ETV Bharat / jagte-raho

ಭದ್ರಾವತಿ ಬಳಿ ಭೀಕರ ರಸ್ತೆ ಅಪಘಾತ: ಅಪ್ಪ-ಅಮ್ಮ, ಮಗ ಸ್ಥಳದಲ್ಲೇ ಸಾವು - ಭದ್ರಾವತಿ ತಾಲೂಕಿನ ಮೂಡಲವಿಠಲಾಪುರ ರಸ್ತೆ ಅಪಘಾತ ನ್ಯೂಸ್​

ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ಮೂಡಲವಿಠಲಾಪುರ ಬಳಿ ಸಂಭವಿಸಿದೆ.

Three died in shivmogga road accident
ಭೀಕರ ರಸ್ತೆ ಅಪಘಾತ
author img

By

Published : Feb 16, 2020, 7:08 PM IST

ಶಿವಮೊಗ್ಗ: ಭದ್ರಾವತಿ ತಾಲೂಕಿನ ಮೂಡಲವಿಠಲಾಪುರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Three died in shivmogga road accident
ಭೀಕರ ರಸ್ತೆ ಅಪಘಾತ

ಹನುಂತಾಪುರದ ವೀರಪ್ಪ (45), ಆಶಾ (34), ಹೇಮಂತ್ (7) ಮೃತರು. ಹನುಮಂತಾಪುರದಿಂದ ವೀರಪ್ಪ ತನ್ನ ಪತ್ನಿ ಹಾಗೂ ಮಗನೊಂದಿಗೆ ಹೊಳೆಹೊನ್ನೂರಿನ ಆಸ್ಪತ್ರೆಗೆ ತೆರಳುವಾಗ ಮದುವೆ ದಿಬ್ಬಣದ ಬಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ.

ಶಿವಮೊಗ್ಗದಲ್ಲಿ ಮದುವೆ ಮುಗಿಸಿಕೊಂಡು ಗುಡುಮಘಟ್ಟಕ್ಕೆ ಬಸ್​ ತೆರಳುತ್ತಿತ್ತು. ಗರ್ಭಿಣಿ ಪತ್ನಿಯನ್ನು ವೀರಪ್ಪ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಎಂದು ಕರೆದೊಯ್ಯುವಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಆಶಾ ಹಾಗೂ ಹೇಮಂತ್ ದೇಹಗಳು ಛಿದ್ರವಾಗಿವೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.