ಶಿವಮೊಗ್ಗ: ಖತರ್ನಾಕ್ ಮನೆಗಳ್ಳನೋರ್ವನನ್ನು ಭದ್ರಾವತಿ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ 6.24 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವೆಂಕಟೇಶ್ ಅಲಿಯಾಸ್ ಕೆಮ್ಮಣ್ಣುಗುಂಡಿ (44) ಬಂಧಿತ ಆರೋಪಿ. ಈತ ಭದ್ರಾವತಿ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದ ಮನೆಗಳಲ್ಲಿ ಕಳ್ಳತನ ಮಾಡಿದ್ದ. ಕಳೆದ ಎರಡು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದನು.
ಕಾರ್ಯಾಚರಣೆ ವೇಳೆ ಭದ್ರಾವತಿ ನಗರ ಸಿಪಿಐ ರಾಘವೇಂದ್ರ, ಸಿಬ್ಬಂದಿ ಸುನೀಲ್, ಪಾಲಾಕ್ಷ ಹಾಗೂ ಹಾಲೇಶ್ ಸೇರಿದಂತೆ ಇತರರು ಭಾಗಿಯಾಗಿದ್ದರು.