ನವದೆಹಲಿ : ಛತ್ತೀಸ್ಗಢದ ಬಿಜೆಪಿ ಶಾಸಕ ಭೀಮಾ ಮಾಂಡವಿಯ ಕೊಲೆ ಪ್ರಕರಣ ಸಂಬಂಧ 33 ನಕ್ಸಲರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಿಳಿಸಿದೆ.
2019ರ ಏಪ್ರಿಲ್ನಲ್ಲಿ ದಂತೇವಾಡ ಜಿಲ್ಲೆಯ ಶ್ಯಾಮಗಿರಿ ಗ್ರಾಮದಲ್ಲಿ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಅಂದಿನ ದಂತೇವಾಡ ಶಾಸಕ ಭೀಮಾ ಮಾಂಡವಿ ಹಾಗೂ ಛತ್ತೀಸ್ಗಢ ಸೇನಾ ಪಡೆಯ (CAF) ನಾಲ್ವರು ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು. ಅಲ್ಲದೇ ಮೃತ ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ನಕ್ಸಲರು ಲೂಟಿ ಮಾಡಿದ್ದರು.
ಪ್ರಕರಣದ ಐವರು ಆರೋಪಿಗಳನ್ನ ಈಗಾಗಲೇ ಹತ್ಯೆ ಮಾಡಲಾಗಿದ್ದು, 22 ಮಂದಿ ಪರಾರಿಯಾಗಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಪ್ರಕರಣದ ತನಿಖೆ ವಹಿಸಿಕೊಂಡ ಎನ್‌ಐಎ ಇದೀಗ ಆರು ಮಂದಿಯನ್ನು ಬಂಧಿಸಿದೆ. ಜಗದಲ್ಪುರ್ ಕೋರ್ಟ್ನಲ್ಲಿ 33 ನಕ್ಸಲರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ.