ETV Bharat / lifestyle

ಯಶಸ್ವಿನಿ ಯೋಜನೆ: ಕಾರ್ಡ್​ ಪಡೆಯಲು ಇರಬೇಕಾದ ಅರ್ಹತೆಗಳೇನು?- ಯಾವೆಲ್ಲ ರೋಗಗಳಿಗೆ ಇದು ಅನ್ವಯ ಆಗುತ್ತೆ? - ಯಶಸ್ವಿನಿ ಯೋಜನೆ ಪ್ರಕ್ರಿಯೆ

ಯಶಸ್ವಿನಿ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ...

ಯಶಸ್ವಿನಿ ಯೋಜನೆ
ಯಶಸ್ವಿನಿ ಯೋಜನೆ
author img

By

Published : Mar 7, 2022, 1:21 PM IST

ಬೆಂಗಳೂರು: ಮಹತ್ವಾಕಾಂಕ್ಷೆಯ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಮರು ಜಾರಿಗೊಳಿಸಿದ್ದಾರೆ. ಹಾಗಿದ್ರೆ ಏನಿದು ಯೋಜನೆ, ಈ ಯೋಜನೆಯಡಿ ಯಾವೆಲ್ಲ ಸೌಲಭ್ಯಗಳಿವೆ, ಪಡೆಯುವ ಪ್ರಕಿಯೆ ಹೇಗೆ?... ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಏನಿದು ಯಶಸ್ವಿನಿ ಯೋಜನೆ?: ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು 'ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ'. ಈ ಯೋಜನೆಯಡಿ ಗ್ರಾಮೀಣ ಸಹಕಾರಿಯೊಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗದಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್​​ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದು.
  • ಯೋಜನೆಯ ಫಲಾಭವಿಯಾಗಲು ಇರಬೇಕಾದ ಅರ್ಹತೆಗಳೇನು?: ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮುಂಚಿತ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಅಲ್ಲದೇ ಗ್ರಾಮೀಣ ಸಹಕಾರ ಸಂಘ/ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು.
  • ಪಾವತಿಸಬೇಕಾದ ವಂತಿಗೆ ಹಣ ಎಷ್ಟು?: ಫಲಾನುಭವಿಯಾಗ ಬಯಸುವ ಪ್ರತಿಯೊಬ್ಬರೂ ವರ್ಷಕ್ಕೆ ನಿಗದಿತ ಪ್ರಮಾಣದ ವಂತಿಗೆ ಹಣ ನೀಡಬೇಕು. 2014-15ನೇ ಸಾಲಿಗೆ ವಾರ್ಷಿಕ ವಂತಿಗೆ ರೂ.250ರೂ. ಆಗಿರುತ್ತದೆ. ಒಂದೇ ಕುಟುಂಬದ 5 ಅಥವಾ 5ಕ್ಕಿಂತ ಹೆಚ್ಚು ಸದಸ್ಯರು ನೋದಣಿಯಾದಲ್ಲಿ ವಂತಿಗೆಯಲ್ಲಿ ಶೇ.15 ರಿಯಾಯಿತಿ ಇರುತ್ತದೆ .
  • ಕುಟುಂಬದ ಎಲ್ಲ ಸದಸ್ಯರು ಸದಸ್ಯತ್ವವನ್ನು ಹೊಂದಿರಬೇಕೆ?: ಕುಟುಂಬದ ಯಾವುದೇ ಒಬ್ಬ ಸದಸ್ಯನು/ಸದಸ್ಯಳು ಮೇಲೆ ತಿಳಿಸಿರುವ ಅರ್ಹ ಸಹಕಾರ ಸಂಘದ ಸದಸ್ಯನಾಗಿ/ಳಾಗಿ ಯಶಸ್ವಿನಿ ವರ್ಷದ ಮೊದಲ ದಿನ ಅಂದರೆ 01.06.2014ಕ್ಕೆ ಮೂರು ತಿಂಗಳಾಗಿದ್ದಲ್ಲಿ, ಕುಟುಂಬದ ಪ್ರತಿಯೊಬ್ಬ ಸದಸ್ಯನೂ ನಿಗದಿತ ಅವಧಿಯಲ್ಲಿ ವಾರ್ಷಿಕ ವಂತಿಗೆ ಸಲ್ಲಿಸುವ ಮೂಲಕ ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯಬಹುದು.
