ಮೈಸೂರು: ಜಿಲ್ಲಾ ಪಂಚಾಯತ್ ಅಧ್ಯಕ್ಷನ ಕಾರು ಚಾಲಕನ ಹತ್ಯೆ ಮಾಡಲು ಕಾರಣ ಏನು ಎಂಬುದನ್ನು ಆರೋಪಿ ರವಿ ಹೇಳಿದ್ದಾನೆ.
ಕಾರು ಚಾಲಕ ಸುನೀಲ್, ನನ್ನ ಹೆಂಡತಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ. ಈ ವಿಚಾರ ನನಗೆ ಗೊತ್ತಾದಾಗ ನಾನು ಅವನೊಂದಿಗೆ ಜಗಳ ಮಾಡಿದ್ದೆ. ಆತ ನನ್ನ ಹೆಂಡತಿಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ. ಈ ವಿಚಾರ ಊರಿನಲ್ಲಿ ಪ್ರಚಾರ ಆಗಿ, ನನ್ನ ಮರ್ಯಾದೆ ಹೋಗಿತ್ತು. ಹಾಗಾಗಿ ಸುನೀಲ್ನೊಂದಿಗೆ ಒಂದು ಬಾರಿ ಜಗಳ ಸಹ ಆಗಿತ್ತು. ಆಗ ತಪ್ಪಿಸಿಕೊಂಡಿದ್ದ, ಶನಿವಾರ ಬೇಕರಿಯ ಬಳಿ ಇರುವುದನ್ನು ನೋಡಿ ಆತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದೆ ಎಂದು ಆರೋಪಿ ರವಿ ಪೊಲೀಸರ ಎದುರು ತಪ್ಪಿಕೊಂಡಿದ್ದಾನೆ.
ಸ್ಥಳ ಮಹಜರು:
ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿ ರವಿಯನ್ನು ಬೀಚನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಮಾಡಿದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಿದ್ದು, ಇಂದು ಹುಣಸೂರು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ.