ETV Bharat / lifestyle

ಕರ್ವಾ ಚೌತ್​ಗೆ ರಂಗು ತುಂಬುವ ಮೆಹಂದಿ

author img

By

Published : Nov 4, 2020, 4:05 PM IST

ಸಾಂಪ್ರದಾಯಿಕ ಕಲೆಯ ಅತ್ಯಂತ ಹಳೆಯ ರೂಪಗಳಲ್ಲಿ ಒಂದಾದ ಮೆಹಂದಿ ಸಂಸ್ಕೃತ ಪದ 'ಮೆಂಧಿಕಾ' ಅಥವಾ ಗೋರಂಟಿ ಸಸ್ಯದಿಂದ ಬಂದಿದೆ. ಭಾರತೀಯ ಮಹಿಳೆಯರು, ವಿಶೇಷವಾಗಿ ವಿವಾಹಿತ ಮಹಿಳೆಯರು ತಮ್ಮ ಸಿಂಗಾರದ ಭಾಗವಾಗಿ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಗೋರಂಟಿಯನ್ನು ಕೈಗಳಿಗೆ ಹಾಕಿಕೊಳ್ಳುತ್ತಾರೆ.

ಕರ್ವಾ ಚೌತ್​ಗೆ ರಂಗು ತುಂಬುವ ಮೆಹಂದಿಕರ್ವಾ ಚೌತ್​ಗೆ ರಂಗು ತುಂಬುವ ಮೆಹಂದಿ
ಕರ್ವಾ ಚೌತ್​ಗೆ ರಂಗು ತುಂಬುವ ಮೆಹಂದಿ

ಮೆಹಂದಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗಂತೂ ಮದರಂಗಿ ಹಾಕಿಕೊಳ್ಳುವುದೆಂದರೆ ಅಚ್ಚುಮೆಚ್ಚು. ಅದರಲ್ಲೂ ಇದು ಹಬ್ಬಗಳ ಕಾಲ. ಅದರಲ್ಲೂ ಇಂದು ಕರ್ವಾ ಚೌತ್. ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮ. ಈ ಸಡಗರಕ್ಕೆ ರಂಗು ತುಂಬಲು ಗೋರಂಟಿಯನ್ನು ಹಚ್ಚಿಕೊಳ್ಳುತ್ತಾರೆ.

ಭಾರತೀಯ ಮಹಿಳೆಯರು, ವಿಶೇಷವಾಗಿ ವಿವಾಹಿತ ಮಹಿಳೆಯರು ತಮ್ಮ ಸಿಂಗಾರದ ಭಾಗವಾಗಿ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಗೋರಂಟಿಯನ್ನು ಕೈಗಳಿಗೆ ಹಾಕಿಕೊಳ್ಳುತ್ತಾರೆ. ಮೆಹಂದಿ ಭಾರತದಲ್ಲಿ ಆಳವಾದ ಸಾಂಸ್ಕೃತಿಕ ಮೌಲ್ಯವನ್ನು ಹೊಂದಿದೆ. ಅದಕ್ಕಾಗಿಯೇ ಎಲ್ಲಾ ವಯಸ್ಸಿನ ಮಹಿಳೆಯರು ಇದರೊಂದಿಗೆ ಭಾವನಾತ್ಮಕ ಒಡನಾಟವನ್ನು ಹೊಂದಿದ್ದಾರೆ.

ಸಾಂಪ್ರದಾಯಿಕ ಕಲೆಯ ಅತ್ಯಂತ ಹಳೆಯ ರೂಪಗಳಲ್ಲಿ ಒಂದಾದ ಮೆಹಂದಿ ಸಂಸ್ಕೃತ ಪದ 'ಮೆಂಧಿಕಾ' ಅಥವಾ ಗೋರಂಟಿ ಸಸ್ಯದಿಂದ ಬಂದಿದೆ. ಮೆಹಂದಿ ಅದನ್ನು ಸೌಂದರ್ಯವರ್ಧಕವಾಗಿ ಬಳಸುವುದು ವೈದಿಕ ಯುಗದ ಪದ್ಧತಿಯಾಗಿತ್ತು. ಅದನ್ನು ಹೊರತುಪಡಿಸಿ, ಗೋರಂಟಿ ಎಲೆಗಳು ಅದರ ಔಷಧೀಯ ಮೌಲ್ಯಗಳಿಗೆ ಹೆಸರುವಾಸಿ.

ಹಬ್ಬದ ಆಚರಣೆಗಳಲ್ಲಿ ಮೆಹಂದಿ ಬಹಳ ಮುಖ್ಯ ಸ್ಥಾನವನ್ನು ಹೊಂದಿದೆ. ಮಹಿಳೆಯರು ಮದುವೆಯ ಪವಿತ್ರ ಸಂಕೇತವಾಗಿ ಮೆಹಂದಿಯನ್ನು ತಮ್ಮ ಹಾಕಿಕೊಳ್ಳತ್ತಾರೆ. ಸುಂದರವಾದ ಉಡುಪನ್ನು ಧರಿಸುತ್ತಾರೆ ಮತ್ತು ತಮ್ಮ ಗಂಡಂದಿರ ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ.

ಕಾರ್ವಾ ಚೌತ್​ಗೆ ಮಹಿಳೆಯರು ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ. ಈ ದಿನದಂದು ಸುಂದರವಾಗಿ ತಯಾರಾಗುತ್ತಾರೆ. ಮೆಹಂದಿ ಬಿಡಿಸಿಕೊಂಡು, ಮೇಕಪ್​ ಮಾಡಿಕೊಂಡು ತಯಾರಾಗುತ್ತಾರೆ. ಮಹಿಳೆಯರು ಮಾತ್ರವಲ್ಲ ಇಡೀ ಕುಟುಂಬವು ಅದರಲ್ಲಿ ಭಾಗವಹಿಸುವುದನ್ನು ಇಷ್ಟಪಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.