ETV Bharat / jagte-raho

ಹುಡುಗಿ ವಿಷಯದಲ್ಲಿ ಪ್ರಾಣ ಸ್ನೇಹಿತನ ಜೀವ ತೆಗೆದ ವ್ಯಕ್ತಿ - ಸ್ನೇಹಿತನ ಕೊಲೆ

ತಾನು ಪ್ರೀತಿಸುತ್ತಿರುವ ಹುಡುಗಿಯನ್ನ ಮದುವೆಯಾಗಲು ಹೊರಟಿರುವ ಸ್ನೇಹಿತನನ್ನೇ ವ್ಯಕ್ತಿಯೊಬ್ಬ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಹುಡುಗಿಯ ವಿಷಯದಲ್ಲಿ ಪ್ರಾಣ ಸ್ನೇಹಿತನ ಪ್ರಾಣ ತೆಗೆದ ವ್ಯಕ್ತಿ man kills his friend ಕಲಬುರಗಿ ಸುದ್ದಿ kalaburgi news ಸ್ನೇಹಿತನ ಕೊಲೆ murder of friend
ಹುಡುಗಿ ವಿಷಯದಲ್ಲಿ ಪ್ರಾಣ ಸ್ನೇಹಿತನ ಜೀವ ತೆಗೆದ ವ್ಯಕ್ತಿ
author img

By

Published : Jun 12, 2020, 10:53 AM IST

Updated : Jun 12, 2020, 11:08 AM IST

ಕಲಬುರಗಿ: ಪ್ರೀತಿಗಾಗಿ ತನ್ನ ಆತ್ಮೀಯ ಸ್ನೇಹಿತನನ್ನೇ ಕೊಂದ ಪೈಶಾಚಿಕ ಕೃತ್ಯವೊಂದು ಅಫಜಲಪುರ್ ತಾಲೂಕು ಆತನೂರು ಗ್ರಾಮದಲ್ಲಿ ನಡೆದಿದೆ. ತಾನು ಪ್ರೀತಿಸಿದಾಕೆಯನ್ನು ಮದುವೆಯಾಗುತ್ತಿದ್ದಾನೆಂದು ಆರೋಪಿ ಮಲ್ಲು ಪೂಜಾರಿ ಎಂಬಾತ ತನ್ನ ಆತ್ಮೀಯ ಸ್ನೇಹಿತ ಶಿವಕುಮಾರ ಸಾಳುಂಕೆ (24) ಎಂಬಾತನ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಪ್ರಾಣ ಸ್ನೇಹಿತನ ಪ್ರಾಣ ತೆಗೆದ ವ್ಯಕ್ತಿ

ಎರಡು ದಿನಗಳ ಹಿಂದೆ ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕನೂರು ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಕೊಲೆ ನಡೆದಿತ್ತು. ಕೊಲೆ ಪ್ರಕರಣ ಭೇದಿಸಲು ಹೊರಟ ವಾಡಿ ಪೊಲೀಸರಿಗೆ, ರೇವೂರ ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬ ಕಿಡ್ನಾಪ್ ಆಗಿರುವ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.

ತನಿಖೆ ಚುರುಕುಗೊಳಿಸಿದಾಗ ಕಿಡ್ನಾಪ್ ಆಗಿದ್ದ ಶಿವಕುಮಾರ ಸಾಳುಂಕೆ ಕೊಲೆಯೇ ಸಂಕನೂರದಲ್ಲಿ ನಡೆದಿರುವುದು ತಿಳಿದು ಬಂದಿತ್ತು. ಬಳಿಕ ರೇವೂರ್ ಠಾಣೆಯ ಪೊಲೀಸರು ಅನುಮಾನದ ಮೇಲೆ ಮಲ್ಲು ಪೂಜಾರಿಯನ್ನು ತನಿಖೆಗೆ ಒಳಪಡಿಸಿದ್ದಾರೆ‌. ಆಗ ಮಲ್ಲು ಪೂಜಾರಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಎಸ್ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.

