ನವದೆಹಲಿ : ಜಾಗತಿಕ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರಾಂಡ್ ಟೆಕ್ನೋ ಸ್ಪಾರ್ಕ್ 7 ಎಂಬ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಇದು ದೊಡ್ಡ ಡಿಸ್ಪ್ಲೈ, ಸುಧಾರಿತ ಬ್ಯಾಟರಿ, ಎಐ ಆಧಾರಿತ ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ.
ಟೆಕ್ನೋ ಸ್ಪಾರ್ಕ್ 7ರ ಫೀಚರ್ಗಳು :
- ಸ್ಪಾರ್ಕ್ 7 ಎರಡು ಮಾದರಿಯ ಸ್ಟೋರೆಜ್ ಹೊಂದಿದ್ದು, 2 ಜಿಬಿ+32 ಜಿಬಿ ಸ್ಟೋರೆಜ್ ಫೋನ್ಗೆ 6,999 ರೂ. ಮತ್ತು 2 ಜಿಬಿ +64 ಜಿಬಿಗೆ 7,999 ರೂ. ಬೆಲೆ ನಿಗದಿಪಡಿಸಲಾಗಿದೆ. ಇದು ಹಸಿರು, ಮ್ಯಾಗ್ನೆಟ್ ಕಪ್ಪು ಮತ್ತು ಮಾರ್ಫಿಯಸ್ ನೀಲಿ ಬಣ್ಣಗಳಲ್ಲಿ ಲಭ್ಯವಿದೆ.
- ಏಪ್ರಿಲ್ 16ರಿಂದ ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ನಲ್ಲಿ ಮೊಬೈಲ್ ಪ್ರಿಯರು ಖರೀದಿಸಬಹುದು
- 720 x 1600 ರೆಸಲ್ಯೂಷನ್ ಹೊಂದಿರುವ 6.52- ಇಂಚಿನ ಎಚ್ಡಿ + ಡಾಟ್ ನಾಚ್ ಡಿಸ್ಪ್ಲೇ ಹೊಂದಿದೆ
- ಶೇ 90.34ರಷ್ಟು ಬಾಡಿ ಸ್ಕ್ರೀನ್ ರೇಶ್ಯೂ ಮತ್ತು 20:9 ಆಸ್ಪೆಕ್ಟ್ ರೇಶ್ಯೂ, 480 ನಿಟ್ಸ್ ಬ್ರೈಟ್ನೆಸ್ ಸಿಸ್ಟಮ್ ಹೊಂದಿದೆ