ETV Bharat / opinion

JEE ಅಡ್ವಾನ್ಸ್ಡ್​​ 2022 ಪರೀಕ್ಷೆ ಬರೆಯುತ್ತಿದ್ದೀರಾ?: ನಿಮ್ಮ ಪರೀಕ್ಷಾ ತಯಾರಿ ಹೀಗಿರಲಿ! - ನಿಮ್ಮ ಪರೀಕ್ಷಾ ತಯಾರಿ ಹೀಗಿರಲಿ

ಮುಂಬರುವ ಜೆಇಇ ಅಡ್ವಾನ್ಸ್ಡ್ ಪೇಪರ್-1 ಮತ್ತು ಪೇಪರ್-2 ಕೂಡ ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿರುತ್ತವೆ. ಪ್ಯಾರಾಗ್ರಾಫ್ ಮತ್ತು ಮ್ಯಾಟ್ರಿಕ್ಸ್ ಹೊಂದಾಣಿಕೆಯ ಪ್ರಶ್ನೆಗಳ ಜೊತೆಯಲ್ಲಿ ಈ ರೀತಿಯ ಪ್ರಶ್ನೆಗಳನ್ನು ಅಭ್ಯಾಸ ಮಾಡಿದರೆ ಪರೀಕ್ಷೆ ಪಾಸಾಗಲು ಇನ್ನಷ್ಟು ಸುಲಭವಾಗಬಹುದು

JEE ಅಡ್ವಾನ್ಸ್ಡ್​​ 2022 ಪರೀಕ್ಷೆ ಬರೆಯುತ್ತಿದ್ದೀರಾ? ನಿಮ್ಮ ಪರೀಕ್ಷಾ ತಯಾರಿ ಹೀಗಿರಲಿ!
http://10.10.50.90//english/29-July-2022/jee-main_2907newsroom_1659090869_762.jpg
author img

By

Published : Aug 10, 2022, 11:50 AM IST

ಜೆಇಇ ಅಡ್ವಾನ್ಸ್ಡ್​ ಪರೀಕ್ಷೆ ತೆಗೆದುಕೊಂಡಿದ್ದೀರಾ. ಹಾಗಾದರೆ, ಪರೀಕ್ಷಾಂಕ್ಷಿಗಳು ಐಐಟಿ ಬಾಂಬೆ 2007 ಮತ್ತು 2015 ರ ಪ್ರಶ್ನೆಪತ್ರಿಕೆ ಮಾದರಿಗಳನ್ನು ಒಮ್ಮೆ ಅವಲೋಕಿಸಿ, ಅವುಗಳನ್ನ ಅನುಸರಿಸಿದರೆ, ಸಾಮಾನ್ಯ ವಿಷಯಗಳ ಮೇಲೆ ಕೇಂದ್ರೀಕರಿಸಿ ಅಭ್ಯಾಸ ಮಾಡಿದರೆ ನಾನಾ ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ ಜೆಇಇ ಅಡ್ವಾನ್ಸ್ಡ್- 2022ರ ಪ್ರಶ್ನೆಗಳ ಜೊತೆಗೆ... ಪೇಪರ್- 1, ಪೇಪರ್- 2 ಪ್ರಶ್ನೆ ಪತ್ರಿಕೆ ಶೈಲಿಯೂ ಯಶಸ್ಸಿಗೆ ಸಾಕಷ್ಟು ಕೊಡುಗೆ ನೀಡುತ್ತದೆ.

