ನವದೆಹಲಿ: ಜನಪ್ರಿಯ ಸಾಮಾಜಿಕ ತಾಣಗಳ ಪೈಕಿ ಇನ್ಸ್ಟಾಗ್ರಾಂ ಕೂಡ ಒಂದು. ಅತಿ ಹೆಚ್ಚು ಜನರು ಇನ್ಸ್ಟಾಗ್ರಾಂ ಬಳಸುತ್ತಾರೆ. ಅಷ್ಟು ಮಾತ್ರವಲ್ಲದೇ, ಅದರ ಮೂಲಕ ವ್ಯವಹಾರದ ಜತೆಗೆ ಹಣ ಕೂಡ ಗಳಿಸುತ್ತಾರೆ. ಇದೀಗ 16 ವರ್ಷದೊಳಗಿನ ಬಳಕೆದಾರರಿಗೆ ಪೂರ್ವನಿಯೋಜಿತವಾಗಿ (ಡೀಫಾಲ್ಟ್) ಸುರಕ್ಷತೆ ನೀಡಲು ಇನ್ಸ್ಟಾಗ್ರಾಂ ಮುಂದಾಗಿದೆ.
ಸುರಕ್ಷತೆಯ ಉದ್ದೇಶದಿಂದ 16 ವರ್ಷದೊಳಗಿನವರಿಗೆ ಖಾಸಗಿ ಅಕೌಂಟ್ ಕ್ರಿಯೇಟ್ ಮಾಡಲು ಅವಕಾಶ ನೀಡುತ್ತಿದೆ. 16 ವರ್ಷದೊಳಗಿನವರು ಕೇವಲ ಖಾಸಗಿ ಖಾತೆಗಳನ್ನು ಮಾತ್ರ ಹೊಂದಲು ಅವಕಾಶ ನೀಡಲಾಗಿದ್ದು, ಪಬ್ಲಿಕ್ ಅಕೌಂಟ್ ಹೊಂದುವುದಕ್ಕೆ ನಿರ್ಬಂಧ ಹೇರಲಾಗಿದೆ.
ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್, ಯುಕೆ ಮತ್ತು ಜಪಾನ್‌ನಲ್ಲಿ ಈ ಬದಲಾವಣೆಗಳನ್ನು ಪ್ರಾರಂಭಿಸಲು ಮುಂದಾಗಿದ್ದು, ಶೀಘ್ರದಲ್ಲೇ ಹೆಚ್ಚಿನ ದೇಶಗಳಿಗೆ ವಿಸ್ತರಿಸಲು ಪ್ರಯತ್ನಿಸುವುದಾಗಿ ಇನ್ಸ್ಟಾಗ್ರಾಂ ತಿಳಿಸಿದೆ.
ಇನ್ಸ್ಟಾಗ್ರಾಂನಲ್ಲಿ ಈಗಾಗಲೇ ಸಾರ್ವಜನಿಕ ಖಾತೆಯನ್ನು ಹೊಂದಿರುವ ಯುವಕರಿಗೆ, ಖಾಸಗಿ ಖಾತೆಯ ಪ್ರಯೋಜನಗಳನ್ನು ಹೈಲೈಟ್ ಮಾಡಲಾಗುತ್ತಿದೆ. ಸಾರ್ವಜನಿಕ ಖಾತೆಯಿಂದ ಖಾಸಗಿ ಖಾತೆಗೆ ಸೆಟ್ಟಿಂಗ್‌ನಲ್ಲಿ ಹೇಗೆ ಬದಲಾಯಿಬೇಕು ಎನ್ನುವುದರ ಕುರಿತು ಅಧಿಸೂಚನೆ ಹೊರಡಿಸಲಾಗಿದೆ.