ETV Bharat / lifestyle

ಅಪ್ಲಿಕೇಶನ್​ ಡೆವೆಲಪರ್​ಗಳಿಗಾಗಿ ಕಮಿಶನ್​ ದರ ಕಡಿತಗೊಳಿಸಿದ ಗೂಗಲ್​ - ಸಾಫ್ಟ್‌ವೇರ್ ತಯಾರಕ

ದಕ್ಷಿಣ ಕೊರಿಯಾದಲ್ಲಿನ ಎಲ್ಲಾ ಅಪ್ಲಿಕೇಶನ್‌ನಲ್ಲಿನ ಡಿಜಿಟಲ್ ಸರಕುಗಳ ಖರೀದಿಗೆ 30 ಪ್ರತಿಶತದಷ್ಟು ಕಮಿಷನ್​ ವಿಧಿಸುವ ಯೋಜನೆಯನ್ನು ಗೂಗಲ್ ಈ ಹಿಂದೆ ಘೋಷಿಸಿತ್ತು..

google
ಗೂಗಲ್
author img

By

Published : Mar 16, 2021, 7:05 PM IST

ಸಿಯೋಲ್ ​: ಹೆಚ್ಚಿನ ಶುಲ್ಕವಿರುವ ಸಂಬಂಧ ಸಾಫ್ಟ್‌ವೇರ್ ತಯಾರಕರು ನೀಡಿದ ದೂರುಗಳನ್ನು ಅನುಸರಿಸಿ ಟೆಕ್ ದೈತ್ಯ ಗೂಗಲ್ ಅಪ್ಲಿಕೇಶನ್ ಡೆವಲಪರ್‌ಗಳಿಗಾಗಿ ತನ್ನ ಯೋಜಿತ ಕಮಿಷನ್ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ.

1 ಮಿಲಿಯನ್ ಡಾಲರ್​ವರೆಗಿನ ವಾರ್ಷಿಕ ಮಾರಾಟಕ್ಕಾಗಿ ಅಪ್ಲಿಕೇಶನ್‌ಗಳ ಖರೀದಿಯಲ್ಲಿ ಎಲ್ಲಾ ಡೆವಲಪರ್‌ಗಳಿಗೆ ಶೇ.15ರಷ್ಟು ದರ ವಿಧಿಸುವುದಾಗಿ ಗೂಗಲ್ ಹೇಳಿದೆ ಮತ್ತು 1 ಮಿಲಿಯನ್ ಡಾಲರ್​ ಮಾರ್ಕ್‌ಗಳಿಗಿಂತ ಹೆಚ್ಚಿನ ಆದಾಯದಿಂದ 30 ಪ್ರತಿಶತ ಕಮಿಷನ್ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.

ಈ ನಿಯಮವು ಜುಲೈ ತಿಂಗಳಲ್ಲಿ ಜಾರಿಗೆ ಬರಲಿದೆ. ದಕ್ಷಿಣ ಕೊರಿಯಾದಲ್ಲಿನ ಎಲ್ಲಾ ಅಪ್ಲಿಕೇಶನ್‌ನಲ್ಲಿನ ಡಿಜಿಟಲ್ ಸರಕುಗಳ ಖರೀದಿಗೆ 30 ಪ್ರತಿಶತದಷ್ಟು ಕಮಿಷನ್​ ವಿಧಿಸುವ ಯೋಜನೆಯನ್ನು ಗೂಗಲ್ ಈ ಹಿಂದೆ ಘೋಷಿಸಿತ್ತು. ಆದರೆ, ಜನವರಿ 2021ರಿಂದ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಪ್ಲಿಕೇಶನ್ ಖರೀದಿಗೆ ತನ್ನದೇ ಆದ ಪಾವತಿ ವ್ಯವಸ್ಥೆಯನ್ನು ಬಳಸುವುದು ಕಡ್ಡಾಯಗೊಳಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.