ಹೈದರಾಬಾದ್: ಮಾರ್ಚ್ 8 ರಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದ್ದು, ಅದಕ್ಕೂ ಮುನ್ನವೇ ತನ್ನ ಬಳಕೆದಾರರಿಗಾಗಿ ಫೇಸ್ಬುಕ್ ಒಡೆತನದ ಫೋಟೊ ಶೇರಿಂಗ್ ಸೋಶಿಯಲ್ ಮೀಡಿಯಾ ಆ್ಯಪ್ ಇನ್ಸ್ಟಾಗ್ರಾಮ್, ಹೊಸ ವರ್ಣರಂಜಿತ ಹಾಗೂ ಆಕರ್ಷಕ ಸ್ಟಿಕ್ಕರ್ಗಳನ್ನು ಗುರುವಾರ ಬಿಡುಗಡೆ ಮಾಡಿದೆ.
ಮಹಿಳೆಯರ ಹಕ್ಕುಗಳಿಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಕಾರ್ಯಕರ್ತರು, ತಾಯಂದಿರು ಮತ್ತು ಸಮುದಾಯಗಳ ಸದಸ್ಯರನ್ನು ಬೆಂಬಲಿಸುವ ರೀತಿಯಲ್ಲಿ ಹೊಸ ಸ್ಟಿಕ್ಕರ್ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಇನ್ಸ್ಟಾಗ್ರಾಮ್ ಹೇಳಿದೆ.
-
Women are everything ✨
— Instagram (@instagram) March 1, 2021 " class="align-text-top noRightClick twitterSection" data="
Celebrate #WomensHistoryMonth with new story stickers that honor the women who lift us up all day, every day. ❤️ pic.twitter.com/DzoKWI1huj
">Women are everything ✨
— Instagram (@instagram) March 1, 2021
Celebrate #WomensHistoryMonth with new story stickers that honor the women who lift us up all day, every day. ❤️ pic.twitter.com/DzoKWI1hujWomen are everything ✨
— Instagram (@instagram) March 1, 2021
Celebrate #WomensHistoryMonth with new story stickers that honor the women who lift us up all day, every day. ❤️ pic.twitter.com/DzoKWI1huj
ಓದಿ: ಇಳಕಲ್ ಸೀರೆ ಉಟ್ಕೊಂಡು, ಮೂಗುತ್ತಿ ತೊಟ್ಟು ಮಹಿಳಾ ದಿನಾಚರಣೆ ಆಚರಿಸಿದ ವಿದ್ಯಾರ್ಥಿನಿಯರು
ಕೊರೊನಾ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ವಿಶೇಷಚೇತನರು, ಅಸಮಾನತೆಗೆ ಒಳಗಾದವರು, ವೃದ್ಧರು ಹೀಗೆ ದುರ್ಬರರ ಸೇವೆ ಮಾಡಿದ ಮಹಳಾ ಸಮುದಾಯದ ಜೊತೆಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರುವ ರೀತಿಯಲ್ಲಿ ಹೊಸ ಸ್ಟಿಕ್ಕರ್ಗಳು ಮೂಡಿಬಂದಿವೆ. ಐವರು ಪ್ರಖ್ಯಾತ ಚಿತ್ರಕಲಾವಿದರು ಈ ಸ್ಟಿಕ್ಕರ್ಗಳನ್ನು ಡಿಸೈನ್ ಮಾಡಿದ್ದಾರೆ ಎಂದು ಇನ್ಸ್ಟಾಗ್ರಾಮ್ ಪ್ರಕಟಣೆಯಲ್ಲಿ ಹೇಳಿದೆ.