ETV Bharat / jagte-raho

ಡ್ರಗ್ಸ್​ ಡೀಲಿಂಗ್​ ಶಂಕೆ: ಮುಂಬೈನಲ್ಲಿ ಬಿಬಿಎಂಪಿ ಕಾರ್ಪೊರೇಟರ್​ ಪುತ್ರನ ವಿಚಾರಣೆ - ಬೆಂಗಳೂರು ಡ್ರಗ್ಸ್​​ ಜಾಲ

ಬಿಬಿಎಂಪಿ ಕಾರ್ಪೊರೇಟರ್​ ಕೇಶವಮೂರ್ತಿ ಅವರ ಪುತ್ರ ಯಶಸ್​ನನ್ನು​ ಇಂದು ಎನ್​ಸಿಬಿ ಅಧಿಕಾರಿಗಳು ಮುಂಬೈನಲ್ಲಿ ವಿಚಾರಣೆ ನಡೆಸಲಿದ್ದಾರೆ. ಡ್ರಗ್ಸ್​ ದಂಧೆ ಶಂಕೆ ಹಿನ್ನೆಲೆ ಯಶಸ್​ ವಿಚಾರಣೆ ನಡೆಯಲಿದೆ.

yashas
ಯಶಸ್​
author img

By

Published : Sep 7, 2020, 9:48 AM IST

ಬೆಂಗಳೂರು: ಕಾರ್ಪೊರೇಟರ್ ಕೇಶವಮೂರ್ತಿ ಅವರ ಮಗ ಯಶಸ್​ನನ್ನು ಮುಂಬೈನಲ್ಲಿ ಎನ್.ಸಿ. ಬಿ ಅಧಿಕಾರಿಗಳು ಬೆಳಗ್ಗೆ 11ಗಂಟೆಗೆ ವಿಚಾರಣೆಗೆ ಒಳಪಡಿಸಲಿದ್ದಾರೆ‌.

ಮಹಾಲಕ್ಷ್ಮಿ ಲೇಔಟ್ ಕಾಂಗ್ರೆಸ್​ ಕಾರ್ಪೊರೇಟರ್ ಕೇಶವಮೂರ್ತಿ ಅವರ ಪುತ್ರ ಯಶಸ್​ಗೆ ಮುಂಬೈ ಡ್ರಗ್ಸ್ ಜಾಲದ ನಂಟು ಶಂಕೆ ಹಿನ್ನೆಲೆ ಎನ್​​ಸಿಬಿ ಸೆಪ್ಟೆಂಬರ್ 2ರಂದು ಯಶಸ್​ಗೆ ನೋಟಿಸ್ ನೀಡಿತ್ತು‌. ನೋಟಿಸ್​ ಬಂದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅವರ ಮನೆ ಮೇಲೆ ಭಾನುವಾರ ಎನ್​ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.

ಕಾರ್ಪೊರೇಟರ್ ಮನೆ ಮೇಲೆ ಎನ್​ಸಿಬಿ ದಿಢೀರ್ ದಾಳಿ: ಕೇಶವಮೂರ್ತಿ ಪುತ್ರನಿಗೆ ನೋಟಿಸ್

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಡ್ರಗ್ಸ್​ ಮಾಫಿಯಾದ ನಂಟು ಇದೆ ಎಂದು ತಿಳಿದು ಬಂದಿತ್ತು. ಈ ಮಾಹಿತಿ ಆಧಾರದ ಮೇರೆಗೆ ಓರ್ವ ವ್ಯಕ್ತಿಯನ್ನ ಬಂಧಿಸಿದಾಗ ಕಾರ್ಪೊರೇಟರ್ ಪುತ್ರ ಯಶಸ್​ ಕೂಡ ಡ್ರಗ್ಸ್​ ಪೆಡ್ಲರ್ ಅನ್ನೋದು ಗೊತ್ತಾಗಿತ್ತು ಎನ್ನಲಾಗ್ತಿದೆ.

ಸದ್ಯ ಯಶಸ್​ ವಿರುದ್ಧ ಎನ್​ಡಿಪಿಎಸ್(ಮಾದಕ ವಸ್ತು ನಿಯಂತ್ರಣ) ಕಾಯ್ದೆಯಡಿ ಮುಂಬೈನಲ್ಲಿ ಇಂದು ವಿಚಾರಣೆಗೆ ಒಳಪಡಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.