ETV Bharat / opinion

ವಿಶೇಷ ಅಂಕಣ: ಸಾರ್ವಜನಿಕ ನಿಲುವು ಮತ್ತು ರಾಷ್ಟ್ರ ನಿರ್ಮಾಣ ಎರಡೂ ರಾಜಕೀಯದ ಅವಿಭಾಜ್ಯ ಅಂಗ - Prime Minister, Narendra Modi’

ಚೀನಾದ ಪಡೆಗಳು ಗಾಲ್ವಾನ್ ಕಣಿವೆಯಲ್ಲಿ ಹಿಂಸಾಚಾರದ ಮೂಲಕ ಗಡಿಯ ಗಸ್ತು ಪಡೆಗಳ ಮೇಲೆ ದಾಳಿ ಮಾಡಿದ ನಂತರ, ಜೂನ್ 15 ರಂದು 20 ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡರು. ಯಾವುದೇ ಘರ್ಷಣೆ ನಡೆಯದಂತೆ ತಪ್ಪಿಸಲು ಇದು ಎಲ್‌ಎಸಿಯ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಚಟುವಟಿಕೆ ನಡೆಸದಂತೆ ಜೂನ್ 6 ರಂದು ಭಾರತ ಮತ್ತು ಚೀನಾ ಎರಡೂ ಕಡೆಯಿಂದ ಒಪ್ಪಿಗೆ ಸೂಚಿಸಿದ್ದರೂ ಚೀನಾ ಈ ಕೃತ್ಯ ಎಸಗಿದೆ.

public-posturing-and-nation-building-two-inseparable-parts-of-politics
ವಿಶೇಷ ಅಂಕಣ: ಸಾರ್ವಜನಿಕ ನಿಲುವು ಮತ್ತು ರಾಷ್ಟ್ರ ನಿರ್ಮಾಣ ಎರಡೂ ರಾಜಕೀಯದ ಅವಿಭಾಜ್ಯ ಅಂಗ
author img

By

Published : Sep 16, 2020, 1:40 PM IST

ನವದೆಹಲಿ: ಸಂಸತ್ತಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಬಿಕ್ಕಟ್ಟಿನ ನಡುವೆ ನಡೆಯುತ್ತಿರುವ ಸಂಸತ್ತಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಖ್‌ ವಾಸ್ತವಿಕ ಗಡಿರೇಖೆಯಲ್ಲಿ ಚೀನಿ ಸೇನೆ ಪಿಎಲ್‌ಎ ವಿರುದ್ಧದ ಭಾರತದ ಸೇನೆಯ ಪ್ರತಿಕ್ರಿಯೆ ಬಗ್ಗೆ ವಿವರಿಸುವ ಸಂದರ್ಭ ದೇಶಪ್ರೇಮದ ತೀವ್ರ ಪ್ರಜ್ಞೆಯನ್ನು ಹುಟ್ಟು ಹಾಕಿದ್ದಾರೆ ಮತ್ತು 1960 ರ ದಶಕದ ಕಟುವಾದ ನೆನಪುಗಳನ್ನು ಮರಳಿ ತಂದಿದ್ದಾರೆ..

ಲಡಾಖ್‌ನ ಒಣ ಬಂಜರು ಪರ್ವತಗಳು ಹುಲ್ಲಿನ ಕಡ್ಡಿ ಬೆಳೆಸುತ್ತವೆಯೋ ಇಲ್ಲವೋ ಆದರೆ ಅದು ಭಾರತದ ಪ್ರಾದೇಶಿಕ ಸಮಗ್ರತೆಗೆ ಇನ್ನೂ ಮೌಲ್ಯವನ್ನು ಹೊಂದಿದೆ ಎಂಬುದನ್ನು ದೇಶದ ರಕ್ಷಣಾ ಸಚಿವರು ಮಾನ್ಸೂನ್ ಅಧಿವೇಶನದ ಎರಡನೇ ದಿನದಂದು ತಮ್ಮ ದೇಶಭಕ್ತಿಯ ಭಾವನಾತ್ಮಕ ಭಾಷಣದಲ್ಲಿ ಒತ್ತಿ ಹೇಳಲು ಪ್ರಯತ್ನಿಸಿದರು.

"ಲಡಾಖ್‌ನ ವಿವಾದತ ಸ್ಥಳದಲ್ಲಿ ಒಂದು ಹುಲ್ಲು ಕೂಡ ಬೆಳೆಯುವುದಿಲ್ಲ" ಎಂದು 1961 ರಲ್ಲಿ ಸಂಸತ್ತಿನಲ್ಲಿ ಜವಾಹರಲಾಲ್ ನೆಹರೂ ಅವರ ಹೇಳಿಕೆಯಂತಲ್ಲದೆ, ರಾಜನಾಥ್ ಸಿಂಗ್ ಅವರು, 'ಭಾರತದ ಭೂಪ್ರದೇಶದ ಒಂದು ಇಂಚು ಸಹ ಯಾವುದೇ ರಾಜಿ ಮಾಡಿಕೊಳ್ಳಲು ಅವಕಾಶವಿಲ್ಲದಂತೆ ' ಕೆಲಸ ಮಾಡುತ್ತಿರುವ ಸೈನಿಕರಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ರಾಜನಾಥ್‌ ಸಿಂಗ್‌ ಅವರ ಈ ಹೇಳಿಕೆ ಬಗ್ಗೆ ವ್ಯಂಗ್ಯವಾಡಿರುವ ನೆಹರೂ ಅವರ ಕಾಂಗ್ರೆಸ್ ಸಹೋದ್ಯೋಗಿಗಳಲ್ಲಿ ಒಬ್ಬರಾದ ಮಹಾವೀರ್ ತ್ಯಾಗಿ ಅವರು, “ಇಲ್ಲಿ ಏನೂ ಬೆಳೆಯುವುದಿಲ್ಲ ಅಷ್ಟು ಮಾತ್ರಕ್ಕೆ ಅದನ್ನು ಬೇರೆಯವರಿಗೆ ನೀಡಬೇಕೇ?” ಅಂದಿನ ನೆಹರೂ ಅವರ ಹೇಳಿಕೆ ಅವರ ರಾಜಕೀಯ ಚಿತ್ರಣವನ್ನು ಕೆಟ್ಟದಾಗಿ ಪ್ರತಿಬಿಂಬಿಸಿತು ಎಂದಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ, ಪ್ರಧಾನಿ ನರೇಂದ್ರ ಮೋದಿಯವರ ಲಡಾಖ್ ಭೇಟಿಯನ್ನು ಶ್ಲಾಘಿಸಿದ ಸಿಂಗ್‌ ಅವರು, ಪ್ರಧಾನಿ ಈ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಭಾರತದ ಸೈನ್ಯದ ಮನೋಸ್ಥೈರ್ಯ ಹೆಚ್ಚಾಗಿದೆ ಎಂದು ರಾಜನಾಥ್‌ ಸಿಂಗ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಎಲ್‌ಎಸಿಯಲ್ಲಿ ಮಿಲಿಟರಿ ಸನ್ನದ್ಧತೆಯ ಬಗ್ಗೆ ವಿವರಿಸಿದ ಸಿಂಗ್, "ಭಾರತವು ದೀರ್ಘಾವಧಿಯವರೆಗೆ ಸೂಕ್ತವಾಗಿ ಸಿದ್ಧವಾಗಿದೆ" ಎಂದು ಹೇಳಿದರು. ಕಠಿಣ ಹವಾಮಾನವನ್ನು ಎದುರಿಸಲು ಸೈನಿಕರಿಗೆ ಅನುಕೂಲ ಕಲ್ಪಿಸಲಾಗಿದೆ, ಲಡಾಖ್‌ನ ಎತ್ತರದ ಪ್ರದೇಶದಲ್ಲಿ ತಾಪಮಾನವು ಮೈನಸ್ 40 ಡಿಗ್ರಿಗೆ ಹೋಗುತ್ತದೆ. ಇದು ಯೋಧರ ಅತಿದೊಡ್ಡ ಶತ್ರುವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಿವರಿಸಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ‌ ಹೇಳಿಕೆಯ ಪ್ರತಿಯೊಂದು ಪದವನ್ನು ನಿಖರವಾಗಿ ಅಳೆದು ತೂಗಿದರೆ. ಅರುಣಾಚಲ ಪ್ರದೇಶದ 90,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶದ ಚೀನಾ ಹಕ್ಕು ಸಾಧಿಸಲು ಯತ್ನಿಸುತ್ತಿದೆ ಮತ್ತು ಪಾಕಿಸ್ತಾನವು ಲಡಾಖ್‌ನಲ್ಲಿ 5,180 ಚದರ ಕಿಲೋಮೀಟರ್ ಭಾರತೀಯ ಭೂಮಿಯನ್ನು ಚೀನಾಕ್ಕೆ ಹಸ್ತಾಂತರಿಸಿದ್ದು, ಎಲ್‌ಎಸಿಯ ಯಥಾಸ್ಥಿತಿಯನ್ನು ಒಪ್ಪಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಚೀನಾವನ್ನು ಸೂಕ್ಷ್ಮವಾಗಿ ಕೇಳುವ ಉಲ್ಲೇಖವಾಗಿದೆ. ಆ ಬಗ್ಗೆ ಇದನ್ನ ಚೀನಾ ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬಂತೆ ತೋರುತ್ತದೆ.

