ETV Bharat / lifestyle

ಉತ್ತಮ ಆರೋಗ್ಯಕ್ಕಾಗಿ ಸೇವಿಸುವ ಎಲ್ಲ ಆಹಾರಗಳಲ್ಲಿ ಸಮಾನ ಕ್ಯಾಲೋರಿ ಇರೋದಿಲ್ಲ; ಯಾಕೆ ಗೊತ್ತಾ?

ಇತ್ತೀಚೆಗೆ ಜನ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ತೋರಿಸುತ್ತಾರೆ. ಯಾವ ಆಹಾರವನ್ನು ಎಷ್ಟೆಷ್ಟು ತಿನ್ನಬೇಕು. ಯಾವ ಆಹಾರದಲ್ಲಿ ಉತ್ತಮ ಪೌಷ್ಠಿಕಾಂಶ ಇದೆ. ಕೊಬ್ಬಿನಾಂಶ ಕಡಿಮೆ ಇರುವ ಆಹಾರ, ನಾರಿನ ಪದಾರ್ಥಗಳು.. ಹೀಗೆ ನಾನಾ ರೀತಿಯಲ್ಲಿ ಯೋಚಿಸುತ್ತಾರೆ. ವಿಶೇಷ ಅಂದರೆ ಆರೋಗ್ಯವಂತ ದೇಹಕ್ಕೆ ಅಗತ್ಯ ಇರುವ ಕ್ಯಾಲೋರಿ ಎಲ್ಲ ಆಹಾರ ಪದಾರ್ಥಗಳಲ್ಲಿ ಸಮಾನವಾಗಿ ಸಿಗೋದಿಲ್ಲ.

Not all calories are equal!
ಉತ್ತಮ ಆರೋಗ್ಯಕ್ಕಾಗಿ ಸೇವಿಸುವ ಎಲ್ಲಾ ಆಹಾರಗಳಲ್ಲಿ ಒಂದೇ ಸಮಾನವಾದ ಕ್ಯಾಲೋರಿ ಇರೋದಿಲ್ಲ; ಯಾಕೆ ಗೊತ್ತಾ?
author img

By

Published : Dec 29, 2021, 7:20 PM IST

ಹೈದರಾಬಾದ್‌: ಆರೋಗ್ಯವಂತ ದೇಹಕ್ಕೆ ಕ್ಯಾಲೋರಿ ಇರುವ ಆಹಾರ ಅತ್ಯವಶ್ಯಕ. ಹೀಗಾಗಿ ಡಯಟ್ ಜೊತೆಯಲ್ಲಿ ಹೈ ಕ್ಯಾಲೋರಿ ಪದಾರ್ಥಗಳ ಸೇವನೆ ಹೆಚ್ಚಿಸಿಕೊಳ್ಳುವುದು ಅಗತ್ಯವಿದೆ. ಇದರಿಂದ ದೇಹ ತೂಕವನ್ನು ನಿಯಂತ್ರಿಸಿಕೊಳ್ಳಬಹುದು. ಆದರೆ, ಎಲ್ಲ ಆಹಾರ ಪದಾರ್ಥಗಳಿಂದ ಕ್ಯಾಲೋರಿ ಒಂದೇ ಸಮಾನವಾಗಿರುವುದಿಲ್ಲ.

1800ರ ದಶಕದ ಉತ್ತರಾರ್ಧದಲ್ಲಿ ರಸಾಯನಶಾಸ್ತ್ರಜ್ಞ ಡಬ್ಲ್ಯೂಒ ಅಟ್‌ವಾಟರ್ ಮತ್ತು ಅವರ ಸಹೋದ್ಯೋಗಿಗಳು ವಿವಿಧ ಆಹಾರಗಳು ಎಷ್ಟು ಶಕ್ತಿ, ಎಷ್ಟು ಕ್ಯಾಲೋರಿಗಳನ್ನು ಒಳಗೊಂಡಿರುತ್ತವೆ ಎಂಬುದನ್ನು ಲೆಕ್ಕಾಚಾರ ಮಾಡಲು ವ್ಯವಸ್ಥೆ ರೂಪಿಸಿದ್ದರು. ಇದಕ್ಕಾಗಿ ಮೊದಲು ಅವರು ಆಹಾರದ ಮಾದರಿಗಳನ್ನು ಸುಟ್ಟು ಅದರಿಂದ ಶಾಖದ ರೂಪದಲ್ಲಿ ಎಷ್ಟು ಶಕ್ತಿ ಬಿಡುಗಡೆ ಆಗುತ್ತದೆ ಎಂಬುದನ್ನು ದಾಖಲಿಸಿದ್ದರು.

ಅಟ್‌ವಾಟರ್ ಪ್ರಕಾರ, ಪ್ರತಿ ಮ್ಯಾಕ್ರೋನ್ಯೂಟ್ರಿಯಂಟ್‌ನ ಒಂದು ಗ್ರಾಂ ನಿರ್ದಿಷ್ಟ ಸಂಖ್ಯೆಯ ಕ್ಯಾಲೋರಿಗಳನ್ನು ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ. ಅಮೆರಿಕದ ಕೃಷಿ ಇಲಾಖೆಯು ಪ್ರತಿ ಆಹಾರಕ್ಕೂ ಅಧಿಕೃತ ಕ್ಯಾಲೋರಿ ಸಂಖ್ಯೆಯನ್ನು ಒಳಗೊಂಡ ಲೆಕ್ಕಾಚಾರಗಳನ್ನು ಇಂದಿಗೂ ಬಳಸುತ್ತದೆ.

ನೀನು ಏನು ತಿನ್ನುತ್ತೀರಿ ಎಂಬುದನ್ನು ವಿಜ್ಞಾನಿಗಳು, ನಿಮ್ಮ ದೇಹ ಶಕ್ತಿಯ ಖರ್ಚು ಎಂದು ಕರೆಯುವುದರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳುತ್ತಾರೆ. ಆಹಾರದಲ್ಲಿನ ಕ್ಯಾಲೋರಿ ನಿಮ್ಮನ್ನು ಜೀವಂತವಾಗಿಡಲು ಎಷ್ಟು ಶಕ್ತಿ ತೆಗೆದುಕೊಳ್ಳುತ್ತದೆ. ಉಸಿರಾಡಲು ಬಳಸುವ ಶಕ್ತಿ ಹಾಗೂ ಜೀರ್ಣಿಸಿಕೊಳ್ಳಲು ಎಷ್ಟು ಶಕ್ತಿ ತೆಗೆದುಕೊಳ್ಳುತ್ತದೋ ಇದನ್ನು ಮೆಟಾಬಾಲಿಸಮ್ ಎಂದು ಕರೆಯಲಾಗುತ್ತದೆ.

ಈ ಪದಾರ್ಥಗಳಲ್ಲಿ ಕ್ಯಾಲೋರಿ ಹೆಚ್ಚು

ಬಿಳಿ ಅಕ್ಕಿ, ಕೇಕ್‌, ಕುಕೀಸ್ ಹಾಗೂ ಚಿಪ್‌ಗಳಂತಹ ಆಹಾರಗಳು ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಹೆಚ್ಚು ಇದೆ. ಆದರೆ, ಹಸಿರು ತರಕಾರಿಗಳು, ಹಸಿ ಮೆಣಸು, ಅಣಬೆ ಮತ್ತು ದ್ವಿದಳ ಧಾನ್ಯಗಳು ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಕಡಿಮೆ ಸೂಚಿಸುತ್ತದೆ. ಗ್ಲೈಸೆಮಿಕ್ ಸೂಚ್ಯಂಕ/ಲೋಡ್‌ನಲ್ಲಿ ಕಡಿಮೆ ಇರುವ ಆಹಾರಗಳು ಅವು ಹೊಂದಿರುವ ಕ್ಯಾಲೋರಿಗಳನ್ನು ಲೆಕ್ಕಿಸದೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಉತ್ತಮ ಎಂದು ಸೂಚಿಸಲು ಕೆಲವು ಪುರಾವೆಗಳಿವೆ.

ಜನರು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್/ಲೋಡ್ ಆಹಾರಗಳನ್ನು ಸೇವಿಸಿದಾಗ ಮೆದುಳಿನಲ್ಲಿರುವ ಪ್ರತಿಫಲ ಕೇಂದ್ರಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಕ್ಯಾಂಡಿ ಅಥವಾ ಬಿಳಿ ಬ್ರೆಡ್‌ನಂತಹ ಆಹಾರಗಳ ಆಹ್ಲಾದಕರ ಮತ್ತು ವ್ಯಸನಕಾರಿ ಪರಿಣಾಮ ಎತ್ತಿ ತೋರಿಸುತ್ತವೆ. ಶಕ್ತಿಗಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಬೀನ್ಸ್‌ನಂತಹ ಸಸ್ಯ ಆಹಾರಗಳಲ್ಲಿ ಕಂಡು ಬರುವ ಫೈಬರ್ ಅನ್ನು ದೇಹವು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಫೈಬರ್‌ನಲ್ಲಿ ಹೆಚ್ಚಿನ ಆಹಾರಗಳು ಕಡಿಮೆ ಚಯಾಪಚಯ ಶಕ್ತಿ ಹೊಂದಿರುತ್ತವೆ. ಕಡಿಮೆ ಕ್ಯಾಲೋರಿಗಳಲ್ಲಿ ಪೂರ್ಣವಾಗಿರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ದೇಹಕ್ಕೆ ಬಿಸಿ ಜೊತೆಗೆ ಆರೋಗ್ಯ ಒದಗಿಸುವ 'ಖರ್ಜೂರ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.