ಶಿರಸಿ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ನಗರಸಭೆ ಸದಸ್ಯನ ಮೇಲೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಶಿರಸಿ ನಗರಸಭೆ ವಾರ್ಡ ನಂ. 27 ರ ಸದಸ್ಯ, ಇಲ್ಲಿನ ಕೆ.ಇ.ಬಿ. ಹತ್ತಿರದ ಮಾರುತಿ ಗಲ್ಲಿಯ ಯಶವಂತ ಹನುಂತಪ್ಪ ಮರಾಠೆ (43) ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಶಿರಸಿ ನಗರದ ಸಮೀಪದ ಗ್ರಾಮವೊಂದರ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ, ಮನೆಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿರುವುದಾಗಿ ನೊಂದ ಬಾಲಕಿಯೇ ದೂರು ನೀಡಿದ್ದು, ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮೇ.4 ರಂದು ಮಧ್ಯಾಹ್ನ 2.30 ರಿಂದ 3.30 ರ ವೇಳೆಯಲ್ಲಿ ಬಾಲಕಿಯ ಮನೆಗೆ ಬಂದು ಮದುವೆಯಾಗುವುದಾಗಿ ಪುಸಲಾಯಿಸಿ, ಕೂಗಬೇಡ ಎಂದು ಹೆದರಿಸಿ ಅತ್ಯಾಚಾರ ಮಾಡಿರುವುದಾಗಿ ಬಾಲಕಿ ದೂರು ನೀಡಿದ್ದಾಗಿ ತಿಳಿದು ಬಂದಿದೆ. ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.