ವಾಷಿಂಗ್ಟನ್(ಅಮೆರಿಕ): ಒಂದೇ ವಾರದಲ್ಲಿ ಎರಡನೇ ಬಾರಿಗೆ ಮಾರ್ಕ್ ಜುಕರ್ ಬರ್ಗ್ ಒಡೆತನದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಾರಣದಿಂದ ಫೇಸ್ಬುಕ್ ಕ್ಷಮೆಯಾಚಿಸಿದೆ.
ಸಾಮಾಜಿಕ ಜಾಲತಾಣಗಳು ಸ್ಥಗಿತಗೊಳ್ಳಲು ದೋಷಯುಕ್ತ ಸಂರಚನೆಯೇ ಕಾರಣ ಎಂದು ಫೇಸ್ಬುಕ್ ಸ್ಪಷ್ಟನೆ ನೀಡಿದ್ದು, ಶುಕ್ರವಾರ ಎರಡು ಗಂಟೆಗಳ ಕಾಲ ಸೇವೆಗಳು ಸ್ಥಗಿತವಾದ ಕಾರಣದಿಂದ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದಿದೆ.
ಎಲ್ಲಾ ಸಮಸ್ಯೆಗಳನ್ನು ಈಗ ಪರಿಹರಿಸಲಾಗಿದೆ. ಈ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎಂದು ಫೇಸ್ಬುಕ್ ಹೇಳಿಕೊಂಡಿದೆ. ಈ ಬಾರಿ ಸರ್ವರ್ ಸ್ಥಗಿತಗೊಂಡಾಗ ಇನ್ಸ್ಟಾಗ್ರಾಂನಲ್ಲಿ ಫೀಡ್ ಅನ್ನು ಬಳಕೆದಾರರು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಫೇಸ್ಬುಕ್ ಮೆಸೆಂಜರ್ನಲ್ಲಿ ಸಂದೇಶಗಳನ್ನು ಕಳುಹಿಸಲು ಆಗುತ್ತಿರಲಿಲ್ಲ.
-
We’re so sorry if you weren’t able to access our products during the last couple of hours. We know how much you depend on us to communicate with one another. We fixed the issue — thanks again for your patience this week.
— Facebook (@Facebook) October 8, 2021 " class="align-text-top noRightClick twitterSection" data="
">We’re so sorry if you weren’t able to access our products during the last couple of hours. We know how much you depend on us to communicate with one another. We fixed the issue — thanks again for your patience this week.
— Facebook (@Facebook) October 8, 2021We’re so sorry if you weren’t able to access our products during the last couple of hours. We know how much you depend on us to communicate with one another. We fixed the issue — thanks again for your patience this week.
— Facebook (@Facebook) October 8, 2021
ಇನ್ಸ್ಟಾ, ಮೆಸೆಂಜರ್ಗಳ ಸ್ಥಗಿತಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಳಕೆದಾರರು ಟ್ವಿಟರ್ನಲ್ಲಿ ಮೀಮ್ಸ್ಗಳನ್ನು ಹಂಚಿಕೊಂಡಿದ್ದಾರೆ. ಈ ಮೀಮ್ಸ್ಗಳಿಗೂ ಕೂಡಾ ಇನ್ಸ್ಟಾಗ್ರಾಂ ಧನ್ಯವಾದವನ್ನು ಸಲ್ಲಿಸುವುದಾಗಿ ಹೇಳಿದೆ.
ಇದನ್ನೂ ಓದಿ: ಮತ್ತೊಮ್ಮೆ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾ ಸರ್ವರ್ ಡೌನ್!