ಮೈಸೂರು: ಕೌಟುಂಬಿಕ ಕಲಹ ಹಾಗೂ ವರದಕ್ಷಿಣೆ ಕಿರುಕುಳದಿಂದ ಮನನೊಂದು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಪಿರಿಯಾಪಟ್ಟಣ ನಿವಾಸಿ ಪ್ರದೀಪ್ ಎಂಬುವರ ಪತ್ನಿ ನಿಶಾ (25) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಬಿಳಿಕೆರೆಯ ನಿವಾಸಿ ನಿಶಾಳನ್ನು ಮೂರು ವರ್ಷಗಳ ಹಿಂದೆ ಪ್ರದೀಪ ಎಂಬಾತನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಮದುವೆ ವೇಳೆ 300 ಗ್ರಾಂ. ಚಿನ್ನ ಹಾಗೂ ನಂತರ 6 ಲಕ್ಷ ರೂ. ಕೊಡಲಾಗಿತ್ತಂತೆ.
![Woman committed suicide from harassment](https://etvbharatimages.akamaized.net/etvbharat/prod-images/kn-mys-04-suicide-vis-ka10003_20082020190059_2008f_1597930259_368.jpg)
ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಇದ್ದರು. ಕೆಲ ತಿಂಗಳ ಬಳಿಕ ಮತ್ತೆ ವರದಕ್ಷಿಣೆ ತರುವಂತೆ ಪತ್ನಿಗೆ ಪತಿ ಪೀಡಿಸುತ್ತಿದ್ದ. ಇದರಿಂದ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಈ ವಿಚಾರವಾಗಿ ಮನನೊಂದಿದ್ದ ನಿಶಾ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.
ಘಟನೆ ಜರುಗುತ್ತಿದ್ದಂತೆ ಮೃತಳ ಗಂಡ, ಅತ್ತೆ, ಮಾವ ತಲೆಮರೆಸಿಕೊಂಡಿದ್ದಾರೆ. ಮೃತಳ ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
![Woman committed suicide from harassment](https://etvbharatimages.akamaized.net/etvbharat/prod-images/kn-mys-04-suicide-vis-ka10003_20082020190059_2008f_1597930259_809.jpg)