ETV Bharat / jagte-raho

ರಸ್ತೆ ಅಪಘಾತದಲ್ಲಿ ಕೇರಳ ದಂಪತಿ ಸಾವು - ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಕೊಲ್ಲಂ ರಸ್ತೆ ಅಪಘಾತ

ಕೇರಳದ ಕೊಲ್ಲಂನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು ಸಾವು-ನೋವಿನ ಮಧ್ಯೆ ಹೋರಾಡುತ್ತಿದ್ದಾಳೆ.

Kerala couple dies in road accident
ರಸ್ತೆ ಅಪಘಾತದಲ್ಲಿ ಕೇರಳ ದಂಪತಿ ಸಾವು
author img

By

Published : Jan 8, 2021, 4:39 PM IST

ಕೊಲ್ಲಂ (ಕೇರಳ): ವೇಗವಾಗಿ ಬಂದ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದಂಪತಿಯು ತಮ್ಮ ಮಗಳೊಂದಿಗೆ ಉಮ್ಮನ್ನೂರ್ ಕಡೆಗೆ ಹೋಗುತ್ತಿದ್ದಾಗ ಕೊಲ್ಲಂನ ಪನವೆಲಿ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದಂಪತಿಯ ಪುತ್ರಿ ಬದುಕುಳಿದಿದ್ದು, ತೀವ್ರವಾಗಿ ಗಾಯಗೊಂಡಿರುವ ಆಕೆಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಆಕೆ ಸಾವು-ನೋವಿನ ಮಧ್ಯೆ ಹೋರಾಡುತ್ತಿದ್ದಾಳೆ.

ಇದನ್ನೂ ಓದಿ: ತಂದೆ ಹತ್ಯೆಗೈದು ವಾರದೊಳಗೆ ಮಗನನ್ನೂ ಕೊಂದ ದುಷ್ಕರ್ಮಿಗಳು; ಬೆಚ್ಚಿಬಿದ್ದ ಮೈಸೂರು

ಮೃತ ದಂಪತಿಯನ್ನು ಪಂಡಲಂ ನಿವಾಸಿಯಾದ ನಜರ್ ಮತ್ತು ಅವರ ಪತ್ನಿ ಸಜೀಲಾ ಎಂದು ಗುರುತಿಸಲಾಗಿದೆ. ಬಸ್​ಗೆ ಗುದ್ದಿದ ವೇಗಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.