ಎಲ್‌ಎಸಿಯಲ್ಲಿ ಎರಡೂ ಕಡೆಗಳಲ್ಲಿ ಭಾರಿ ಪ್ರಮಾಣದ ಸೇನೆಯ ನಿಯೋಜನೆ ಆಗಿದೆ. ಅದರಲ್ಲೂ ವಿಶೇಷವಾಗಿ ಚೀನಾದ ಪಡೆಗಳು ಗಾಲ್ವಾನ್ ಕಣಿವೆಯಲ್ಲಿ ಹಿಂಸಾಚಾರದ ಮೂಲಕ ಗಡಿಯ ಗಸ್ತು ಪಡೆಗಳ ಮೇಲೆ ದಾಳಿ ಮಾಡಿದ ನಂತರ, ಜೂನ್ 15 ರಂದು 20 ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡರು. ಯಾವುದೇ ಘರ್ಷಣೆ ನಡೆಯದಂತೆ ತಪ್ಪಿಸಲು ಇದು ಎಲ್‌ಎಸಿಯ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಚಟುವಟಿಕೆ ನಡೆಸದಂತೆ ಜೂನ್ 6 ರಂದು ಭಾರತ ಮತ್ತು ಚೀನಾ ಎರಡೂ ಕಡೆಯಿಂದ ಒಪ್ಪಿಗೆ ಸೂಚಿಸಿದ್ದರೂ ಚೀನಾ ಈ ಕೃತ್ಯ ಎಸಗಿದೆ.

ಏಕಪಕ್ಷೀಯ ಲಡಾಖ್‌ನ ವಾಸ್ತವಿಕ ಗಡಿ ರೇಖೆಯ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ರಾಜತಾಂತ್ರಿಕ ಅಥವಾ ಮಿಲಿಟರಿ ಪ್ರಯತ್ನವಾಗಿದ್ದರೂ ಸರಿ ಅವರ ಹಲ್ಲು ಮತ್ತು ಉಗುರುಗಳನ್ನು ಕತ್ತರಿಸಲಾಗುವುದು ಎಂದು ರಾಜನಾಥ್ ಅವರು ಇಂದು ಲೋಕಸಭೆಗೆ ನೀಡಿದ ಹೇಳಿಕೆಯಲ್ಲಿ ಚೀನಾಕ್ಕೆ ಮತ್ತೊಂದು ಪ್ರಾಮಾಣಿಕ ಖಡಕ್‌ ಸಂದೇಶವನ್ನು ರವಾನಿಸಿದರು.

ಇದಕ್ಕೆ ತದ್ವಿರುದ್ಧವಾಗಿ, 1962ಕ್ಕಿಂತ ಮೊದಲು ಭಾರತದ ಮಿಲಿಟರಿ ಸಿದ್ಧತೆ ಕೆಟ್ಟದಾಗಿರಲಿಲ್ಲ. ಭಾರತವು ಪರಿಣಾಮಕಾರಿಯಾಗಿ ಟಿಬೆಟ್, ಖೆನ್ಜೆಮನೆ, ಧೋಲಾ ಪೋಸ್ಟ್ ಮತ್ತು ಮ್ಯಾಕ್ ಮೋಹನ್ ರೇಖೆಯ ಕೆಲ ಪ್ರದೇಶಗಳು ಒಳಗೊಳ್ಳುವ ಥಾಂಗ್ ಲಾ ಪೋಸ್ಟ್‌ನಂತಹ ಅನೇಕ ಹಂತಗಳಲ್ಲಿ ಅನುಕೂಲಕರ ಸ್ಥಾನದಲ್ಲದೆ. ನೆಹರೂ ಸರ್ಕಾರವು 1959 ರಿಂದ ಯುದ್ಧ ಪ್ರಾರಂಭವಾಗುವವರೆಗೂ ಗಸ್ತು ಹುದ್ದೆಗಳ ನಡುವಿನ ಎಲ್ಲಾ ಪ್ರಮುಖ ಅಂತರಗಳನ್ನು ತುಂಬಿತ್ತು. ಸಾಕಷ್ಟು ಸನ್ನದ್ಧತೆ ಮಾಡಲಾಗಿತ್ತು ಆದರೆ ರಾಜಕೀಯ ಮತ್ತು ರಾಜತಾಂತ್ರಿಕ ಭಂಗಿಗಳು ಈಗಿನಂತೆ ಸೂಕ್ತವಾಗಿರಲಿಲ್ಲ. ಸಂಸತ್ತಿನ ಒಳಗೆ ಅಥವಾ ಅದರ ಹೊರಗೆ ಮಾಡಿದ ಹೇಳಿಕೆಗಳು ಹವ್ಯಾಸಿ. ರಾಜಕೀಯ ಭಂಗಿ ಅಪ್ರಬುದ್ಧವಾಗಿತ್ತು. ಗಡಿಗಳನ್ನು ನಿರ್ವಹಿಸುವ ವಿವಿಧ ಪಡೆಗಳ ನಡುವೆ ದೊಡ್ಡ ಸಂವಹನದ ಅಂತರವಿತ್ತು.