  • ನೋಂದವಣೆ ಯಾವಾಗ?: ಯಶಸ್ವಿನಿ ನೋಂದಾವಣೆಯು ಪ್ರತಿ ವರ್ಷದಲ್ಲಿ ಜನವರಿ ಅಥವಾ ಫೆಬ್ರವರಿಯಲ್ಲಿ ಪ್ರಾರಂಭವಾಗಿ ಆಗಸ್ಟ್ ಮಾಹೆಯಲ್ಲಿ ಕೊನೆಗೊಳ್ಳುತ್ತದೆ.
  • ಯಾವ ಯಾವ ಸದಸ್ಯರು ಸೇರಿರುತ್ತಾರೆ?: ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘ/ಸಹಕಾರಿ ಬ್ಯಾಂಕುಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ಸ್ವ-ಸಹಾಯ ಗುಂಪಿನ ಸದಸ್ಯರು ಕೂಡ ಯೋಜನೆಯ ಸೌಲಭ್ಯ ಪಡೆಯಬಹುದು. ನಗರ/ಪಟ್ಟಣ ಪ್ರದೇಶದಲ್ಲಿ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು ಮತ್ತು ಸಹಕಾರಿ ನೇಕಾರರು ಕೂಡ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
  • ಯೋಜನೆಯ ಸೌಲಭ್ಯ ಪಡೆಯಲು ವಯೋಮಿತಿ ನಿಗದಿಪಡಿಸಲಾಗಿಲ್ಲ. ಯೋಜನೆಯ ಸೌಲಭ್ಯವನ್ನು ಜೀವಿತಾವಧಿಯವರಿಗೆ ಪಡೆಯಬಹುದು.
  • ಸದಸ್ಯರನ್ನು ಗುರುತಿಸಲು ಯಾವ ದಾಖಲೆ ನೀಡಿರುತ್ತಾರೆ?: ಪ್ರತಿಯೊಬ್ಬ ಸದಸ್ಯನಿಗೆ ಯುನಿಕ್ ಐಡಿ ನಂಬರ್​​​ಗಳಿರುವ ಬಾರ್ ಕೋಡ್ ರೀಡಿಂಗ್ ವ್ಯವಸ್ಥೆ ಇರುವ ಗುರುತಿಸುವ ಕಾರ್ಡ್ ಅನ್ನು ಕೊಡಲಾಗುತ್ತದೆ. ಅದರ ಮುಂದಿನ ಪ್ರಬದಲ್ಲಿ ನೋಂದಾಯಿಸಿದ ವಿವರಗಳು ಮತ್ತು ಹಿಂಬದಿಯಲ್ಲೇ ಅವರ ಭಾವಚಿತ್ರಗಳು ಇರುತ್ತದೆ.
  • ಯೋಜನೆಯು ಒಳಗೊಂಡ ಶಸ್ತ್ರಚಿಕಿತ್ಸೆಗಳೆಷ್ಟು: ಯಶಸ್ವಿನಿ ಈ ಯೋಜನೆಯಲ್ಲಿ 823 ಬಗೆಯ ಶಸ್ತ್ರಚಿಕಿತ್ಸೆಗಳು ಒಳಗೊಂಡಿದೆ.
  • ಫಲಾನುಭವಿಗಳಿಗೆ ದೊರೆಯುವ ಇತರ ಸೌಲಭ್ಯಗಳು ಯಾವುವು?: ಟ್ರಸ್ಟನಿಂದ ಅಂಗೀಕೃತವಾದ ಆಸ್ಪತ್ರೆಗಳಲ್ಲಿ ಯಶಸ್ವಿನಿ ಫಲಾನುಭವಿಗಳು ಹೊರರೋಗಿ ಸಲಹೆಯನ್ನು ರೂ 100ಗಳನ್ನು ಸಾಮಾನ್ಯ ಪರೀಕ್ಷೆಗೆ ಮತ್ತು ವಿಶೇಷ ತಜ್ಙರಿಂದ ಪರೀಕ್ಷೆ ಮಾಡಿಸಿಕೊಳ್ಳಲು ರೂ.200ಗಳನ್ನು ಪಾವತಿಸಿ ಮೂರು ತಿಂಗಳವರೆಗೆ ಅದೇ ಕಾರ್ಡ್​​​​​ನಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು. ಯಶಸ್ವಿನಿ ಕಾರ್ಡ್​ದಾರರು ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಕ್ಲಿನಿಕ್ ಅಥವಾ ಇನ್ನಾವುದೇ ಇನ್ವೆಸ್ಟಿಗೇಷನ್ ಗಳನ್ನು ಶೇ 25 ರಿಯಾಯಿತಿ ದರದಲ್ಲಿ ಪಡೆಯಬಹುದು.
  • ಯಶಸ್ವಿನಿ ಯೋಜನೆಯಡಿಯಲ್ಲಿ ಒಳಪಡದ ಶಸ್ತ್ರಚಿಕಿತ್ಸೆಗಳು ಯಾವುವು?: ಶಸ್ತ್ರಚಿಕಿತ್ಸೆ ಅವಶ್ಯವಿಲ್ಲದ ಯಾವುದೇ ವೈದ್ಯಕೀಯ ಚಿಕಿತ್ಸೆ ಯೋಜನೆಯಲ್ಲಿ ಲಭ್ಯವಿರುವುದಿಲ್ಲ. ಇದಲ್ಲದೇ ಚಿಕಿತ್ಸೆಗಳಾದ ಕೀಮೊಥೆರಪಿ, ರೇಡಿಯೋ ಥೆರಪಿ, ಜಾಯಿಂಟ್ ಬದಲಾವಣೆ, ಸುಟ್ಟು ಗಾಯಗಳು, ರಸ್ತೆ ಅಪಘಾತಗಳು, ಹಲ್ಲಿನ ಶಸ್ತ್ರಚಿಕಿತ್ಸೆ, ಚರ್ಮದ ಗ್ರಾಫ್ಟಿಂಗ್,ಸ್ಟಂಟ್, ಇಂಪ್ಲಾಂಟ್ಸ್ ಇತ್ಯಾದಿ ಸೌಲಭ್ಯಗಳು ಯೋಜನೆಯಲ್ಲಿ ಸೇರಿರುವುದಿಲ್ಲ. ಇಂತಹ ಅನಾರೋಗ್ಯಗಳಿಗೆ ಫಲಾನುಭವಿ ಪಡೆಯುವ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರಗಳ ಹಾಗೂ ಶಸ್ತ್ರಚಿಕಿತ್ಸಾ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕು.
