋಟೆಲ್‌ ಮತ್ತು ಕೋಣೆಗೆ ದಾಳಿ ನಡೆಸಿದ ರೀತಿ ಇದಕ್ಕೆ ಪೂರಕ ಎಂದೂ ಅವರು ಹೇಳಿದ್ದಾರೆ. ಸ್ಥಳೀಯ ಬಲೂಚ್‌ ಜನರು ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ದಳದ ವಿರುದ್ಧ ಆಕ್ರೋಶದ ಬಗ್ಗೆ ಮಾತನಾಡಿದ ಅವರು “ದೇಶದ ಪುತ್ರಿಯರ ಕೋಣೆಗೆ ನುಗ್ಗಿ ನಿಮ್ಮ ವಿರೋಧಿಗಳು ದಾಂಧಲೆ ನಡೆಸಿದರೆ ಅದರ ಮಾನಸಿಕ ಸ್ಥಿತಿ ಯಾವುದಾಗಿರುತ್ತದೆ ಎಂಬುದನ್ನು ಬಲೂಚಿಸ್ತಾನದ ಜನರು ಅರ್ಥ ಮಾಡಿಕೊಳ್ಳಬಹುದು. ಸೇನೆ ಎಲ್ಲಕ್ಕಿಂತ ಮೇಲಿನ ಸ್ಥಾನದಲ್ಲಿದೆ ಎಂದರೆ ಏನು ಎಂಬುದರ ಪ್ರಾಯೋಗಿಕ ಪ್ರದರ್ಶನವನ್ನು ಅವರು ಮಾಡಿದ್ದಾರೆ.”

ಪ್ರತಿಭಟನೆಯಿಂದಾಗಿ ಮತ್ತು ಸೇನೆಯ ಮುಖಂಡರ ಗೌಪ್ಯ ಬೆಂಬಲದಿಂದ ಪ್ರಧಾನಿ ಇಮ್ರಾನ್‌ ಖಾನ್‌ ಅಧಿಕಾರಕ್ಕೇರಿದ್ದಾರೆ. ಸೇನೆಯು ತಮ್ಮ ಮಾತು ಕೇಳುವ ಪ್ರಜಾಪ್ರಭುತ್ವ ಮುಖವಾಡದ ಅಧಿಕಾರಿ ಬೇಕಾಗಿತ್ತು. ಅದು ಇಮ್ರಾನ್ ಖಾನ್ ಮೂಲಕ ಈಡೇರಿದೆ.

ಸದ್ಯ ಜನರಲ್ ಬಾಜ್ವಾಗೆ ನೀಡಿರುವ ಅಧಿಕಾರಾವಧಿ ವಿಸ್ತರಣೆಯ ಬಗ್ಗೆ ಮತ್ತು ಮುಂದಿನ ಸೇನಾ ಮುಖ್ಯಸ್ಥರನ್ನು ಆಯ್ಕೆ ಮಾಡುವ ವಿಧಾನದ ಬಗ್ಗೆ ಸೇನೆಯಲ್ಲೇ ಅಪಸ್ವರ ಎದ್ದಿದೆ. ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುತ್ತಿರುವುದಕ್ಕಿಂತ ದೊಡ್ಡದಾದ ಹಲವು ಸವಾಲನ್ನು ಪ್ರಧಾನಿ ಇಮ್ರಾನ್‌ ಖಾನ್‌ ಹೊಂದಿದ್ದಾರೆ. ನಾನು ನಿಜವಾದ ಪ್ರಜಾಪ್ರಭುತ್ವವಾದಿ ನಾಯಕ ಎಂದು ಹೇಳಿಕೊಂಡ ಇಮ್ರಾನ್‌ ಹೇಳಿಕೆ ಈಗ ಪರೀಕ್ಷೆಗೊಳಪಟ್ಟಿದೆ. ಖ್ವೆಟ್ಟಾದಲ್ಲಿನ ಪ್ರತಿಭಟನೆ ಇದನ್ನು ಪ್ರಮಾಣೀಕರಿಸಿದೆ.

ಪಾಕಿಸ್ತಾನದ ಒಳಗೆ ಕುದಿಯುತ್ತಿರುವ ಕುಲುಮೆಯನ್ನು ದೆಹಲಿ ಮತ್ತು ಬೀಜಿಂಗ್‌ ತನ್ನದೇ ದೃಷ್ಟಿಕೋನವನ್ನು ಆಧರಿಸಿ ಗಮನಿಸುತ್ತಿವೆ.

- ಸಿ.ಉದಯ ಭಾಸ್ಕರ್‌,

ನಿರ್ದೇಶಕರು, ರಾಜಕೀಯ ಅಧ್ಯಯನಗಳ ಸಮಾಜ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.