ಕಲಬುರಗಿ: ಆರು ತಿಂಗಳಲ್ಲಿ ನಿವೃತ್ತಿಯಾಗಬೇಕಾದ ಇಳಿವಯಸ್ಸಿನ ಕಾಮುಕ ಶಿಕ್ಷಕನೋರ್ವ ವಿಶೇಷ ತರಗತಿ ತೆಗೆದುಕೊಳ್ಳುವುದಾಗಿ (ಸ್ಪೆಷಲ್ ಕ್ಲಾಸ್) ಹೇಳಿ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸೇಡಂ ತಾಲೂಕಿನ ಬಟಗೇರಾ ಕ್ರಾಸ್ ಸರ್ಕಾರಿ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ಎಂಬಾತ ಇನ್ನೇನು ಆರು ತಿಂಗಳಲ್ಲಿ ನಿವೃತ್ತಿಯಾಗಲಿದ್ದಾರೆ. ಶಾಲಾ ಅವಧಿ ಪೂರ್ಣಗೊಂಡ ನಂತರ ಸ್ಪೆಷಲ್ ಕ್ಲಾಸ್ ಹೆಸರಿನಲ್ಲಿ ಮೊಮ್ಮಕ್ಕಳ ವಯಸ್ಸಿನ ಇಬ್ಬರು ವಿದ್ಯಾರ್ಥಿನಿಯರನ್ನು ತರಗತಿಯಲ್ಲೇ ಉಳಿಸಿಕೊಂಡು ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರ ಪೋಷಕರು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯರನ್ನು ತರಗತಿ ಕೊಠಡಿ ಹೊರಗಡೆ ನಿಲ್ಲಿಸಿ ಒಬ್ಬರ ನಂತರ ಒಬ್ಬರನ್ನು ಒಳಗಡೆ ಕರೆದು ಕಿರುಕುಳ ನೀಡುತ್ತಿದ್ದ ಎಂದು ಸೇಡಂ ಠಾಣೆಯಲ್ಲಿ ವಿದ್ಯಾರ್ಥಿಯನಿರ ಪೋಷಕರು ದೂರಿದ್ದಾರೆ.
ದೂರಿನ ಮೇರೆಗೆ ಪೊಲೀಸರು ಶಿಕ್ಷಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮುದಿ ವಿಕೃತಕಾಮಿ ಕೃತ್ಯವೆಸಗಿದ್ದು, ನಿಜ ಎಂಬಂತೆ ಕಂಡುಬಂದಿದೆ. ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.