  • ಯೋಜನೆಯಡಿಯಲ್ಲಿ ದೊರೆಯುವ ಹೆಚ್ಚಿನ ಸೌಲಭ್ಯಗಳು: ಈ ಕೆಳಗಿನ ತುರ್ತು ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳು ಕೆಲವೊಂದು ಷರತ್ತುಗಳಿಗೊಳಪಟ್ಟು ಲಭ್ಯವಿರುತ್ತವೆ.
  1. ಸಾಮಾನ್ಯ ಹೆರಿಗೆ
  2. ನವಜಾತ ಶಿಶುವಿನ ಶುಶ್ರೂಷೆ
  3. ಕೃಷಿ ಉಪಕರಣಗಳಿಂದಾಗುವ ಅಪಘಾತಗಳು
  4. ನೀರಿನಲ್ಲಿ ಮುಳುಗುವುದು
  5. ನಾಯಿಕಡಿತ, ಹಾವು ಕಡಿತ
  6. ವಿದ್ಯತ್​​ ಆಘಾತಗಳು ಇತ್ಯಾದಿಗಳು..
  • ಸದಸ್ಯರಿಗೆ ಮರುಪಾವತಿಯಾಗುವ ಮೊತ್ತವೆಷ್ಟು?: ಒಂದು ವರ್ಷದಲ್ಲಿ ಒಬ್ಬ ಸದಸ್ಯ ಒಂದು ಬಾರಿ ಆಸ್ಪತ್ರೆಗೆ ದಾಖಲಾದರೆ ಆತ ರೂ. 1.25 ಗರಿಷ್ಠ ಮಿತಿಯಲ್ಲಿ ಚಿಕಿತ್ಸೆ ಪಡೆಯಬಹುದು. ಅದೇ ವರ್ಷದಲ್ಲಿ ಆ ವ್ಯಕ್ತಿ ಅನೇಕ ಬಾರಿ ಶಸ್ತ್ರ ಚಿಕಿತ್ಸೆ ಪಡೆಯುವ ಪ್ರಕರಣಗಳಲ್ಲಿ ಗರಿಷ್ಠ ಮಿತಿ 2 ಲಕ್ಷದವರೆಗೆ ಚಿಕಿತ್ಸೆ ಪಡೆಯಬಹುದು.
  • ಯಶಸ್ವಿನಿ ಯೋಜನೆಯ ಒಂದು ಸ್ವಯಂ ನಿಧಿ ಶಸ್ತ್ರಚಿಕಿತ್ಸಾ ಯೋಜನೆ, ವಿಮಾ ಯೋಜನೆಯಲ್ಲ.
  • ಯೋಜನೆಯ ಸೌಲಭ್ಯವನ್ನು ಎಲ್ಲಿ ಪಡೆಯಬಹುದು?: ಯಶಸ್ವಿನಿ ಯೋಜನೆಯ ಫಲಾನುಭವಿಗಳು ಯೋಜನೆಯ ಸೌಲಭ್ಯವನ್ನು ಮುಖ್ಯವಾಗಿ ಆಯಾ ಗ್ರಾಮೀಣ ಸಹಕಾರಿಗಳು ವಾಸಿಸುವ ಜಿಲ್ಲೆಯಲ್ಲಿ ಟ್ರಸ್ಟಿನಿಂದ ಅಂಗೀಕೃತವಾದ ಆಸ್ಪತ್ರೆಗಳು/ ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದು.
  • ಕರ್ನಾಟಕದಲ್ಲಿ ಎಷ್ಟು ಆಸ್ಪತ್ರೆಗಳು ನೋಂದಣಿ ಆಗಿದೆ?: ಈವರೆಗೆ ರಾಜ್ಯದಲ್ಲಿ ಸುಮಾರು 496 ಆಸ್ಪತ್ರೆಗಳು ಅಂಗೀಕೃತ ಆಸ್ಪತ್ರೆಗಳಾಗಿ ಗುರುತಿಸಲ್ಪಟ್ಟಿವೆ.
  • ಅನುಷ್ಟಾನ ಸಂಸ್ಥೆ ಎಂದರೇನು?: ಅನುಷ್ಟಾನ ಸಂಸ್ಥೆಯು ಯೋಜನೆಯಲ್ಲಿ ಮ್ಯಾನೇಜ್ ಮೆಂಟ್ ಸಪೋರ್ಟ್ ಸರ್ವಿಸ್ ಪ್ರೊವೈಡರ್ (ಎಂಎಸ್​​ಪಿ) ಆಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಯೋಜನೆಯ ಪ್ರಸಕ್ತ ಕಾರ್ಯನಿರ್ವಹಿಸುತ್ತದೆ ಜವಾಬ್ದಾರಿ ಹೊಂದಿರುತ್ತದೆ. ಅನುಷ್ಠಾನ ಸಂಸ್ಥೆಯ ಹೆಸರು 'ಎಂ.ಡಿ.ಇಂಡಿಯಾ ನೆಟ್ ವರ್ಕ್ಸ್ ಪ್ರೈ.ಲಿ. ಬೆಂಗಳೂರು'.
  • ಸೌಲಭ್ಯ ಪಡೆಯುವುದು ಹೇಗೆ?: ಯಶಸ್ವಿನಿ ಫಲಾನುಭವಿಗಳು ಶಸ್ತ್ರಚಿಕಿತ್ಸೆ ಬೇಕಾದಲ್ಲಿ ತಮ್ಮ ಯೂನಿಕ್ ಐಡಿ(ID) ಸಂಖ್ಯೆ ಹೊಂದಿರುವ ಸದಸ್ಯರ ಉಪಯೋಗಕ್ಕಾಗಿ ನೀಡಲಾದ ಮೂಲ ಗುರುತಿನ ಕಾರ್ಡ್ ಮತ್ತು ಮೂಲ ಹಣ ಪಾವತಿ ರಸೀದಿಯೊಂದಿಗೆ ಯೋಜನೆಯಡಿಯಲ್ಲಿ ಅಂಗೀಕೃತವಾದ ಆಸ್ಪತ್ರೆಗೆ ಭೇಟಿ ನೀಡಬೇಕು.

