ETV Bharat / lifestyle

ಹೊಸ ಫೀಚರ್​ ಪರಿಚಯಿಸಿದ ಫೇಸ್​ಬುಕ್​: ಮೆಸೆಂಜರ್​ ವಿಡಿಯೋ ಕರೆಗಳು ಲೈವ್​ ಆಗಿ ಬದಲಾವಣೆ - ಮೆಸೆಂಜರ್​ ವಿಡಿಯೋ ಕರೆಗಳು ಲೈವ್​ ಆಗಿ ಬದಲಾವಣೆ

ಹೊಸ ಫೀಚರ್​ ಕ್ರಿಯೇಟ್​ ರೂಂ ಮೂಲಕ ಗರಿಷ್ಠ 50 ಜನ ಫೇಸ್​ಬುಕ್​ ಬಳಕೆದಾರರು ಮೆಸೆಂಜರ್​ ವಿಡಿಯೋ ಕರೆಗಳನ್ನು ಫೇಸ್​ಬುಕ್​ ಲೈವ್​ ಆಗಿ ಪರಿವರ್ತಿಸಬಹುದು.

Facebook new feature
ಹೊಸ ಫೀಚರ್​ ಪರಿಚಯಿಸಿದ ಫೇಸ್​ಬುಕ್
author img

By

Published : Jul 26, 2020, 1:09 PM IST

ಸ್ಯಾನ್ ಫ್ರಾನ್ಸಿಸ್ಕೊ: ಮೆಸೆಂಜರ್​ ಗ್ರೂಪ್​ ವಿಡಿಯೋ ಕರೆಗಳು ಫೇಸ್​ಬುಕ್​ ಲೈವ್ ಆಗಿ ಜುಲೈ 24 ರಿಂದ ಕೆಲ ದೇಶಗಳಲ್ಲಿ ಬದಲಾಗಿವೆ.

ಕ್ರಿಯೇಟ್​ ರೂಂ ಎಂಬ ಹೊಸ ಫೀಚರ್​​ನ್ನು ಫೇಸ್​ಬುಕ್​ ಪರಿಚಯಿಸಿದೆ. ಅತೀ ಶೀಘ್ರದಲ್ಲಿ ಎಲ್ಲಾ ದೇಶಗಳಿಗೆ ಇದು ವಿಸ್ತಾರಗೊಳ್ಳಲಿದೆ. ಮೆಸೆಂಜರ್​ ಮೊಬೈಲ್ ಆ್ಯಪ್, ಡೆಸ್ಕ್ ಟಾಪ್​ಗಳಲ್ಲಿ ಇದು ಲಭ್ಯವಾಗಲಿದೆ. ಹೊಸ ಫೀಚರ್​ ಕ್ರಿಯೇಟ್​ ರೂಂ ಮೂಲಕ ನಾವು ಒಂದು ಗ್ರೂಪ್​ ಕ್ರಿಯೇಟ್​ ಮಾಡಿ, ಫ್ರೊಫೈಲ್, ಪೇಜ್​ ಮತ್ತು ಗ್ರೂಪ್​ಗಳಿಗೆ ಬ್ರಾಡ್​ ಕಾಸ್ಟ್​​ ಮಾಡಬಹುದು ಮತ್ತು ಜನರನ್ನು ಆಹ್ವಾನಿಸಬಹುದು ಎಂದು ಫೇಸ್​ ಬುಕ್​ ಹೇಳಿದೆ.

Facebook new feature
ಹೇಗಿದೆ ಹೊಸ ಫೀಚರ್​

ವಾಟ್ಸ್​ ಆ್ಯಪ್​ ಮತ್ತು ಮೆಸೆಂಜರ್​ ನಡುವೆ ಪ್ರತಿ ದಿನ 700 ಮಿಲಿಯನ್​ ಖಾತೆಗಳಿಂದ ಕರೆಗಳು ವಿನಿಮಯ ಆಗುತ್ತವೆ. ಜೂನ್ 2020 ರಿಂದ ಕೆಲ ದೇಶಗಳಲ್ಲಿ ವಾಟ್ಸ್​ ಆ್ಯಪ್​, ಮೆಸೆಂಜರ್ ವಿಡಿಯೋ ಕರೆಗಳು, ಫೇಸ್​ಬುಕ್​, ಇನ್​ಸ್ಟಾಗ್ರಾಂ ಲೈವ್​ ಬ್ರಾಡ್​ ಕಾಸ್ಟ್​, ಮತ್ತು ಪೇಜ್​ ಲೈವ್​ ಬ್ರಾಡ್​ ಕಾಸ್ಟ್​​ಗಳು ಕಳೆದ ವರ್ಷದ ಈ ಸಮಯಕ್ಕಿಂತ ದ್ವಿಗುಣಗೊಂಡಿವೆ. ಮಾರ್ಚ್​ 2020 ರಿಂದ ಲೈವ್​ಗಳು ಹೆಚ್ಚಾಗಳು ಪ್ರಾರಂಭಗೊಂಡಿವೆ ಎಂದು ಫೇಸ್‌ಬುಕ್ ಉತ್ಪನ್ನ ನಿರ್ವಾಹಕ ​ ​ಜಾಸ್ಮಿನ್ ಸ್ಟಾಯ್ ತಿಳಿಸಿದ್ದಾರೆ.

ಮೆಸೆಂಜರ್​ ರೂಂ ಲೈವ್​ ಬ್ರಾಡ್​ ಕಾಸ್ಟ್​ನ ಅಡಿಯೋ, ವಿಡಿಯೋಗಳನ್ನು ಫೇಸ್​ಬುಕ್​ ಸಂಗ್ರಹಿಸಲಿದ್ದು, ತಮ್ಮ ಸಮುದಾಯ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂದು ಪರಿಶೀಲಿಸಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಹೊಸ ಫೀಚರ್​ ಅನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.