ಪರೀಕ್ಷಾ ತಯಾರಿ ಬಗ್ಗೆ ಕೇಂದ್ರೀಕರಿಸುವುದಾದರೆ,

  • ಪ್ರಶ್ನೆಗಳ ಮಟ್ಟಕ್ಕಿಂತ ಆಯಾ ವಿಭಾಗಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ನಿಗದಿಪಡಿಸಿದ ಧನಾತ್ಮಕ ಮತ್ತು ಋಣಾತ್ಮಕ ಅಂಕಗಳೂ ಸಹ ನಿಮ್ಮ ಯಶಸ್ಸನ್ನು ನಿರ್ಧರಿಸುತ್ತವೆ. 2007 ರಲ್ಲಿದ್ದಕ್ಕಿಂತ 2015 ರ ಪತ್ರಿಕೆಯಲ್ಲಿ ಹೆಚ್ಚಿನ ಪ್ರಶ್ನೆಗಳು ಬಹು-ಆಯ್ಕೆ ಮಾದರಿಯನ್ನು ಹೊಂದಿವೆ ಎಂಬುದನ್ನು ಗಮನಿಸಬಹುದಾಗಿದೆ.
  • ಮುಂಬರುವ ಜೆಇಇ ಅಡ್ವಾನ್ಸ್ಡ್ ಪೇಪರ್-1 ಮತ್ತು ಪೇಪರ್-2 ಕೂಡ ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿರುತ್ತವೆ. ಪ್ಯಾರಾಗ್ರಾಫ್ ಮತ್ತು ಮ್ಯಾಟ್ರಿಕ್ಸ್ ಹೊಂದಾಣಿಕೆಯ ಪ್ರಶ್ನೆಗಳ ಜೊತೆಯಲ್ಲಿ ಈ ರೀತಿಯ ಪ್ರಶ್ನೆಗಳನ್ನು ಅಭ್ಯಾಸ ಮಾಡಿದರೆ ಪರೀಕ್ಷೆ ಇನ್ನಷ್ಟು ಸುಲಭವಾಗಬಹುದು.
  • ನೀವು ಕಳೆದ ಎರಡು ವರ್ಷಗಳ ಜೆಇಇ ಅಡ್ವಾನ್ಸ್ಡ್ ಪೇಪರ್‌ಗಳನ್ನು ನೋಡಿದರೆ, ಪ್ರತಿ ಪತ್ರಿಕೆಯಲ್ಲಿ, ಪ್ರತಿ ವಿಷಯದಲ್ಲಿ ಗರಿಷ್ಠ 20 ಪ್ರಶ್ನೆಗಳನ್ನು ನೀಡಿಲ್ಲ ಎಂಬುದನ್ನ ಗಮಿಸಬಹುದು.
  • ಪೇಪರ್ -1 ಮತ್ತು ಪತ್ರಿಕೆ -2 ವಿಭಾಗಗಳಲ್ಲಿ ಕೇಳಲಾದ ಪ್ರಶ್ನೆಗಳ ಮಾದರಿಯಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ ಎಂಬುದನ್ನು ಮರೆಯಬೇಡಿ.
  • ಒಂದು ಗಂಟೆಯಲ್ಲಿ ಕನಿಷ್ಠ 15 ರಿಂದ 20 ವಿಭಿನ್ನ ಪರಿಕಲ್ಪನೆಯ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಿ ಅಭ್ಯಾಸ ಮಾಡುವ ಕಲೆ ಕರಗತ ಮಾಡಿಕೊಳ್ಳಬೇಕು.
  • ಹೆಚ್ಚು ತೂಕವಿರುವ ವಿಷಯಗಳಲ್ಲಿ ನೇರ ಪ್ರಶ್ನೆಗಳ ಬದಲಿಗೆ ಬಹು ಪರಿಕಲ್ಪನಾ ಪ್ರಶ್ನೆಗಳನ್ನು ಅಭ್ಯಾಸ ಮಾಡಿ
  • ಯಾವುದೇ ವಿಷಯ ಅಥವಾ ಅಧ್ಯಾಯದಲ್ಲಿ ಪರಿಕಲ್ಪನೆಗಳು ಸೀಮಿತವಾಗಿರುತ್ತವೆ ಮತ್ತು ಸಮಸ್ಯೆಗಳು ಅಪರಿಮಿತವಾಗಿವೆ ಎಂಬ ಸತ್ಯವನ್ನು ಅರಿತಿರಬೇಕು.
  • ಪರೀಕ್ಷೆಯಲ್ಲಿ ಎಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ ಇಲ್ಲವೇ ಉತ್ತರ ನೀಡಿದ್ದೇವೆ ಎಂಬುದು ಮುಖ್ಯವಲ್ಲ. ನಾವು ಎದುರಿಸಿದ ಎಷ್ಟು ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ್ದೇವೆ ಎಂಬ ಬಗ್ಗೆ ಆಲೋಚಿಸಬೇಕು
  • ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜೆಇಇ ಅಡ್ವಾನ್ಸ್ಡ್ ವೆಬ್‌ಸೈಟ್‌ನಲ್ಲಿ ಎರಡು ಅಣಕು ಪರೀಕ್ಷೆಗಳನ್ನು ಇರಿಸಲಾಗಿದೆ. ಅವುಗಳನ್ನು ಅಭ್ಯಾಸ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ
  • JEE ಅಡ್ವಾನ್ಸ್ಡ್ ಅಂತಿಮ ಹಂತದಲ್ಲಿ ಕನಿಷ್ಠ 6-ಗಂಟೆಗಳ ಪರೀಕ್ಷೆಗಳನ್ನು ಆನ್‌ಲೈನ್ ಮೋಡ್‌ನಲ್ಲಿ ಅಭ್ಯಾಸ ಮಾಡಿದರೆ, ಉತ್ತಮ ಸ್ಕೋರ್​ ಮಾಡಲು ಸಹಾಯಕವಾಗಬಹುದು.
  • ಪ್ರಶ್ನೆ ಪತ್ರಿಕೆಯಲ್ಲಿ ಉತ್ತರಗಳನ್ನು ಗುರುತಿಸುವ ಮೊದಲು ಸೂಚನೆಗಳನ್ನು ಓದಬೇಕು
  • ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ನೆನಪಿಡಬೇಕಾದ ಪ್ರಮುಖ ವಿಷಯ ಎಂದರೆ ಒಂದು ಪೇಪರ್ ಇನ್ನೊಂದು ಪೇಪರ್​​ ಮೇಲೆ ಪ್ರಭಾವ ಬೀರುವಂತಿರಬಾರದು.
  • ಪೇಪರ್-1 ಚೆನ್ನಾಗಿ ಬರೆದರೆ ಪೇಪರ್-2 ಇನ್ನೂ ಚೆನ್ನಾಗಿ ಬರೆಯಲು ನೆರವಾಗುತ್ತದೆ. ಆದರೆ, ನೀವು ಪೇಪರ್ -1 ಅನ್ನು ಚೆನ್ನಾಗಿ ಬರೆಯದಿದ್ದರೆ, 2ನೇ ಪೇಪರ್ ಅನ್ನು ಇನ್ನೂ ಉತ್ತಮವಾಗಿ ಬರೆಯುತ್ತೀರಿ ಎಂಬ ವಿಶ್ವಾಸದಿಂದ ಮುಂದುವರಿಯಬೇಕು.ಆಗ ಯಶಸ್ಸು ತಾನಾಗೇ ಬರುತ್ತದೆ.
  • ಜೆಇಇ ಅಡ್ವಾನ್ಸ್ಡ್ ಫಲಿತಾಂಶಗಳನ್ನು ಎರಡೂ ಪತ್ರಿಕೆಗಳಲ್ಲಿನ ಒಟ್ಟು ಅಂಕಗಳ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ
  • ಪರೀಕ್ಷಾ ಹಾಲ್‌ನಲ್ಲಿ ಭಾವನೆಗಳಿಂದ ಹೊರಗೆ ಬನ್ನಿ, ನಿಮಗೆ ಎದುರಾಗುವ ಮೊದಲ ಪ್ರಶ್ನೆ ಕಠಿಣವಾಗಿದ್ದರೆ, ಅದನ್ನು ನಕಾರಾತ್ಮಕವಾಗಿ ನೋಡುವ ಬದಲು ಮುಂದಿನ ಪರಿಚಿತ ಪ್ರಶ್ನೆಯ ಮೇಲೆ ಕೇಂದ್ರೀಕರಿ ಉತ್ತರಿಸುವುದು ಉತ್ತಮವಾದ ಮಾರ್ಗವಾಗಿದೆ.
  • ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಕಾರಾತ್ಮಕ ಮನೋಭಾವ ಬಹಳ ಮುಖ್ಯವಾಗುತ್ತದೆ.

- ಎಂ.ಉಮಾ ಶಂಕರ್, ಐಐಟಿ ರಾಷ್ಟ್ರೀಯ ಸಂಯೋಜಕರು, ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ

ಇದನ್ನು ಓದಿ: ಮಷಿನ್​ ಲರ್ನಿಂಗ್​ ಈಗ ಅತ್ಯುನ್ನತ ಕೌಶಲ: ಡೇಟಾ ಸೈಂಟಿಸ್ಟ್​​ಗಳಿಗೆ ಹೆಚ್ಚಿದ ಬೇಡಿಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.