ವಾಷಿಂಗ್ಟನ್(ಅಮೆರಿಕ): ಸೋಮವಾರ ರಾತ್ರಿ 9 ಗಂಟೆಗೆ ಸ್ಥಗಿತಗೊಂಡಿದ್ದ ಮಾರ್ಕ್ ಜುಕರ್‌ಬರ್ಗ್ ಒಡೆತನದ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಂ ಮೆಸೆಂಜರ್ ಅಪ್ಲಿಕೇಷನ್ಗಳು ಮಂಗಳವಾರ ಮುಂಜಾನೆ 3 ಗಂಟೆಯ ವೇಳೆಗೆ ಕಾರ್ಯನಿರ್ವಹಿಸಲು ಆರಂಭಿದ್ದವು.
ಈ ಸಾಮಾಜಿಕ ಜಾಲತಾಣಗಳು ಸ್ಥಗಿತಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫೇಸ್‌ಬುಕ್, ರೂಟರ್ಗಳ ಸಂರಚನೆಯಲ್ಲಿನ ದೋಷಪೂರಿತ ಬದಲಾವಣೆಯಿಂದಾಗಿಯೇ ಸಾಮಾಜಿಕ ಜಾಲತಾಣಗಳು ಸ್ಥಗಿತಗೊಂಡಿದ್ದವು ಎಂದು ಮಾಹಿತಿ ನೀಡಿದೆ.
ರೂಟರ್ಗಳು ಡೇಟಾ ಸೆಂಟರ್ಗಳ ನಡುವೆ ನೆಟ್ವರ್ಕ್ ಟ್ರಾಫಿಕ್ ನಿಯಂತ್ರಿಸುವ ಕೆಲಸ ಮಾಡುತ್ತವೆ. ಈ ರೂಟರ್ಗಳಲ್ಲಿನ ಸಂರಚನೆಯಲ್ಲಿ ಬದಲಾವಣೆಯಾಗಿರುವುದೇ ಸಮಸ್ಯೆಗೆ ಕಾರಣ ಎಂದು ಫೇಸ್‌ಬುಕ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಈಗ ನಮ್ಮ ಸೇವೆಗಳು ಮತ್ತೆ ಆನ್ಲೈನ್ಗೆ ಬಂದಿವೆ. ಬಹುಪಾಲು ಸೇವೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಸಂಪೂರ್ಣವಾಗಿ ಸೇವೆಗಳನ್ನು ನೀಡುವತ್ತ ನಾವು ಕಾರ್ಯೋನ್ಮುಖರಾಗಿದ್ದೇವೆ. ದೋಷಪೂರಿತ ಸಂರಚನೆಯಲ್ಲಿನ ಬದಲಾವಣೆಯೇ ಇದಕ್ಕೆಲ್ಲಾ ಕಾರಣ ಎಂದು ಸ್ಪಷ್ಟಪಡಿಸುತ್ತಿದ್ದೇವೆ ಎಂದು ಫೇಸ್‌ಬುಕ್ ಹೇಳಿದೆ.
ಮಾರ್ಕ್ ಕ್ಷಮೆ ಯಾಚನೆ
ಇದೇ ವೇಳೆ, ತನ್ನ ಒಡೆತನದ ಸಾಮಾಜಿಕ ಜಾಲತಾಣಗಳಲ್ಲಿ ಆದ ಅಡಚಣೆಗೆ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಯಾಚಿಸಿದ್ದಾರೆ. ಮಂಗಳವಾರ ಸೇವೆಗಳು ಪುನಾರಂಭಗೊಳ್ಳಲಿವೆ ಎಂದಿರುವ ಅವರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಮತ್ತು ಮೆಸೆಂಜರ್ ಮತ್ತೆ ಆನ್ಲೈನ್ಗೆ ಬರುತ್ತಿವೆ ಎಂದಿದ್ದಾರೆ.
'ಅಡಚಣೆಗಾಗಿ ಕ್ಷಮಿಸಿ, ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ನಮ್ಮ ಸೇವೆಗಳನ್ನು ಎಷ್ಟು ಅವಲಂಬಿಸಿದ್ದೀರಿ ಎಂದು ನನಗೆ ತಿಳಿದಿದೆ. ಇಂದು ವಾಟ್ಸ್‌ಆ್ಯಪ್ ಬಳಸಲು ಸಾಧ್ಯವಾಗದ ಕಾರಣಕ್ಕೆ ಕ್ಷಮೆ ಇರಲಿ. ನಾವು ವಾಟ್ಸಪ್ ಅನ್ನು ಮತ್ತೆ ಆರಂಭಿಸಿದ್ದೇವೆ. ನಿಮ್ಮ ತಾಳ್ಮೆಗೆ ತುಂಬಾ ಧನ್ಯವಾದಗಳು. ಏನಾದರೂ ಮಾಹಿತಿ ಇದ್ದರೆ ನಾವು ಹಂಚಿಕೊಳ್ಳುತ್ತೇವೆ' ಎಂದು ಎಂದಿದ್ದಾರೆ.
ಇದನ್ನೂ ಓದಿ: ವಾಟ್ಸ್‌ಆ್ಯಪ್, ಫೇಸ್‌ಬುಕ್ ಡೌನ್: ಟ್ವಿಟರ್‌ನಲ್ಲಿ ಬಗೆಬಗೆ ಮೀಮ್‌ಗಳ ಹಾವಳಿ