ದೇವಲ ಗಾಣಗಾಪೂರದಲ್ಲಿ ಗ್ಯಾರೇಜ್ ಕೆಲಸ ಮಾಡುತ್ತಿದ್ದ ಮಲ್ಲು ಪೂಜಾರಿ ಹಾಗೂ ಇಲ್ಲಿಯೆ ವೇಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ ಇಬ್ಬರೂ ಸುಮಾರು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು‌. ಆದರೆ ಇತ್ತಿಚಿಗೆ ಇಬ್ಬರ ನಡುವೆ ಹುಡುಗಿಯ ವಿಷಯದಲ್ಲಿ ಗಲಾಟೆ ನಡೆದಿತ್ತು. ಎರಡು ತಿಂಗಳ ಹಿಂದೆಯಷ್ಟೇ ತನ್ನ ಸೋದರ ಮಾವನ ಮಗಳ ಜೊತೆ ಶಿವಕುಮಾರನ ನಿಶ್ಚಿತಾರ್ಥವಾಗಿತ್ತು. ಜೂನ್ 15ರಂದು ಮದುವೆ ಕೂಡ ಫಿಕ್ಸ್ ಆಗಿತ್ತು.

ಆದರೆ, ಅದೇ ಹುಡುಗಿಯನ್ನು ಆರೋಪಿ ಮಲ್ಲು ಪೂಜಾರಿ ಕೂಡ ಪ್ರೀತಿ ಮಾಡುತ್ತಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಮದುವೆ ಕ್ಯಾನ್ಸಲ್ ಮಾಡಿಕೋ ಎಂದು ಶಿವಕುಮಾರನ ಮೇಲೆ ಮಲ್ಲು ಒತ್ತಡ ಹಾಕಿದ್ದಾನೆ. ಆದರೆ ಇದಕ್ಕೆ ಒಪ್ಪದ ಶಿವಕುಮಾರ ಕೊಲೆ ಮಾಡುವ ಪ್ಲಾನ್ ಹಾಕಿಕೊಂಡು ಜೂನ್ 7ರಂದು ತನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ.

ಚೌಡಾಪುರದಲ್ಲಿ ಮದ್ಯ ಖರೀದಿಸಿ ಚಿತ್ತಾಪುರ, ಯಾದಗಿರಿ ಸೇರಿದಂತೆ ಇತರಡೆ ಸುತ್ತಾಡಿದ ಬಳಿಕ ವಾಡಿ ಬಳಿಯ ಸಂಕನೂರು ಗುಡ್ಡಗಾಡು ಪ್ರದೇಶದಲ್ಲಿ ಇಬ್ಬರು ಸೇರಿ ಮಧ್ಯ ಸೇವನೆ ಮಾಡಿದ್ದಾರೆ. ಕುಡಿದ ನಶೆಯಲ್ಲಿದ್ದ ಶಿವಕುಮಾರ್ ತಲೆ ಮೇಲೆ ಸೈಜುಗಲ್ಲು ಹಾಕಿ ಮಲ್ಲು ಪೂಜಾರಿ ಕೊಲೆ ಮಾಡಿದ್ದಾನೆ.

ಮೇಲ್ನೋಟಕ್ಕೆ ಹುಡುಗಿಯ ಪಾತ್ರ ಏನು ಎಂಬುದು ಕಂಡುಬಂದಿಲ್ಲ, ಆದರೂ ಎಲ್ಲ ದೃಷ್ಟಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ. ಹುಡುಗಿಯ ವಿಷಯವಾಗಿ ಸುಮಾರು ವರ್ಷಗಳಿಂದ ತನ್ನ ಪ್ರಾಣ ಸ್ನೇಹಿತನಾಗಿದ್ದ ಶಿವಕುಮಾರ್‌ ಪ್ರಾಣ ತೆಗೆದು ಮಲ್ಲು ಪೂಜಾರಿ ಜೈಲು ಸೇರಿದ್ದಾನೆ. ರೇವೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 12, 2020, 11:08 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.