ETV Bharat / opinion

ಪಿಪಿ 15ರಲ್ಲಿ ದೊಡ್ಡ ಹೆಜ್ಜೆ:ಭಾರತ ಚೀನಾ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರಿ ಪ್ರಗತಿ - ಭಾರತ ಚೀನಾ ನಡುವೆ ವಾಸ್ತವಿಕ ಗಡಿ ರೇಖೆ

ಪೂರ್ವ ಲಡಾಖ್‌ನ ಗೋಗ್ರಾ-ಹಾಟ್ ಸ್ಪ್ರಿಂಗ್ಸ್ ವಿಸ್ತರಣೆ ಪ್ರಕ್ರಿಯೆಗೆ ಭಾರತ ಮತ್ತು ಚೀನಾ ಎರಡೂ ಒಪ್ಪಿಗೆ ನೀಡುವುದರೊಂದಿಗೆ ಭಾರತ - ಚೀನಾ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ನಾಂದಿ ಹಾಡಲಾಗಿದೆ. ಈ ಮೂಲಕ ಪ್ರಮುಖ ಸವಾಲನ್ನೂ ಎರಡೂ ರಾಷ್ಟ್ರಗಳು ಜಯಿಸಿರಬಹುದು ಎಂದು ETV ಭಾರತದ ಅಂಕಣಕಾರ ಸಂಜಿಬ್ ಕೆಆರ್ ಬರೂಹ್ ಅಭಿಪ್ರಾಯಪಟ್ಟಿದ್ದಾರೆ.

indian-and-chinese-troops-begin-disengagement
ಭಾರತ ಚೀನಾ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರಿ ಪ್ರಗತಿ
author img

By

Published : Sep 8, 2022, 9:17 PM IST

Updated : Sep 9, 2022, 5:12 PM IST

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಚೀನಾವು ತೀರಾ ಮುಖ್ಯ ಎಂದು ಪರಿಗಣಿಸಲಾದ ಗೋಗ್ರಾ - ಹಾಟ್‌ಸ್ಪ್ರಿಂಗ್ಸ್ ಅಕಾ ಪೆಟ್ರೋಲ್ ಪಾಯಿಂಟ್ 15 ಅಥವಾ ಪಿಪಿ 15 ಫ್ಲ್ಯಾಷ್‌ ಪಾಯಿಂಟ್‌ನಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಒಪ್ಪಿಕೊಂಡಿವೆ. ಈ ದ್ವಿಪಕ್ಷೀಯ ಮಾತುಕತೆಯ ಯಶಸ್ಸಿನಿಂದಾಗಿ ಪೂರ್ವ ಲಡಾಖ್‌ನಲ್ಲಿರುವ ಸುಮಾರು 130 ಚದರ ಕಿಮೀ ಕಣಿವೆಯಲ್ಲಿ ಭಾರತದ ಪ್ರವೇಶಕ್ಕೆ ಅವಕಾಶ ದೊರೆತಂತಾಗಿದೆ.

ಭಾರತ ಮತ್ತು ಚೀನಾ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಏನಿದೆ?: ಸೆಪ್ಟೆಂಬರ್ 8 2022 ರಂದು, ಭಾರತ - ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆ 16 ನೇ ಸುತ್ತಿನ ಮಾತುಕತೆಯಲ್ಲಿ ಒಮ್ಮತಕ್ಕೆ ಬರಲಾಗಿದೆ. ಗೋಗ್ರಾ-ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಪಡೆಗಳು ಸಮನ್ವಯ ಮತ್ತು ಯೋಜಿತ ರೀತಿಯಲ್ಲಿ ಕೆಲಸ ಮಾಡಲು ಪರಸ್ಪರ ಒಪ್ಪಿಕೊಂಡಿವೆ. ಈ ಒಮ್ಮತದ ನಿರ್ಣಯದಿಂದಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಸಲು ಸಹಕಾರಿಯಾಗಲಿದೆ.

ಜುಲೈ 17, 2022 ರಂದು 16 ನೇ ಸುತ್ತಿನ ಮಾತುಕತೆಗಳು ನಡೆದಿದ್ದವು. PP 15 ಸಮಸ್ಯೆ ಪರಿಹಾರವಾದರೆ, ಸೂಕ್ಷ್ಮವಾದ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ವಲಯಗಳಲ್ಲಿ ಇರುವ ಸಮಸ್ಯೆಗಳು ಮಾತ್ರವೇ ಹಾಗೇ ಉಳಿಯಲಿವೆ.

ಕಣಿವೆಯ ಸುಮಾರು 130 ಚದರ ಕಿ.ಮೀ.ಗೆ ಭಾರತೀಯ ಪ್ರವೇಶವನ್ನು ಚೀನಾ ನಿರ್ಬಂಧಿಸಿತ್ತು. ಈ ಪರಿಣಾಮವಾಗಿ ತ್ಸೋಗ್ ತ್ಸಾಲು ಪ್ರದೇಶ ಎಂದು ಕರೆಯಲ್ಪಡುವ ಚೆಂಗ್ ಚೆನ್ಮೋ ಕಣಿವೆಯ ಸಾಮಾನ್ಯ ಪ್ರದೇಶದಲ್ಲಿ ನೆಲೆಗೊಂಡಿರುವ PP-15 ನಲ್ಲಿ ಎರಡು ಕಡೆಯ ಪಡೆಗಳು ಪರಸ್ಪರ ಮುಖಾಮುಖಿಯಾಗುತ್ತಲೇ ಇದ್ದವು. ವಿವಾದಿತ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಕೂಡ ಇದೇ ಪ್ರದೇಶದಲ್ಲಿದೆ. ಈ ದ್ವಿಪಕ್ಷೀಯ ಮಾತುಕತೆಯಲ್ಲಿ ಒಮ್ಮತಕ್ಕೆ ಬಂದಿದ್ದರಿಂದ ಈ ಪ್ರದೇಶದಲ್ಲಿ ಭಾರತ ಪ್ರವೇಶ ಮಾಡಲು ಅವಕಾಶ ಸಿಕ್ಕಂತಾಗಿದೆ.

ಏಪ್ರಿಲ್-ಮೇ 2020 ರಿಂದ ಭಾರತ ಚೀನಾ ನಡುವೆ ವಾಸ್ತವಿಕ ಗಡಿ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ ಡ್ಯಾಗನ್​ ಹಾಗೂ ಭಾರತೀಯ ಸೇನೆಯ ನಡುವೆ ಮಾರಾಮಾರಿ ಕೂಡಾ ನಡೆದಿತ್ತು. ಬಳಿಕ ಎರಡೂ ಸೇನೆಗಳ ನಡುವೆ ಪರಸ್ಪರ ಮಾತುಕತೆ ನಡೆದು ಪರಿಸ್ಥಿತಿ ಹತೋಟಿಗೆ ಬಂದಿತ್ತು. ಇದುವರೆಗೂ ಎರಡೂ ಸೇನೆಗಳ ನಡುವೆ 16 ಸುತ್ತುಗಳ ಮಾತುಕತೆ ನಡೆದಿವೆ.

ಇನ್ನೇನು ಉಜ್ಬೇಕಿಸ್ತಾನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ ವಾರ್ಷಿಕ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ದ್ವಿಪಕ್ಷೀಯ ಸಭೆ ನಡೆಯುವ ಸಾಧ್ಯತೆಗಳಿವೆ ಎಂಬ ವರದಿಗಳಿವೆ. ಈ ವರದಿಗಳ ನಡುವೆ ಪಿಪಿ-15 ವಿಚಾರವಾಗಿ ನಿರ್ಣಯದ ಘೋಷಣೆ ಬಂದಿರುವುದು ವಿಶೇಷ.

ಈ ಬೆಳವಣಿಗೆಯಿಂದ ಉಭಯ ರಾಷ್ಟ್ರಗಳ ನಡುವಣ ಉದ್ವಿಗ್ನ ಸಂಬಂಧವನ್ನು ಸರಾಗಗೊಳಿಸುವ ಒಂದು ನಿರ್ದಿಷ್ಟ ಸೂಚನೆಯಾಗಿದೆ. ಆದರೆ ಅಮೆರಿಕ ನೇತೃತ್ವದ ಬಣ ಮತ್ತು ರಷ್ಯಾ-ಚೀನಾಗಳೆರಡರ ವಿರುದ್ಧ ಕಾದಾಟಕ್ಕೆ ನಿಂತಿದೆ. ಈ ಸಂದರ್ಭದಲ್ಲಿ ಭಾರತ - ಚೀನಾ ನಡುವೆ ಆಶಾದಾಯಕ ಬೆಳವಣಿಗೆ ನಡೆದಿರುವುದು ವಿಶೇಷ.

ಕಾರ್ಯತಂತ್ರದ ದೃಷ್ಟಿಕೋನದಿಂದ ಏಷ್ಯಾದ ನೆರೆ ಹೊರೆಯ ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಈಗಿನ ಅಗತ್ಯವೂ ಕೂಡಾ ಹೌದು. ಇನ್ನು ಗಡಿಯಲ್ಲಿ ಉಭಯ ರಾಷ್ಟ್ರಗಳ ಅಥವಾ ಸೇನೆಯ ನಡುವಣ ಘರ್ಷಣೆ ತಪ್ಪಿದರೆ ಮಾತ್ರ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧಗಳು ಹಾಗೂ ಆರ್ಥಿಕ - ವಾಣಿಜ್ಯ ವ್ಯವಹಾರಗಳು ಸುಗಮವಾಗಿ ನಡೆಯಲು ಸಾಧ್ಯ.

ಇದನ್ನು ಓದಿ:ಸವ್ಯಸಾಚಿ ಶಿಕ್ಷಕ.. 35 ವರ್ಷದಿಂದ ಸೈಕಲ್​ನಲ್ಲಿ ಊರೂರು ಸುತ್ತಿ ಪರಿಸರ ಜಾಗೃತಿ

Last Updated : Sep 9, 2022, 5:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.