ಕೋವಿಡ್-19 ಲಾಕ್ಡೌನ್ನಿಂದಾಗಿ ಜಗತ್ತಿನಾದ್ಯಂತ ಲೈವ್ ವಿಡಿಯೋ ಬಳಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಹೀಗಾಗಿ ಈಗ ಫೇಸ್ಬುಕ್ ತನ್ನ ಬಳಕೆದಾರರಲ್ಲದವರಿಗೂ ಲೈವ್ ಸ್ಟ್ರೀಮ್ ನೋಡುವ ಅವಕಾಶ ಕಲ್ಪಿಸಿದೆ. ಈ ಮುಂಚೆ ಈ ಸೌಲಭ್ಯ ಡೆಸ್ಕ್ಟಾಪ್ಗಳಲ್ಲಿ ಮಾತ್ರ ಲಭ್ಯವಿತ್ತು.
ಫೇಸ್ಬುಕ್ ಅಕೌಂಟ್ ಇಲ್ಲದವರು ಕೂಡ ಫೇಸ್ಬುಕ್ ಲೈವ್ ವಿಡಿಯೋ ವೀಕ್ಷಿಸುವ ಆಪ್ಷನ್ ಈಗಾಗಲೇ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಐಫೋನ್ಗಳಿಗೂ ಈ ಸೌಕರ್ಯ ವಿಸ್ತರಿಸಲಾಗುವುದು.
ಟೋಲ್ ಫ್ರೀ ನಂಬರ್ ಮೂಲಕ ಲೈವ್ ಸ್ಟ್ರೀಮ್ ಆಡಿಯೋ ಆಲಿಸುವ ಸೌಲಭ್ಯ 'ಪಬ್ಲಿಕ್ ಸ್ವಿಚ್ ಟೆಲಿಫೋನ್ ನೆಟ್ವರ್ಕ್' (Public Switch Telephone Network) ಎಂಬ ಹೊಸ ಆಯ್ಕೆಯನ್ನು ಸಹ ಫೇಸ್ಬುಕ್ ಪರಿಚಯಿಸಿದೆ.
ಫೇಸ್ಬುಕ್ ಲೈವ್ 'ಆಡಿಯೋ ಮಾತ್ರ' ಮೋಡ್ನಲ್ಲಿಯೂ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಲಾಕ್ಡೌನ್ನಿಂದಾಗಿ ಕೋಟ್ಯಂತರ ಜನ ಮನೆಯಲ್ಲೇ ಇರುವುದರಿಂದ ಫೇಸ್ಬುಕ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಫೇಸ್ಬುಕ್ ಗ್ರೂಪ್ ವಿಡಿಯೋ ಕಾಲ್ ಮಾಡುವುದು ಶೇ. 70ರಷ್ಟು ಹೆಚ್ಚಳ ಕಂಡಿದ್ದು, ಒಟ್ಟಾರೆಯಾಗಿ ಜನ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ನೋಡುವುದು ಏರಿಕೆಯಾಗಿದೆ.
ವಿಡಿಯೋಗಳಿಂದ ನೆಟ್ವರ್ಕ್ ವೈಫಲ್ಯತೆ ತಪ್ಪಿಸಲು ಭಾರತ ಹಾಗೂ ಲ್ಯಾಟಿನ್ ಅಮೆರಿಕಾಗಳಲ್ಲಿ ಫೇಸ್ಬುಕ್ ತನ್ನ ವಿಡಿಯೋ ಗುಣಮಟ್ಟವನ್ನು ಕಡಿಮೆ ಮಾಡಿದೆ.