ETV Bharat / jagte-raho

ಮನುಕುಲದ ಅಂಧಃಪತನ: ಚಿಕ್ಕಪ್ಪನಿಂದಲೇ ಗರ್ಭಿಣಿಯಾದ 12 ವರ್ಷದ ಬಾಲಕಿ! - ಜೈಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರ

ಜೋಟ್ವಾರಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಚಿಕ್ಕಪನೇ ಅತ್ಯಾಚಾರವೆಸಗಿದ ಗಂಭೀರ ಘಟನೆಯ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕಿಗೆ ನವೆಂಬರ್ 21 ರಂದು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಕರೆದೊಯ್ದು ತಪಾಸಣೆ ನಡೆಸಿದ ನಂತರ ಸೋನೋಗ್ರಫಿ ಮಾಡಲಾಯಿತು. ಆಗ ಬಾಲಕಿ 19 ವಾರಗಳ ಗರ್ಭಿಣಿ ಎಂಬುದನ್ನು ವೈದ್ಯರು ಬಹಿರಂಗಪಡಿಸಿದರು.

girl
ಅತ್ಯಾಚಾರ
author img

By

Published : Nov 24, 2020, 10:06 AM IST

Updated : Nov 24, 2020, 1:31 PM IST

ಜೈಪುರ: ರಾಜಸ್ಥಾನ ರಾಜಧಾನಿಯಲ್ಲಿ ಮುಜುಗರಕ್ಕೀಡಾಗುವಂತಹ ಪ್ರಕರಣ ಬೆಳಕಿಗೆ ಬಂದಿದೆ. 12 ವರ್ಷದ ಬಾಲಕಿಯ ಮೇಲೆ ಆಕೆಯ ಚಿಕ್ಕಪ್ಪನೇ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಜೈಪುರ ಪೊಲೀಸರ ನಿರ್ಲಕ್ಷ್ಯ ಕೂಡ ಇಡೀ ಪ್ರಕರಣದಲ್ಲಿ ಎದ್ದು ಕಾಣುತ್ತದೆ. ಸಂತ್ರಸ್ತೆ ಬಾಲಕಿಗೆ ಎರಡು ದಿನಗಳ ವೈದ್ಯಕೀಯ ಚಿಕಿತ್ಸೆಯ ನಂತರವೂ ಪೊಲೀಸರು ತಕ್ಷಣವೇ ಸ್ಪಂದಿಸಿಲಿಲ್ಲ ಎಂಬ ದೂರು ಸಹ ಕೇಳಿಬಂದಿದೆ.

ಜೋಟ್ವಾರಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಚಿಕ್ಕಪನ್ನೇ ಅತ್ಯಾಚಾರ ಎಸಗಿದ ಗಂಭೀರ ಘಟನೆಯ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕಿಗೆ ನವೆಂಬರ್ 21 ರಂದು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಕರೆದೊಯ್ದು ತಪಾಸಣೆ ನಡೆಸಿದ ನಂತರ ಸೋನೋಗ್ರಫಿ ಮಾಡಲಾಯಿತು. ಆಗ ಬಾಲಕಿ 19 ವಾರಗಳ ಗರ್ಭಿಣಿ ಎಂಬುದನ್ನು ವೈದ್ಯರು ಬಹಿರಂಗಪಡಿಸಿದರು.

ಎರಡನೇ ಮದುವೆ... ಅತ್ತೆ, ಹೆಂಡ್ತಿ, ಮಕ್ಕಳು ಆತ್ಮಹತ್ಯೆ!

ಸಂತ್ರಸ್ತೆಯನ್ನು ವಿಚಾರಿಸಿದ ನಂತರ, 5 ತಿಂಗಳ ಹಿಂದೆ ಚಿಕ್ಕಪ್ಪ ಚುಚ್ಚುಮದ್ದಿನ ನೆಪದಲ್ಲಿ ಮತ್ತು ಬರುವ ಔಷಧಿ ನೀಡಿ ಪ್ರಜ್ಞಾಹೀನಳನ್ನಾಗಿ ಮಾಡಿ ಅತ್ಯಾಚಾರ ಎಸಗಿದ್ದ ಎಂಬುದು ತಿಳಿದುಬಂದಿದೆ.

ಬಾಲಕಿ ಪ್ರಜ್ಞಾಹೀನ ಸ್ಥಿತಿಯ ನಂತರ ಪ್ರಜ್ಞೆ ಬಂದಾಗ ಅತ್ಯಾಚಾರಿ ಚಿಕ್ಕಪ್ಪ, ಅತ್ಯಾಚಾರದ ಬಗ್ಗೆ ಎಲ್ಲಿಯಾದರೂ ಬಾಯಿ ಬಿಟ್ಟರೆ ನಿನ್ನನ್ನು ಮತ್ತು ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಬೆದರಿಕೆಗೆ ಹೆದರಿದ ಹುಡುಗಿ ಅತ್ಯಾಚಾರದ ಬಗ್ಗೆ ಯಾರಿಗೂ ಹೇಳಲಿಲ್ಲ. ಹೊಟ್ಟೆನೋವಿನ ಬಗ್ಗೆ ದೂರು ನೀಡಿದ ನಂತರ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯ ಬಹಿರಂಗವಾದ ಕೂಡಲೇ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎರಡು ದಿನಗಳ ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Nov 24, 2020, 1:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.