ಬೆಂಗಳೂರು: ಪೋಕರ್ ಗೇಮ್ ಎಂಬ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಿತೇಂದ್ರಕುಮಾರ್ ಅಲಿಯಾಸ್ ಜವಾಹರಲಾಲ್ ಬಂಧಿತ ಆರೋಪಿ. ಶೇಷಾದ್ರಿಪುರಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮೊಬೈಲ್ ಫೋನಿನಲ್ಲಿ ಗ್ರೂಪ್ ಮಾಡಿ ಹಣ ಕಟ್ಟಿಸಿಕೊಂಡು ಜೂಜಾಟವಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕೇಂದ್ರ ಅಪರಾಧ ವಿಭಾಗದ ತಂಡ ದಾಳಿ ಮಾಡಿ ಆರೋಪಿಯಿಂದ ನಗದು, ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಏನಿದು ಪೋಕರ್ ಗೇಮ್:
ಇದು ಆನ್ಲೈನ್ ಗೇಮ್ ಆಗಿದ್ದು ಇದರಲ್ಲಿ ನಾಲ್ಕೈದು ಯುವಕರು ಮೊಬೈಲ್ನಲ್ಲಿ ಗ್ರೂಪ್ ಮಾಡಿ ಹಣ ಕಟ್ಟಿಕೊಂಡು ಅನಧಿಕೃತವಾಗಿ ಆಟವಾಡುತ್ತಿದ್ರು. ಸದ್ಯ ಆರೋಪಿಗಳ ಮಾಹಿತಿ ಪಡೆದು ಬಂಧಿಸಲಾಗಿದೆ.