ಶಿವಮೊಗ್ಗ: ಎರಡು ಪ್ರತ್ಯೇಕ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು 2,78,050 ಲಕ್ಷ ರೂ. ಹಾಗೂ 13 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಿಷನ್ ಕಾಂಪೌಂಡ್ ನಲ್ಲಿ ಇಸ್ಪೀಟ್ ಆಡುವಾಗ ಸಿಪಿಐ ವಸಂತ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ, 26.500 ರೂ.ಗಳನ್ನು ಹಾಗೂ 6 ಜನರನ್ನ ವಶಕ್ಕೆ ಪಡೆದಿದ್ದಾರೆ.
ಅದೇ ರೀತಿ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಟೋ ಕಾಂಪ್ಲೆಕ್ಸ್ ನ ಶ್ರೀರಂಗ ಬಿಲ್ಡಿಂಗ್ ಇಸ್ಪೀಟ್ ಅಡ್ಡೆ ಮೇಲೆ ವಿನೋಬನಗರ ಪಿಎಸ್ಐ ಉಮೇಶ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ, 2,51,550 ರೂ.ಗಳನ್ನು ಹಾಗೂ 7 ಜನರನ್ನು ವಶಕ್ಕೆ ಪಡೆಯಲಾಗಿದೆ.