ನವದೆಹಲಿ: ರಿಯಲ್ಮಿ ಕಂಪನಿಯ ಬ್ರಾಂಡ್ ಡಿಝೋ (DIZO) ಅತಿ ಕಡಿಮೆ ಬೆಲೆಯ ಸ್ಮಾರ್ಟ್ವಾಚ್ಗಳನ್ನು ಆಗಸ್ಟ್ 6 ರಿಂದ ಬಿಡುಗಡೆ ಮಾಡಲಿದ್ದು, ಮೊದಲ ಬಾರಿಗೆ ಫ್ಲಿಪ್ಕಾರ್ಟ್ನಲ್ಲಿ ಮಾರಾಟವಾಗಲಿದೆ.
ಸ್ಮಾರ್ಟ್ ವಾಚ್ನ ಬೆಲೆ ರೂ. 3,499 ಇದ್ದು, ಫ್ಲಿಪ್ಕಾರ್ಟ್ನಲ್ಲಿ ಇದರ ಬೆಲೆ ರೂ.2,999 ಇರಲಿದೆ. ಫ್ಲಿಪ್ಕಾರ್ಟ್ಗೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ರಿಟೇಲ್ ಮಳಿಗೆಗಳಿಗೂ ಈ ಸ್ಮಾರ್ಟ್ ವಾಚ್ ತಲುಪಲಿದೆ.
3.5 ಸೆಂಟಿಮೀಟರ್ ಅಂದರೆ 1.4 ಇಂಚು ಹೈ ರೆಸಲ್ಯೂಷನ್ ಟಚ್ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್ ವಾಚ್, 90 ಸ್ಪೋರ್ಟ್ ಮೋಡ್, 12 ದಿನಗಳ ಬ್ಯಾಟರಿ ಲೈಫ್, ಹೆಲ್ತ್ ಮತ್ತು ಫಿಟ್ನೆಸ್ ಮಾನಿಟರಿಂಗ್, ಐಪಿ68 ವಾಟರ್ ರೆಸಿಸ್ಟೆಂಟ್ ಮತ್ತು ಸ್ಮಾರ್ಟ್ ಎಐಒಟಿ ಕಂಟ್ರೋಲ್ ಮುಂತಾದ ಫೀಚರ್ಗಳನ್ನು ಒಳಗೊಂಡಿದೆ.
ನಾವು ಈ ಸ್ಮಾರ್ಟ್ ವಾಚ್ಗೆ ಉತ್ತಮ ರೆಸ್ಪಾನ್ಸ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊಂದಿದ್ದೇವೆ. ಡಿಝೋ ವಾಚ್ ನಮ್ಮ ಮಾರುಕಟ್ಟೆ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಅತ್ಯಂತ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ವಾಚ್ ನೀಡಲಾಗುತ್ತಿದೆ ಎಂದು ಡಿಝೋ ಇಂಡಿಯಾದ ಸಿಇಓ ಅಭಿಲಾಷ್ ಪಂಡಾ ಹೇಳಿದ್ದಾರೆ.
ಈ ಸ್ಮಾರ್ಟ್ ವಾಚ್ ಹಾರ್ಟ್ ರೇಟ್ ಸೆನ್ಸಾರ್, ರಕ್ತದಲ್ಲಿನ ಆಮ್ಲಜನಕ ಮಟ್ಟ ಅಳೆಯುವ ಎಸ್ಪಿಓ2 (SpO2) ಟೂಲ್, ನಿದ್ರೆ, ನಡಿಗೆ ಮುಂತಾದವುಗಳನ್ನು ಮಾನಿಟರ್ ಮಾಡುವ ಸಾಮರ್ಥ್ಯ ಹೊಂದಿದೆ.
315ಎಂಎಹೆಚ್ (315mAh) ಬ್ಯಾಟರಿ, 5.0 ಟೆಕ್ನಾಲಜಿಯ ಬ್ಲೂಟೂತ್ ಹೊಂದಿದ್ದು, ಒಂದು ಬಾರಿ ಚಾರ್ಜಿಂಗ್ ಮಾಡಿದ್ರೆ 12 ದಿನಗಳ ಕಾಲ ಬಳಸಬಹುದಾಗಿದೆ. ರಿಯಲ್ ಮೀ ಲಿಂಕ್ ಆ್ಯಪ್ ಮೂಲಕ ಈ ಸ್ಮಾರ್ಟ್ ವಾಚ್ ಅನ್ನು ನಿಯಂತ್ರಣ ಮಾಡಬಹುದಾಗಿದೆ.