ETV Bharat / jagte-raho

ಕೋಲಿನಿಂದ ಹೊಡೆದು ಪತಿಯನ್ನೇ ಕೊಂದ ಮಹಿಳೆ! - ಪತಿಯನ್ನೇ ಕೊಂದ ಪತ್ನಿ

ಮಹಿಳೆಯೊಬ್ಬಳು ತನ್ನ ಗಂಡನನ್ನು ಕೋಲಿನಿಂದ ಹೊಡೆದು ಕೊಂದಿದ್ದಾಳೆ. ಪತಿ ವಿಚಿತ್ರವಾಗಿ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಪತಿಯನ್ನ ಹೊಡೆದಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರೆ.

Woman murdred her husband
Woman murdred her husband
author img

By

Published : Jul 18, 2020, 8:27 AM IST

Updated : Jul 18, 2020, 2:57 PM IST

ಗೊಡ್ಡಾ (ಜಾರ್ಖಂಡ್): ಜಿಲ್ಲೆಯ ಪೊಡೈಹಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ನವದಿಹಾದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೋಲಿನಿಂದ ಹೊಡೆದು ಕೊಂದಿದ್ದಾಳೆ. ಪತಿ ವಿಚಿತ್ರವಾಗಿ ವರ್ತಿಸುತ್ತಿದ್ದ ಎಂದು ಮಹಿಳೆ ಸಮರ್ಥನೆ ಬೇರೆ ನೀಡಿದ್ದಾಳೆ.

ಕಳೆದ ಕೆಲವು ದಿನಗಳಿಂದ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಮಾನಸಿಕ ಸ್ಥಿತಿ ಸರಿಯಾಗಿರಲಿಲ್ಲ. ಅವರನ್ನು ಗಣಪಡಿಸಲು ಚಿಕಿತ್ಸೆ ನಡೆಯುತ್ತಿತ್ತು. ಆದರೂ ಪತಿ ಮನೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದರು ಎಂದು ಪತ್ನಿ ಸುರ್ಜಮಣಿ ಸೊರೆನ್ ಹೇಳಿದ್ದಾಳೆ. ಮೃತ ಪತಿಯನ್ನು ಫಿಲೆಮನ್ ಬಾಸ್ಕಿ ಎಂದು ಗುರುತಿಸಲಾಗಿದೆ.

ಪತಿ ಹುಚ್ಚನಂತೆ ವರ್ತಿಸುತ್ತಿದ್ದರು. ನನ್ನ ತಲೆಯ ಕೂದಲನ್ನು ಕತ್ತರಿಸಿ ಕೊಡುವಂತೆ ಮತ್ತು ಕೆಲವೊಮ್ಮೆ ಆತ್ಮವನ್ನು ನೀಡುವಂತೆ ಕೇಳುತ್ತಿದ್ದರು ಎಂದು ಸುರ್ಜಮಣಿ ಹೇಳಿದ್ದಾಳೆ.

ಇದರಿಂದ ಬೇಸರಗೊಂಡಿದ್ದ ಆಕೆ ತನ್ನ ಗಂಡನನ್ನು ಕೋಲಿನಿಂದ ಹೊಡೆದಿದ್ದು, ಅದು ಅವರ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Last Updated : Jul 18, 2020, 2:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.