ಆಸ್ಪತ್ರೆಯ ವೈದ್ಯಾಧಿಕಾರಿಗಳು ಅಂತಹ ಫಲಾನುಭವಿಗಳ ಆರೋಗ್ಯ ತಪಾಸಣೆ ಮಾಡಿ, ಶಸ್ತ್ರಚಿಕಿತ್ಸೆ ಅವಶ್ಯಕಂಡು ಬಂದಲ್ಲಿ ಮತ್ತು ಸದರಿ ಶಸ್ತ್ರಚಿಕಿತ್ಸೆಯ ಯೋಜನೆಯಲ್ಲಿ ಒಳಗೊಂಡಿದ್ದಲ್ಲಿ, ವಿವರಗಳೊಂದಿಗೆ ಅನುಷ್ಠಾನ ಸಂಸ್ಥೆಗೆ ಇಂಟರ್ ನೆಟ್ ಮುಖಾಂತರ ಪ್ರಸ್ತಾಪ ಕಳಿಸುವರು. ಅನುಷ್ಟಾನ ಸಂಸ್ಥೆಯವರು ಪ್ರಸ್ತಾಪವನ್ನು ಪರಿಶೀಲಿಸಿ ಚಿಕಿತ್ಸಾ ಪೂರ್ವಾನುಮತಿ ನೀಡಿದ ನಂತರ ಆಸ್ಪತ್ರೆಯವರು ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವರು.