ಪೂರ್ವ ಗಡಿಯನ್ನು ನಿರ್ವಹಿಸುವ ಅಸ್ಸಾಂ ರೈಫಲ್‌ನಂತಹ ಸೈನ್ಯವು ಪ್ರಮುಖ ಸೈನ್ಯದೊಂದಿಗೆ ಯಾವುದೇ ಸಂವಹನವನ್ನು ಹೊಂದಿರಲಿಲ್ಲ, ಹೇಗೆಂದರೆ, ಅಂದಿನ ಅಸ್ಸಾಂ ರೈಫಲ್ಸ್ ಪಡೆ ಗಡಿ ಪ್ರೋಟೋಕಾಲ್ ಬಗ್ಗೆ ನಮಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಸರ್ಕಾರಕ್ಕೆ ವರದಿ ಮಾಡುತ್ತದೆ. 60 ರ ದಶಕದಲ್ಲಿ ಗಡಿ ವಿವಾದದ ಬಗ್ಗೆ ಅಂತರರಾಷ್ಟ್ರೀಯ ನಿಲುವು ಅಸಮರ್ಪಕ ಮತ್ತು ಸೂಕ್ತವಲ್ಲವಾಗಿರಲಿಲ್ಲ. ಚೀನಾ ಆಕ್ರಮಣಕಾರನಾಗಿರುವುದರಿಂದ ಅದು ಬಲಿಪಶು ಎಂಬಂತೆ ಜಗತ್ತಿಗೆ ಭಾಸವಾಯಿತು. ಆದರೆ, ಈ ಬಾರಿ ಅದು ಸಂಪೂರ್ಣವಾಗಿ ಬಹಿರಂಗಗೊಂಡಿದೆ. ಅಂದಿನ ನೆಹರೂ ಸರ್ಕಾರಕ್ಕೆ ಹೋಲಿಸಿದರೆ ಈಗ ಅಂತರರಾಷ್ಟ್ರೀಯ ಮಟ್ಟವು ಉತ್ತಮವಾಗಿದೆ.

1959 ರಲ್ಲಿ ದಂಗೆಯ ಸಮಯದಲ್ಲಿ ಟಿಬೆಟಿಯನ್ನರು ಭಾರತಕ್ಕೆ ವಲಸೆ ಬಂದ ನಂತರ ನೆಹರೂ ಅವರ ಕನಸಿನ ಕೂಸಾಗಿದ್ದ ವಿಶೇಷ ಗಡಿನಾಡು ಪಡೆ ರಚಿಸುವ ಕಾರ್ಯತಂತ್ರವು ಈಗ ಸಫಲವಾಗಿದ್ದು, ಈಗ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ ರಹಸ್ಯ ಕಾರ್ಯಾಚರಣೆಯನ್ನು ಎದುರಿಸಲು ತರಬೇತಿ ಪಡೆದಿರುವ ವಿಶೇಷ ಗಡಿನಾಡಿನ ಪಡೆ ರಚನೆಯಾಗಿದೆ. ಆದರೆ ಎಸ್‌ಎಫ್‌ಎಫ್ ಪಡೆಯ ಒಬ್ಬ ಸದಸ್ಯ ಈ ತಿಂಗಳ ಆರಂಭದಲ್ಲಿ ಲಡಾಖ್‌ನಲ್ಲಿ ನಡೆದ ಗಡಿ ಸಂಘರ್ಷದಲ್ಲಿ ಹುತಾತ್ಮರಾಗಿದ್ದಾರೆ.

ಈ ಪಡೆ ಚೀನಾಕ್ಕೆ ದೊಡ್ಡ ಹೊಡೆತವಾಗಿದೆ. ಹೀಗಾಗಿ, ರಾಷ್ಟ್ರ ನಿರ್ಮಾಣದಲ್ಲಿ ನೆಹರೂ ಅವರ ಕೊಡುಗೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಆದರೆ ಎಲ್‌ಎಸಿಯ ಸಂದರ್ಭದಲ್ಲಿ ಸಾರ್ವಜನಿಕ ನಿಲುವು ಏನೆಂಬುದನ್ನ ರಾಜಕಾರಣಿಗಳು ತಿಳಿದುಕೊಳ್ಳಬೇಕು.

ವಿಶೇಷ ಬರಹ: ಬಿಲಾಲ್ ಭಟ್​​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.