ಯಶಸ್ವಿನಿ ಫಲಾನುಭವಿಗಳು ಆಸ್ಪತ್ರೆಗೆ ಸೇರಿದಾಗ ಶಸ್ತ್ರಚಿಕಿತ್ಸೆಗೆ ಹಣ ಪಾವತಿ ಮಾಡಬೇಕಾಗಿಲ್ಲ. ಈ ಯೋಜನೆಯಲ್ಲಿ ಗುರುತಿಸಿದ ಶಸ್ತ್ರಚಿಕಿತ್ಸೆಗಳು ಕೆಲವೊಂದು ಷರತ್ತುಗಳಿಗೊಳಪಟ್ಟ ನಗದು ರಹಿತವಾಗಿರುತ್ತದೆ. ಈ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಗೆ ಟ್ರಸ್ಟ್ ಭರಿಸುತ್ತದೆ.

  • ಶಸ್ತ್ರಚಿಕಿತ್ಸೆ ಪಡೆದ ಫಲಾನುಭವಿಗಳ ಬಿಲ್​​ ಪಾವತಿ ಹೇಗೆ ?: ಯಶಸ್ವಿನಿ ಫಲಾನುಭವಿಗಳು, ಆಸ್ಪತ್ರೆಗೆ ಬಿಲ್​​ನ್ನು ಪಾವತಿ ಮಾಡಬೇಕಾಗಿಲ್ಲ. ಆಸ್ಪತ್ರೆಯವರು ಚಿಕಿತ್ಸಾ ಪೂರ್ವಾನುಮತಿಯಲ್ಲಿ ಮಂಜೂರು ಮಾಡಿದ ಮೊತ್ತಕ್ಕೆ ಬಿಲ್​​ ಅನ್ನು ಅನುಷ್ಠಾನ ಸಂಸ್ಥೆಗೆ ಕಳಿಸುವರು. ಅನುಷ್ಠಾನ ಸಂಸ್ಥೆಯವರು ಬಿಲ್​​​ನ್ನು ಪರಿಶೀಲನೆ ಮಾಡಿ ಅವು ಯೋಜನೆಯ ಪ್ರಕಾರ ಇದ್ದಲ್ಲಿ ಅವುಗಳನ್ನು ಪಾಸ್​​ ಮಾಡಲು ಯಶಸ್ವಿನಿ ಟ್ರಸ್ಟಗೆ ಕಳಿಸುವರು. ಯಶಸ್ವಿನಿ ಟ್ರಸ್ಟ್ ಆಸ್ಪತ್ರೆಗಳ ಬಿಲ್​​ನ್ನು ಮಂಜೂರು ಮಾಡಿದ ನಂತರ ಬಿಲ್ಲಿನ ಮೊತ್ತವನ್ನು ಅನುಷ್ಠಾನ ಸಂಸ್ಥೆಯ ಮೂಲಕ ಆಸ್ಪತ್ರೆಗೆ ಪಾವತಿಸಲಾಗುವುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.